AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಾಯ್ಲೆಂಡ್‌ನ ಈ ದೇವಸ್ಥಾನದಲ್ಲಿ ಪೂಜೆಗಿಂತ ಫೋಟೋಶೂಟ್‌ಗೇ ಹೆಚ್ಚು ಬೇಡಿಕೆ; ಕಾರಣವೇನು?

Wat Arun Temple Bangkok: ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿರುವ ವಾಟ್ ಅರುಣ್ ದೇವಸ್ಥಾನ ತನ್ನ ವಿಶಿಷ್ಟ ವಾಸ್ತುಶಿಲ್ಪದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಇದೀಗ ಇಲ್ಲಿ ಸಾಂಪ್ರದಾಯಿಕ ಥಾಯ್ ಉಡುಪು ಧರಿಸಿ ಫೋಟೋಶೂಟ್ ಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ದೇವಸ್ಥಾನ ಪ್ರವಾಸಿಗರ ನೆಚ್ಚಿನ ಫೋಟೋಶೂಟ್ ತಾಣವಾಗಿರುವುದೇಕೆ ಎಂಬುದನ್ನು ತಿಳಿಯೋಣ.

ಥಾಯ್ಲೆಂಡ್‌ನ ಈ ದೇವಸ್ಥಾನದಲ್ಲಿ ಪೂಜೆಗಿಂತ ಫೋಟೋಶೂಟ್‌ಗೇ ಹೆಚ್ಚು ಬೇಡಿಕೆ; ಕಾರಣವೇನು?
Wat Arun Temple
ಮಾಲಾಶ್ರೀ ಅಂಚನ್​
| Edited By: |

Updated on:Sep 22, 2026 | 11:33 AM

Share

ಮುಖ್ಯಾಂಶಗಳು

  • ಥಾಯ್ಲೆಂಡ್‌ನ ಈ ದೇವಸ್ಥಾನಕ್ಕೆ ಪೂಜೆಗಿಂತ ಫೋಟೋಶೂಟ್‌ಗಾಗಿ ಹೆಚ್ಚು ಜನ ಬರುತ್ತಾರೆ!
  • ಫೋಟೋ ತೆಗೆಸಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಏಕೆ ಬರುತ್ತಾರೆ?
  • ಇದು ಬ್ಯಾಂಕಾಕ್‌ನ ವಾಟ್ ಅರುಣ್ ದೇವಸ್ಥಾನ

ಥಾಯ್ಲೆಂಡ್ (Thailand) ಎಂದಾಕ್ಷಣ ಸುಂದರ ಕಡಲತೀರಗಳು, ಪ್ರವಾಸಿ ತಾಣಗಳು ಮತ್ತು ವಿಶಿಷ್ಟ ಸಂಸ್ಕೃತಿ ನೆನಪಿಗೆ ಬರುತ್ತವೆ. ಆದರೆ ಅಲ್ಲಿರುವ ಒಂದು ಪ್ರಸಿದ್ಧ ದೇವಸ್ಥಾನ ಈಗ ಧಾರ್ಮಿಕ ಕಾರಣಕ್ಕಿಂತ ಮತ್ತೊಂದು ವಿಚಾರಕ್ಕೆ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಇಲ್ಲಿ ಹಲವರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಫೋಟೋಶೂಟ್ ಮಾಡಿಸಿಕೊಳ್ಳಲು ಬರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಂದರ ಚಿತ್ರಗಳನ್ನು ಹಂಚಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ.

ಬ್ಯಾಂಕಾಕ್‌ನಲ್ಲಿರುವ ವಾಟ್ ಅರುಣ್ ಥಾಯ್ಲೆಂಡ್‌ನ ಪ್ರಸಿದ್ಧ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದಾಗಿದೆ. ಚಾವೊ ಫ್ರಾಯಾ ನದಿಯ ದಡದಲ್ಲಿರುವ ಈ ದೇವಸ್ಥಾನದ ವಿಶಿಷ್ಟ ವಾಸ್ತುಶಿಲ್ಪ ಮತ್ತು ಎತ್ತರದ ಗೋಪುರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ವಿಶೇಷವಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ದೇವಸ್ಥಾನದ ನೋಟ ಮತ್ತಷ್ಟು ಸುಂದರವಾಗಿ ಕಾಣಿಸುತ್ತದೆ.

ದೇವಸ್ಥಾನಕ್ಕಿಂತ ಫೋಟೋಶೂಟ್‌ಗೆ ಏಕೆ ಪ್ರಸಿದ್ಧ?

ವಾಟ್ ಅರುಣ್‌ನ ಸುತ್ತಮುತ್ತಲಿನ ವಾಸ್ತುಶಿಲ್ಪವು ಫೋಟೋಶೂಟ್‌ಗೆ ಸೂಕ್ತವಾದ ಬ್ಯಾಕ್​ಗ್ರೌಂಡ್ ಒದಗಿಸುತ್ತದೆ. ದೇವಸ್ಥಾನದ ಅಲಂಕಾರ, ಎತ್ತರದ ಗೋಪುರಗಳು ಮತ್ತು ನದಿಯ ಹಿನ್ನೆಲೆ ಪ್ರವಾಸಿಗರಿಗೆ ವಿಭಿನ್ನ ರೀತಿಯ ಚಿತ್ರಗಳನ್ನು ತೆಗೆದುಕೊಳ್ಳುವ ಅವಕಾಶ ನೀಡುತ್ತವೆ.

ಥಾಯ್ಲೆಂಡ್‌ಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ಅಲ್ಲಿನ ಸಾಂಪ್ರದಾಯಿಕ ಉಡುಪುಗಳನ್ನು ಬಾಡಿಗೆಗೆ ಪಡೆದು ದೇವಸ್ಥಾನದ ಆವರಣದ ಸುತ್ತ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಇಂತಹ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ.

ಸಾಂಪ್ರದಾಯಿಕ ಉಡುಪಿನಲ್ಲೇ ಫೋಟೋಶೂಟ್

ವಾಟ್ ಅರುಣ್ ಸುತ್ತಮುತ್ತ ಪ್ರವಾಸಿಗರಿಗೆ ಥಾಯ್ಲೆಂಡ್‌ನ ಸಾಂಪ್ರದಾಯಿಕ ಉಡುಪುಗಳನ್ನು ಬಾಡಿಗೆಗೆ ನೀಡುವ ಹಲವು ಅಂಗಡಿಗಳಿವೆ. ಪ್ರವಾಸಿಗರು ತಮ್ಮ ಇಷ್ಟದ ಉಡುಪು ಆಯ್ಕೆ ಮಾಡಿಕೊಂಡು, ಅದಕ್ಕೆ ತಕ್ಕ ಆಭರಣ ಮತ್ತು ಅಲಂಕಾರ ಮಾಡಿಸಿಕೊಂಡು ದೇವಸ್ಥಾನದ ಹಿನ್ನೆಲೆಯೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಇದರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನ ಸಂಸ್ಕೃತಿಯನ್ನು ಹತ್ತಿರದಿಂದ ಅನುಭವಿಸಿದ ಅನುಭವವೂ ಸಿಗುತ್ತದೆ. ಜೊತೆಗೆ ಪ್ರವಾಸದ ನೆನಪಿಗಾಗಿ ವಿಶಿಷ್ಟ ಚಿತ್ರಗಳೂ ದೊರೆಯುತ್ತವೆ.

ನೀರಿನ ಬಾಟಲಿಗಳನ್ನು ಹೀಗೆ ಫ್ರಿಜ್​​ನಲ್ಲಿಟ್ಟರೆ ವಿದ್ಯುತ್ ಬಿಲ್ ಖಂಡಿತ ಕಡಿಮೆಯಾಗುತ್ತದೆ

ದೇವಸ್ಥಾನಕ್ಕೆ ಭೇಟಿ ನೀಡುವಾಗ ನಿಯಮ ಪಾಲನೆ ಮುಖ್ಯ

ಫೋಟೋಶೂಟ್ ಮಾಡಿಸಿಕೊಳ್ಳುವುದಾದರೂ ವಾಟ್ ಅರುಣ್ ಒಂದು ಧಾರ್ಮಿಕ ಸ್ಥಳ ಎಂಬುದನ್ನು ಮರೆಯಬಾರದು. ದೇವಸ್ಥಾನದ ಆವರಣದಲ್ಲಿ ಸೂಕ್ತ ಉಡುಪು ಧರಿಸುವುದು, ಧಾರ್ಮಿಕ ಸ್ಥಳದ ಗೌರವ ಕಾಪಾಡುವುದು ಮತ್ತು ಅಲ್ಲಿನ ನಿಯಮಗಳನ್ನು ಪಾಲಿಸುವುದು ಮುಖ್ಯ. ಫೋಟೋ ತೆಗೆದುಕೊಳ್ಳುವಾಗ ಇತರ ಭಕ್ತರು ಹಾಗೂ ಪ್ರವಾಸಿಗರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ದೇವಸ್ಥಾನದ ನಿರ್ದಿಷ್ಟ ಪ್ರದೇಶಗಳಲ್ಲಿ ಛಾಯಾಚಿತ್ರ ತೆಗೆದುಕೊಳ್ಳಲು ನಿರ್ಬಂಧವಿದ್ದರೆ ಅದನ್ನು ಪಾಲಿಸಬೇಕು.

ಥಾಯ್ಲೆಂಡ್‌ಗೆ ಪ್ರವಾಸ ಹೋಗುವವರು ಬ್ಯಾಂಕಾಕ್‌ನ ಪ್ರಮುಖ ತಾಣಗಳನ್ನು ನೋಡಲು ಬಯಸಿದರೆ ವಾಟ್ ಅರುಣ್ ಕೂಡ ಪ್ರವಾಸಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದಾದ ಸ್ಥಳವಾಗಿದೆ. ಅದರ ಐತಿಹಾಸಿಕ ಹಿನ್ನೆಲೆ, ವಿಶಿಷ್ಟ ವಾಸ್ತುಶಿಲ್ಪ ಮತ್ತು ಚಾವೊ ಫ್ರಾಯಾ ನದಿಯ ಸುಂದರ ದೃಶ್ಯಗಳು ಈ ಸ್ಥಳವನ್ನು ವಿಶೇಷವಾಗಿಸುತ್ತವೆ. ಜೊತೆಗೆ ಸಾಂಪ್ರದಾಯಿಕ ಥಾಯ್ ಉಡುಪಿನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳಲು ಬಯಸುವವರಿಗೂ ಇದು ಆಕರ್ಷಣೆಯ ಕೇಂದ್ರವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:33 am, Tue, 22 September 26

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು