‘ಕೌನ್ ಬನೇಗಾ ಕರೋಡ್​​ಪತಿ’ಯಲ್ಲಿ ಹಣ ಗೆದ್ದು ದೊಡ್ಡ ಸಾಲ ತೀರಿಸಿದ ಉದ್ಯಮಿ

ಕೆಬಿಸಿ 18ರ ಸ್ಪರ್ಧಿ ಸಾಂಗ್ಲಿಯ ಸಲೀಂ ಮೇಸ್ತ್ರಿ 25 ಲಕ್ಷ ರೂಪಾಯಿ ಗೆದ್ದು ಗಮನ ಸೆಳೆದಿದ್ದಾರೆ. ಪತ್ನಿಯ ಅನಾರೋಗ್ಯ, 14 ಲಕ್ಷ ರೂಪಾಯಿ ಸಾಲದ ಕಷ್ಟಗಳ ನಡುವೆಯೂ ಅವರು ಕೆಬಿಸಿಯಲ್ಲಿ ಸಾಹಸ ಮೆರೆದಿದ್ದಾರೆ. ಬಾಬ್ ಡಿಲನ್ ಪ್ರಶ್ನೆಗೆ ಆಟ ತೊರೆದರೂ, ಈ ಗೆಲುವಿನ ಹಣವು ಅವರ ಕುಟುಂಬದ ಕಣ್ಣೀರು ಒರೆಸಲು ನೆರವಾಗಲಿದೆ.

ಕೌನ್ ಬನೇಗಾ ಕರೋಡ್​​ಪತಿ’ಯಲ್ಲಿ ಹಣ ಗೆದ್ದು ದೊಡ್ಡ ಸಾಲ ತೀರಿಸಿದ ಉದ್ಯಮಿ
ಕೌನ್​ ಬನೇಗಾ ಕರೋಡ್ಪತಿ
Edited By:

Updated on: Sep 17, 2026 | 7:56 AM

ಮುಖ್ಯಾಂಶಗಳು

  • ಪತ್ನಿಯ ಚಿಕಿತ್ಸೆಗೆ ಮನೆ ಮಾರಿದ್ದ ಸಲೀಂ
  • ಕೆಬಿಸಿಯಲ್ಲಿ ಬದಲಾಯಿತು ಬದುಕು
  • ಬಾಬ್ ಡಿಲನ್ ಕುರಿತ 50 ಲಕ್ಷ ರೂಪಾಯಿ ಪ್ರಶ್ನೆ 

ಅಮಿತಾಭ್ ಬಚ್ಚನ್ ನಿರೂಪಣೆಯ ‘ಕೌನ್ ಬನೇಗಾ ಕರೋಡ್​​ಪತಿ 18’ ಶೋನಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸಲೀಂ ಮೇಸ್ತ್ರಿ 25 ಲಕ್ಷ ರೂಪಾಯಿ ಗೆದ್ದಿದ್ದಾರೆ. ಚಿಪ್ಸ್ ಮತ್ತು ವೇಫರ್ಸ್ ಉದ್ಯಮ ನಡೆಸುವ ಸಲೀಂ ಅವರ ಬದುಕು ಅತ್ಯಂತ ನೋವಿನಿಂದ ಕೂಡಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಸಲೀಂ, ತಮ್ಮ ಧೈರ್ಯ ಮತ್ತು ಜ್ಞಾನದಿಂದ ಕೆಬಿಸಿ ವೇದಿಕೆಯಲ್ಲಿ ಕೋಟಿ ಗೆಲ್ಲುವ ಕನಸಿನತ್ತ ಸಾಗಿದ್ದರು.

ತಮ್ಮ ಪತ್ನಿಯ ಗಂಭೀರ ಅನಾರೋಗ್ಯದ ಕಾರಣ ಸಲೀಂ ತೀವ್ರ ಹಣಕಾಸಿನ ಸಂಕಷ್ಟ ಎದುರಿಸುತ್ತಿದ್ದರು. ಪತ್ನಿಯ ವೈದ್ಯಕೀಯ ವೆಚ್ಚಕ್ಕಾಗಿ ಅವರು ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಬೇಕಾಯಿತು. ಕ್ಯಾಂಟೀನ್ ಉದ್ಯಮವೂ ಕೈತಪ್ಪಿ ಹೋಯಿತು. ಸಾಲದ ಹೊರೆ ಹೆಗಲೇರಿದಾಗ, ಅವರು ಮನೆಯಿಂದಲೇ ಸಣ್ಣ ಆಹಾರ ಪದಾರ್ಥಗಳ ವ್ಯಾಪಾರ ಆರಂಭಿಸಿದರು. ಪ್ರೀತಿಯ ಪತ್ನಿಯ ಆರೈಕೆ ಮಾಡುತ್ತಲೇ ಜೀವನ ಸಾಗಿಸುತ್ತಿದ್ದರು.

ಸಲೀಂ ಪ್ರಸ್ತುತ 14 ಲಕ್ಷ ರೂಪಾಯಿ ಸಾಲದ ಸುಳಿಯಲ್ಲಿದ್ದಾರೆ. ತಿಂಗಳಿಗೆ ಕೇವಲ 25,000 ರೂಪಾಯಿ ಆದಾಯ ಗಳಿಸುತ್ತಿದ್ದರು. ಅದರಲ್ಲಿ 13,000 ರೂಪಾಯಿ ಪತ್ನಿಯ ಚಿಕಿತ್ಸೆಗೆ ಖರ್ಚಾಗುತ್ತಿತ್ತು. ಇದರಿಂದಾಗಿ ಕಳೆದ 10 ವರ್ಷಗಳಿಂದ ಅವರ ಕುಟುಂಬ ಈದ್ ಹಬ್ಬವನ್ನೂ ಆಚರಿಸಿರಲಿಲ್ಲ. ಆದರೆ ಕೆಬಿಸಿಯಲ್ಲಿ ಗೆದ್ದ 25 ಲಕ್ಷ ರೂಪಾಯಿ ಹಣವು, ಅವರ ದೊಡ್ಡ ಸಾಲವನ್ನು ತೀರಿಸಲು ಸಹಕಾರಿಯಾಗಲಿದೆ.

ಆಟದ ವೇಳೆ ಸಲೀಂ 50 ಲಕ್ಷ ರೂಪಾಯಿಯ 14ನೇ ಪ್ರಶ್ನೆಯ ಹಂತ ತಲುಪಿದರು. ಅಮೆರಿಕದ ಪ್ರಸಿದ್ಧ ಗಾಯಕ ಬಾಬ್ ಡಿಲನ್ ಅವರ ಆಲ್ಬಂ ಮುಖಪುಟದಲ್ಲಿದ್ದ ಭಾರತೀಯ ಗಾಯಕ ಯಾರು ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಸರಿಯಾದ ಉತ್ತರ ‘ಪೂರ್ಣದಾಸ್ ಬೌಲ್’. ಆದರೆ ಸಲೀಂ ಅವರಿಗೆ ಉತ್ತರ ಖಚಿತವಿಲ್ಲದ ಕಾರಣ, ಆಟದಿಂದ ಹೊರನಡೆಯಲು ತೀರ್ಮಾನಿಸಿದರು.

ಇದನ್ನೂ ಓದಿ: ಅಭಿಷೇಕ್ ಅಭ್ಯಾಸ ವಿಚಿತ್ರ; ಮಗನ ರಹಸ್ಯ ಬಿಚ್ಚಿಟ್ಟ ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ ಅವರು ಸಲೀಂ ಅವರ ಸಾಹಸಮಯ ಬದುಕಿಗೆ ಶುಭ ಹಾರೈಸಿದರು. 25 ಲಕ್ಷ ರೂಪಾಯಿ ಚೆಕ್‌ನೊಂದಿಗೆ ಸಲೀಂ ಸಂತಸದಿಂದ ಮನೆಗೆ ಮರಳಿದರು. ಸಂಕಷ್ಟದ ನಡುವೆಯೂ ಸಲೀಂ ಪತ್ನಿಗೆ ನೀಡಿದ ಪ್ರೀತಿ ಮತ್ತು ಕಾಳಜಿ ಪ್ರೇಕ್ಷಕರ ಮನ ಗೆದ್ದಿದೆ. ಈ ಗೆಲುವು ಅವರ ಕುಟುಂಬದ ಕಷ್ಟದ ದಿನಗಳನ್ನು ಕೊನೆಗಾಣಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us