AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಟ್ಟದ ಮೇಲೆ ಫರೀನ್ ಮೇಲೆ ಹಲ್ಲೆ ಮಾಡಿದ ಬಿಬಿ; ‘ಹಳ್ಳಿ ಪವರ್ ರೀಲೋಡೆಡ್’ ಅಲ್ಲಿ ಶಾಕಿಂಗ್ ಬೆಳವಣಿಗೆ

ಜೀ ಕನ್ನಡದ ಹಳ್ಳಿ ಪವರ್ ರೀಲೋಡೆಡ್ ರಿಯಾಲಿಟಿ ಶೋನಲ್ಲಿ ಬೆಟ್ಟದ ಮೇಲಿನ ಟಾಸ್ಕ್ ವೇಳೆ ಸ್ಪರ್ಧಿ ಬಿಬಿ ಹಜೀರಾ ಅವರು ಸಹ ಸ್ಪರ್ಧಿ ಫರೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಗಂಭೀರ ವಿವಾದದ ಕುರಿತು ನಿರೂಪಕ ಅಕುಲ್ ಬಾಲಾಜಿ ಹಾಗೂ ಮನೆಮಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಬಿ ಎಲಿಮಿನೇಷನ್ ಭೀತಿ ಎದುರಿಸುತ್ತಿದ್ದಾರೆ.

ಬೆಟ್ಟದ ಮೇಲೆ ಫರೀನ್ ಮೇಲೆ ಹಲ್ಲೆ ಮಾಡಿದ ಬಿಬಿ; ‘ಹಳ್ಳಿ ಪವರ್ ರೀಲೋಡೆಡ್’ ಅಲ್ಲಿ ಶಾಕಿಂಗ್ ಬೆಳವಣಿಗೆ
ಹಳ್ಳಿ ಪವರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 18, 2026 | 7:50 AM

Share

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್ ರೀಲೋಡೆಡ್‘ ಈಗ ಹೈವೋಲ್ಟೇಜ್ ಡ್ರಾಮಾ ಹಾಗೂ ಗಂಭೀರ ವಿವಾದದಿಂದಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬೆಟ್ಟದ ಮೇಲಿನ ಸಾಹಸ ಟಾಸ್ಕ್ ವೇಳೆ ಸ್ಪರ್ಧಿ ಬಿಬಿ ಹಜೀರಾ, ಸಹ ಸ್ಪರ್ಧಿ ಫರೀನ್ ಮೇಲೆ ಕೈ ಮಾಡಿರುವ ಘಟನೆ ಶೋನಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದು, ಬಿಬಿ ಮೇಲೆ ಈಗ ಶೋನಿಂದ ಎಲಿಮಿನೇಷನ್ ತೂಗುಗತ್ತಿ ನೇತಾಡುತ್ತಿದೆ.

ಬೆಟ್ಟದ ಮೇಲಿನ ಟಾಸ್ಕ್‌ನಲ್ಲಿ ನಡೆದಿದ್ದೇನು?

ಬೆಟ್ಟ ಹತ್ತಿ ತುದಿಯಲ್ಲಿರುವ ಬಾವುಟವನ್ನು ಮೊದಲು ಯಾರು ಎತ್ತುತ್ತಾರೋ ಅವರು ವಿಜೇತರು ಎಂಬ ಕಠಿಣ ಟಾಸ್ಕ್ ಅನ್ನು ಫರೀನ್ ಮತ್ತು ಬಿಬಿಗೆ ನೀಡಲಾಗಿತ್ತು. ಈ ಪೈಪೋಟಿಯಲ್ಲಿ ಫರೀನ್ ಮೊದಲು ಬಾವುಟ ಹಿಡಿದು ಸಂಭ್ರಮಿಸಿದರು. ಆದರೆ ಬಾವುಟ ಸಿಗದ ಕೋಪದಲ್ಲಿದ್ದ ಬಿಬಿ, ‘ನನಗೆ ಸಿಕ್ಕಿಲ್ಲ ಅಂದ್ರೂ ಪರವಾಗಿಲ್ಲ’ ಎಂದು ವಾದಕ್ಕಿಳಿದರು. ಈ ವೇಳೆ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾದ ನಡೆಯುತ್ತಿದ್ದಾಗ, ತಾಳ್ಮೆ ಕಳೆದುಕೊಂಡ ಬಿಬಿ ಏಕಾಏಕಿ ಫರೀನ್ ಅವರನ್ನು ತಳ್ಳಿ, ಕೆನ್ನೆಗೆ ಹೊಡೆದಿದ್ದಾರೆ.

ಸ್ಥಳದಲ್ಲೇ ಕೆಂಡಾಮಂಡಲವಾದ ನಿರೂಪಕ ಅಕುಲ್ ಬಾಲಾಜಿ

ಕಣ್ಣೆದುರೇ ನಡೆದ ಈ ಹಲ್ಲೆ ಕಂಡು ನಿರೂಪಕ ಅಕುಲ್ ಬಾಲಾಜಿ ತೀವ್ರ ಆಕ್ರೋಶಗೊಂಡರು. ಬೆಟ್ಟದ ತುದಿಯಲ್ಲಿದ್ದ ಅಪಾಯಕಾರಿ ಸ್ಥಳದಲ್ಲಿ ಇಂತಹ ವರ್ತನೆ ತೋರಿದ್ದಕ್ಕೆ ಬಿಬಿಯನ್ನು ತರಾಟೆಗೆ ತೆಗೆದುಕೊಂಡ ಅಕುಲ್, ‘ಒಂದು ಕೊಡಬೇಕು ನಿನಗೆ! ಬಿದ್ದಿದ್ರೆ ಅಲ್ಲಿಂದ ನೋಡು… ಶಟ್ ಅಪ್’ ಎಂದು ಗುಡುಗಿದರು. ಅಕುಲ್ ಅವರ ಕೋಪಕ್ಕೆ ಬಿಬಿ ಬೆಚ್ಚಿಬಿದ್ದಿದ್ದಾರೆ.

View this post on Instagram

A post shared by Zee Kannada (@zeekannada)

ಪಂಚಾಯ್ತಿಯಲ್ಲಿ ಬಿಬಿ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು

ಈ ಘಟನೆಯ ಬಳಿಕ ವಾರದ ಪಂಚಾಯ್ತಿಯಲ್ಲಿ ಬಿಬಿ ವರ್ತನೆಯ ವಿರುದ್ಧ ಇಡೀ ಮನೆ ಒಂದಾಗಿದೆ. ‘ಉಪ್ಪು ಖಾರ ತಿಂದ್ರೆ ಮನುಷ್ಯತ್ವ ಅನ್ನೋದು ಇರಬೇಕು, ಹೊಡೆದಾದ ಮೇಲೆ ಆ ಹುಡುಗಿಯನ್ನು ಕಳಿಸಬೇಕು’ ಎಂದು ಅಕುಲ್ ಬಾಲಾಜಿ ಕಠಿಣ ನಿಲುವು ತಾಳಿದ್ದಾರೆ. ಅತ್ತ ಸಹ ಸ್ಪರ್ಧಿಗಳು ಕೂಡ ಬಿಬಿ ವಿರುದ್ಧ ಸಿಡಿದೆದ್ದಿದ್ದು, ‘ಅಕುಲ್ ಸರ್ ಹತ್ತಿರ ಆ ತರ ಮಾತಾಡೋಕೆ ನಿನಗೆ ಅರ್ಹತೆ ಇಲ್ಲ, ಶಟ್ ಯುವರ್ ಮೌತ್. ಯಾರನ್ನೂ ಮುಟ್ಟೋಕೆ ನಿನಗೆ ರೈಟ್ಸ್ ಇಲ್ಲ, ನೀನು ಮುಟ್ಟಿದ್ದೇ ತಪ್ಪು’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಫರೀನ್ ಕೂಡ ‘ನಾನು ಬಂದು ನಿನಗೆ ಎರಡು ಬಿಟ್ರೆ ನಿಮ್ಮ ಅಪ್ಪ-ಅಮ್ಮ ಸುಮ್ಮನಿರ್ತಾರಾ?’ ಎಂದು ಕಣ್ಣೀರಿಡುತ್ತಲೇ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜೀ ಕನ್ನಡದಲ್ಲಿ ನವೆಂಬರ್ 16ರಿಂದ ‘ಗೌರಿಪುತ್ರ’ ಧಾರಾವಾಹಿ ಪ್ರಸಾರ

ಒಟ್ಟಿನಲ್ಲಿ, ರಿಯಾಲಿಟಿ ಶೋ ನಿಯಮಗಳನ್ನು ಉಲ್ಲಂಘಿಸಿ ಸಹ ಸ್ಪರ್ಧಿ ಮೇಲೆ ಕೈ ಮಾಡಿರುವ ಬಿಬಿ ವಿರುದ್ಧ ವೀಕ್ಷಕರು ಹಾಗೂ ಸ್ಪರ್ಧಿಗಳು ಕಿಡಿಕಾರುತ್ತಿದ್ದಾರೆ. ರಾತ್ರಿ 9.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ಬಿಬಿಗೆ ಯಾವ ರೀತಿಯ ಶಿಕ್ಷೆ ಸಿಗಲಿದೆ ಅಥವಾ ಶೋನಿಂದಲೇ ಗೇಟ್‌ಪಾಸ್ ಸಿಗಲಿದೆಯೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ