ಬಿಗ್ ಬಾಸ್ ಕನ್ನಡ: ಮತ್ತೆ ನಾಲಿಗೆ ಹರಿಬಿಟ್ಟ ಲಿಖಿತ್; ಈ ವಿಷಯಕ್ಕೆ ಸುದೀಪ್ ಕ್ಲಾಸ್ ಫಿಕ್ಸ್?
ಕಿಚ್ಚ ಸುದೀಪ್ ಅವರು ಅಗ್ನಿಪರೀಕ್ಷೆ ಸ್ಪರ್ಧಿಗಳಿಗೆ ಸಾಕಷ್ಟು ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಕೆಲವರು ಬದಲಾಗಬಹುದು ಎನ್ನುವ ನಿರೀಕ್ಷೆ ಇತ್ತು. ಕಿರಣ್ ಶಾಸ್ತ್ರಿ ಹೊರತುಪಡಿಸಿ ಎಲ್ಲರೂ ಹಾಗೆಯೇ ಇದ್ದಾರೆ. ಈಗ ಲಿಖಿತ್ ಅವರು ಮತ್ತೆ ತೊಂದರೆ ಅನುಭವಿಸುವ ಸೂಚನೆ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಕಾಮನ್ ಮ್ಯಾನ್ಗಳಾದ ಲಿಖಿತ್, ಕಿರಣ್, ಮಂಜು ಹಾಗೂ ಧನುಷ್ಗೆ ಕ್ಲಾಸ್ ತೆಗೆದುಕೊಳ್ಳಲಾಯಿತು. ಈಗ ಕಿರಣ್ ಶಾಸ್ತ್ರಿ ಬದಲಾಗಿದ್ದಾರೆ. ಆದರೆ, ಮಂಜು ಹಾಗೂ ಲಿಖಿತ್ ಅವರಿಂದ ಬದಲಾವಣೆ ನಿರೀಕ್ಷೆ ಅಸಾಧ್ಯ ಎಂಬಂತಾಗಿದೆ. ಬಿಗ್ ಬಾಸ್ ಮನೆಯ ಕೆಲಸವನ್ನು ಎಲ್ಲರೂ ಹಂಚಿಕೊಂಡು ಮಾಡಬೇಕು. ಆದರೆ, ಲಿಖಿತ್ ಅವರು ಆ ರೀತಿ ಮಾಡುತ್ತಿಲ್ಲ. ಬಿಗ್ ಬಾಸ್ನಲ್ಲಿ ಆಟ ಆಡಲು ಬಂದಿದ್ದು, ಕೆಲಸ ಮಾಡೋಕೆ ಅಲ್ಲ ಎಂಬ ಭಾವನೆ ಅವರಿಗೆ ಇದೆ. ಹಾಗೆಯೇ ಬಾಯ್ಬಿಟ್ಟು ಹೇಳಿದ್ದಾರೆ. ಪಾತ್ರೆಗಳೆಲ್ಲ ತೊಳೆಯದೆ ಹಾಗೆಯೇ ಇದೆ ಎಂದು ಹೇಳಿದಾಗ, ‘ನಾನೇನು ಇಲ್ಲಿ ಕೆಲಸ ಮಾಡೋಕೆ ಬಂದಿದ್ದೀನಾ’ ಎಂದು ಪ್ರಶ್ನೆ ಮಾಡಿದ್ದಾರೆ. ವೀಕೆಂಡ್ನಲ್ಲಿ ಈ ವಿಷಯಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Sep 22, 2026 08:40 AM
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ

