AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್ ಅಭ್ಯಾಸ ವಿಚಿತ್ರ; ಮಗನ ರಹಸ್ಯ ಬಿಚ್ಚಿಟ್ಟ ಅಮಿತಾಭ್ ಬಚ್ಚನ್

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿ ವೇದಿಕೆಯಲ್ಲಿ ಮಗ ಅಭಿಷೇಕ್ ಬಚ್ಚನ್ ಅವರ ವಿಚಿತ್ರ ಅಭ್ಯಾಸವೊಂದನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ತಂದೆ ಹರಿವಂಶ್ ರಾಯ್ ಕವಿತೆ ನೆನೆದು ಭಾವುಕರಾದ ಅಮಿತಾಬ್, ತಮ್ಮ ಐಎಫ್‌ಎಸ್ ಅಧಿಕಾರಿಯಾಗುವ ಹಳೆಯ ಕನಸಿನ ಬಗ್ಗೆಯೂ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಅಭಿಷೇಕ್ ಅಭ್ಯಾಸ ವಿಚಿತ್ರ; ಮಗನ ರಹಸ್ಯ ಬಿಚ್ಚಿಟ್ಟ ಅಮಿತಾಭ್ ಬಚ್ಚನ್
ಅಭಿಷೇಕ್-ಅಮಿತಾಭ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 01, 2026 | 8:20 AM

Share

ಮುಖ್ಯಾಂಶಗಳು

  • ಅಭಿಷೇಕ್ ಬಚ್ಚನ್ ವಿಚಿತ್ರ ಅಭ್ಯಾಸ
  • ತಂದೆಯ ಕವಿತೆಗೆ ಭಾವುಕರಾದ ಬಿಗ್ ಬಿ
  • ಅಮಿತಾಭ್ ಬಚ್ಚನ್ ಐಎಫ್‌ಎಸ್ ಕನಸು

ಬಾಲಿವುಡ್‌ನ ‘ಶಹೆನ್‌ಶಾ’ ಅಮಿತಾಭ್ ಬಚ್ಚನ್‌ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ನಟನೆ ಮಾತ್ರವಲ್ಲದೆ, ಖಾಸಗಿ ಜೀವನ, ಅಭ್ಯಾಸಗಳು ಮತ್ತು ಕುಟುಂಬದ ಕುತೂಹಲಕಾರಿ ಕಥೆಗಳನ್ನು ತಿಳಿಯಲು ಜನ ಸದಾ ಕಾತುರರಾಗಿರುತ್ತಾರೆ. ಬಿಗ್ ಬಿ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ತಂದೆ-ಮಗನಿಗಿಂತ ಹೆಚ್ಚಾಗಿ ಉತ್ತಮ ಸ್ನೇಹಿತರಂತೆ ಇರುತ್ತಾರೆ. ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್‌ಪತಿ’ (KBC) ಕಾರ್ಯಕ್ರಮದಲ್ಲಿ ಅಮಿತಾಬ್, ಅಭಿಷೇಕ್ ಕುರಿತಾದ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕೆಬಿಸಿ ಶೋನಲ್ಲಿ ಸ್ಪರ್ಧಿಯೊಬ್ಬರು ತಂದೆ-ಮಗನ ಆತ್ಮೀಯ ಸಂಬಂಧದ ಬಗ್ಗೆ ಮಾತನಾಡಿದರು. ಇದಕ್ಕೆ ಸ್ಪಂದಿಸಿದ ಅಮಿತಾಭ್, ಅಭಿಷೇಕ್ ನನ್ನ ಒಳ್ಳೆಯ ಸ್ನೇಹಿತ ಎಂದರು. ಇದೇ ವೇಳೆ ಮಗನ ವಿಚಿತ್ರ ಅಭ್ಯಾಸವೊಂದನ್ನು ತಮಾಷೆಯಾಗಿ ಬಹಿರಂಗಪಡಿಸಿದರು. ಮನೆಯಲ್ಲಿ ಎಲ್ಲರೂ ಹಣ್ಣುಗಳನ್ನು ತಿನ್ನುತ್ತಾರೆ, ಆದರೆ ಅಭಿಷೇಕ್ ಮಾತ್ರ ಎಂದಿಗೂ ಹಣ್ಣುಗಳನ್ನು ತಿನ್ನುವುದಿಲ್ಲ ಎಂದು ಬಿಗ್ ಬಿ ದೂರಿಕೊಂಡರು.

ಇನ್ನು ಹಾಲಿನ ಉತ್ಪನ್ನಗಳ ವಿಷಯ ಬಂದಾಗಲೂ ಅಭಿಷೇಕ್ ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಆದರೆ ಹಣ್ಣುಗಳ ವಿಷಯದಲ್ಲಂತೂ ಅವರು ಸಂಪೂರ್ಣ ದೂರ ಉಳಿಯುತ್ತಾರೆ ಎಂದು ಅಮಿತಾಭ್ ಹೇಳಿದರು. ತಂದೆಯ ಈ ತಮಾಷೆಯ ಮಾತನ್ನು ಕೇಳಿ ಶೋನಲ್ಲಿದ್ದ ಪ್ರೇಕ್ಷಕರು ನಕ್ಕು ನಲಿದರು.

ಕಾರ್ಯಕ್ರಮದಲ್ಲಿ ಮೋಜಿನ ಸಂಭಾಷಣೆಯ ಜೊತೆಗೆ ಕೊಂಚ ಭಾವನಾತ್ಮಕ ಕ್ಷಣಗಳೂ ಎದುರಾದವು. ಅಮಿತಾಬ್ ತಮ್ಮ ತಂದೆ, ಹಿರಿಯ ಕವಿ ಹರಿವಂಶ್ ರಾಯ್ ಬಚ್ಚನ್ ಅವರ ಕವಿತೆಯನ್ನು ನೆನಪಿಸಿಕೊಂಡರು. ತಂದೆ-ಮಗನ ಬಾಂಧವ್ಯ ಮತ್ತು ಪೀಳಿಗೆಯಿಂದ ಪೀಳಿಗೆಗೆ ಸಾಗುವ ಚಿಂತನೆಗಳ ಕುರಿತಾದ ಈ ಕವಿತೆ ಪ್ರೇಕ್ಷಕರ ಮನ ಮುಟ್ಟಿತು.

ಇದನ್ನೂ ಓದಿ: ಧರ್ಮೇಂದ್ರ ಮನೆಗೆ ಯಾರು ಬೇಕಾದರೂ ಬರಬಹುದಿತ್ತು; ಅಮಿತಾಭ್ ನೆನಪು

ಇದೇ ವೇಳೆ ಅಮಿತಾಭ್ ತಮ್ಮ ಹಳೆಯ ಕನಸೊಂದನ್ನು ಬಿಚ್ಚಿಟ್ಟರು. ತಮಗೆ ‘ಐಎಫ್‌ಎಸ್’ ಸೇರಿ ಭಾರತೀಯ ವಿದೇಶಾಂಗ ಸೇವೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ಆಸೆಯಿತ್ತು ಎಂದರು. ಆದರೆ ಆ ಸಮಯದಲ್ಲಿ ಅದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಆ ಆಲೋಚನೆಯನ್ನು ಬಿಟ್ಟುಕೊಟ್ಟಿದ್ದಾಗಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ