‘ಮೈಸೂರಲ್ಲಿ ಸಿಕ್ತೀವಿ, ಎಲ್ಲರಿಗೂ ಸೆಲ್ಫಿ ಕೊಡ್ತೀವಿ’; ಮಾಹಿತಿ ಕೊಟ್ಟ ವಿನಯ್, ನಮ್ರತಾ, ಮೈಕಲ್

ಬಿಗ್ ಬಾಸ್ ಮನೆಯಲ್ಲಿ ಮೈಕಲ್, ವಿನಯ್ ಗೌಡ, ನಮ್ರತಾ ಹಾಗೂ ರಕ್ಷಕ್ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಅದು ಈಗಲೂ ಮುಂದುವರಿದಿದೆ. ಈ ನಾಲ್ವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದ ವಿಡಿಯೋನ ಮಾಡಿ, ಮಾಹಿತಿ ನೀಡಲಾಗಿದೆ.

‘ಮೈಸೂರಲ್ಲಿ ಸಿಕ್ತೀವಿ, ಎಲ್ಲರಿಗೂ ಸೆಲ್ಫಿ ಕೊಡ್ತೀವಿ’; ಮಾಹಿತಿ ಕೊಟ್ಟ ವಿನಯ್, ನಮ್ರತಾ, ಮೈಕಲ್
ರಕ್ಷಕ್, ನಮ್ರತಾ, ವಿನಯ್ ಮೈಕಲ್

Updated on: Feb 06, 2024 | 11:07 AM

ಬಿಗ್ ಬಾಸ್​ನಲ್ಲಿ (Bigg Boss) ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳ ಜನಪ್ರಿಯತೆ ಹೆಚ್ಚಿದೆ. ಕೆಲವೇ ವಾರಗಳಲ್ಲಿ ಔಟ್​ ಆದವರಿಂದ ಹಿಡಿದು ಕೊನೆಯ ವಾರದವರೆಗೆ ಇದ್ದ ಎಲ್ಲರೂ ತಮ್ಮ ಎಫರ್ಟ್ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ, ನಮ್ರತಾ ಗೌಡ, ಮೈಕಲ್ ಅಜಯ್ ಹಾಗೂ ರಕ್ಷಕ್ ಬುಲೆಟ್ ಮಧ್ಯೆ ಒಳ್ಳೆ ಬಾಂಧವ್ಯ ಬೆಳೆದಿತ್ತು. ಇದು ಬಿಗ್ ಬಾಸ್​ನಿಂದ ಹೊರಗೆ ಬಂದ ಬಳಿಕವೂ ಈ ಗೆಳೆತನ ಮುಂದುವರಿದಿದೆ. ಇವರು ಒಟ್ಟಾಗಿ ಮೈಸೂರಿಗೆ ತೆರಳುತ್ತಿದ್ದಾರೆ. ಈ ಬಗ್ಗೆ ಇವರು ಮಾಹಿತಿ ನೀಡಿದ್ದಾರೆ. ಅವರನ್ನು ಭೇಟಿ ಮಾಡೋ ಅವಕಾಶ ಫ್ಯಾನ್ಸ್​ಗೆ ಇದೆ.

ವಿನಯ್ ಗೌಡ, ಮೈಕಲ್, ನಮ್ರತಾ ಹಾಗೂ ರಕ್ಷಕ್ ಬಿಗ್ ಬಾಸ್ ಮನೆಯಲ್ಲಿ ಒಂದೇ ಗ್ರೂಪ್​ನಲ್ಲಿ ಇದ್ದರು. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಮುಂದುವರಿದಿದೆ. ಇವರ ಜೊತೆ ಇದ್ದ ಸ್ನೇಹಿತ್ ಅವರನ್ನು ಹೊರಗೆ ಇಡಲಾಗಿದೆ. ಈ ನಾಲ್ವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಹೇಗಿದೆ ನೋಡಿ ತನಿಷಾ, ಮೈಕಲ್ ಡ್ಯಾನ್ಸ್

‘ನಮಸ್ಕಾರ ಎಲ್ಲರಿಗೂ. ಇಂದು (ಫೆಬ್ರವರಿ 6) 11:30-12 ಗಂಟೆ ಸುಮಾರಿಗೆ ಚಾಮುಂಡಿ ಬೆಟ್ಟದಲ್ಲಿ ಇರುತ್ತೇವೆ. ಬನ್ನಿ ಭೇಟಿ ಆಗೋಣ. ಒಂದು ಚೂರು ಪ್ರೀತಿ ಹಂಚಿಕೊಳ್ಳೋಣ’ ಎಂದಿದ್ದಾರೆ ವಿನಯ್. ಮೊದಲು ಬೆಟ್ಟಕ್ಕೆ ಭೇಟಿ ನೀಡುವ ಇವರು ನಂತರ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಆ ಬಳಿಕ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಬರುವ ಎಲ್ಲರಿಗೂ ಸೆಲ್ಫಿ ನೀಡೋದಾಗಿ ಇವರು ಭರವಸೆ ನೀಡಿದ್ದಾರೆ. ಅಲ್ಲದೆ ಯಾವುದೇ ಸಮಯ ಮಿತಿಯನ್ನು ಇವರು ಹಾಕಿಕೊಂಡಿಲ್ಲ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.

ಮೈಕಲ್ ಪೋಸ್ಟ್ ಮಾಡಿರೋ ವಿಡಿಯೋ..

ಮೈಕಲ್ ಅಜಯ್ ಅವರ ಖ್ಯಾತಿ ಹೆಚ್ಚಿದೆ. ಅವರನ್ನು 3 ಲಕ್ಷಕ್ಕೂ ಅಧಿಕ ಮಂದಿ ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದಾರೆ. ಅವರು ಕೈ ಮೇಲೆ ‘ಮಣ್ಣಿನ ಮಗ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ವಿಡಿಯೋನ ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಈ ಮೂಲಕ ಅವರು ಮತ್ತಷ್ಟು ಜನರಿಗೆ ಇಷ್ಟ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us