ವಿಕ್ಟಿಮ್ ಕಾರ್ಡ್​ ಪ್ಲೇ ಮಾಡ್ತಿದ್ದಾರೆ ಸಂಗೀತಾ? ನಟಿಯ ನಡೆಯಿಂದ ಅಭಿಮಾನಿಗಳಿಗೆ ಬೇಸರ

ಕಾರ್ತಿಕ್, ತನಿಷಾ ಹಾಗೂ ಸಂಗೀತಾ ಒಂದೇ ಗುಂಪಿನಲ್ಲಿದ್ದರು. ಈಗ ಸಂಗೀತಾ ಈ ಗುಂಪಿನಿಂದ ಹೊರ ಬಂದಿದ್ದಾರೆ. ಅವರು ಸದ್ಯ ವಿನಯ್ ಹಾಗೂ ನಮ್ರತಾ ಜೊತೆ ಸೇರಿಕೊಂಡಿದ್ದಾರೆ. ಕಾರ್ತಿಕ್ ಹಾಗೂ ತನಿಷಾ ಜೊತೆ ಇದ್ದ ಕೆಮಿಸ್ಟ್ರಿ ಇವರ ಜೊತೆ ಸಿಗುತ್ತಿಲ್ಲ.

ವಿಕ್ಟಿಮ್ ಕಾರ್ಡ್​ ಪ್ಲೇ ಮಾಡ್ತಿದ್ದಾರೆ ಸಂಗೀತಾ? ನಟಿಯ ನಡೆಯಿಂದ ಅಭಿಮಾನಿಗಳಿಗೆ ಬೇಸರ
ಸಂಗೀತಾ

Updated on: Nov 23, 2023 | 11:02 AM

ಕೆಲ ದಿನಗಳ ಹಿಂದೆ ವರ್ತೂರು ಸಂತೊಷ್ (Varthur Santosh) ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗ್ತೀನಿ ಎಂದು ಹಠ ಹಿಡಿದು ಕುಳಿತಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಘಟನೆ ಬಳಿಕ ಅವರ ತಾಯಿಯನ್ನು ಬಿಗ್ ಬಾಸ್ ಮನೆಗೆ ಕರೆಸಲಾಯಿತು. ಸಂತೋಷ್ ಅವರು ಕೆಲ ದಿನಗಳ ಕಾಲ ಸಾಕಷ್ಟು ಸುದ್ದಿಯಲ್ಲಿದ್ದರು. ಇದನ್ನು ನೋಡಿದ ಸಂಗೀತಾ ಅವರು ತಾವು ಕೂಡ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಲು ಹೊರಟಂತೆ ಇದೆ. ‘ದಯವಿಟ್ಟು ಬಿಗ್ ಬಾಸ್​ನಿಂದ ಅವರನ್ನು ಕಳುಹಿಸಿ’ ಎಂದು ಅನೇಕರು ಕೋರಿಕೆ ಇಡುತ್ತಿದ್ದಾರೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಬಹುದು.

ಕಾರ್ತಿಕ್, ತನಿಷಾ ಹಾಗೂ ಸಂಗೀತಾ ಒಂದೇ ಗುಂಪಿನಲ್ಲಿದ್ದರು. ಈಗ ಸಂಗೀತಾ ಈ ಗುಂಪಿನಿಂದ ಹೊರ ಬಂದಿದ್ದಾರೆ. ಅವರು ಸದ್ಯ ವಿನಯ್ ಹಾಗೂ ನಮ್ರತಾ ಜೊತೆ ಸೇರಿಕೊಂಡಿದ್ದಾರೆ. ಕಾರ್ತಿಕ್ ಹಾಗೂ ತನಿಷಾ ಜೊತೆ ಇದ್ದ ಕೆಮಿಸ್ಟ್ರಿ ಇವರ ಜೊತೆ ಸಿಗುತ್ತಿಲ್ಲ. ಇದು ಸಂಗೀತಾ ಬೇಸರಕ್ಕೆ ಕಾರಣವಾಗಿದೆ. ಸಂಗೀತಾ ಅವರು ತಾವು ದೊಡ್ಮನೆಯಿಂದ ಹೊರ ಹೋಗುವುದಾಗಿ ಹೇಳುತ್ತಿದ್ದಾರೆ.

ಕನ್ಫೆಷನ್​ ರೂಂಗೆ ತೆರಳಿದ ಸಂಗೀತಾ ಅವರು ತಮಗೆ ಇಲ್ಲಿ ಇರೋಕೆ ಕಷ್ಟ ಆಗುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್​ಗೆ ಅತಿಥಿಯಾಗಿ ಬಂದ ನರೇಂದ್ರ ಗುರೂಜಿ ಜೊತೆ ತಾವೂ ಹೊರ ಹೋಗುವುದಾಗಿ ಹೇಳಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಅವರು ಮತ್ತೆ ಟ್ರ್ಯಾಕ್​ಗೆ ಮರಳಿದ್ದಾರೆ. ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ನಲ್ಲಿ 11 ಸಾವಿರ ಹಿಂಬಾಲಕರನ್ನು ಕಳೆದುಕೊಂಡ ಸಂಗೀತಾ ಶೃಂಗೇರಿ

‘ಕಾರ್ತಿಕ್ ಅವರದ್ದೇ ತಪ್ಪು, ನಾನು ಸರಿ ಇದ್ದೇನೆ ಎಂದು ತೋರಿಸಿಕೊಳ್ಳುವ ರೀತಿಯಲ್ಲಿ ಸಂಗೀತಾ ಅವರ ನಡೆ ಇದೆ’ ಎಂಬುದಾಗಿ ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಸಂಗೀತಾ ಅವರು ಇನ್​​ಸ್ಟಾಗ್ರಾಮ್​ನಲ್ಲಿ ಈಗಾಗಲೇ 11 ಸಾವಿರ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಅವರ ಫಾಲೋವರ್ಸ್ ಸಂಖ್ಯೆಯಲ್ಲಿ ಕುಸಿತ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us