ಹೊಸ ಪ್ರೋಮೋ ಹಂಚಿಕೊಂಡು ‘ಸೀತಾ ರಾಮ’ ಧಾರಾವಾಹಿಯ ಪ್ರಸಾರ ಸಮಯ ತಿಳಿಸಿದ ಜೀ ಕನ್ನಡ

Seetha Raama: ರಾಮ ಹಾಗೂ ಸೀತೆಯ ನಡುವೆ ಆಪ್ತತೆ ಬೆಳೆಯಲು ಸಿಹಿ ಸೇತುವೆ ಆಗುತ್ತಾಳೆ. ಇವಿಷ್ಟನ್ನು ಪ್ರೋಮೋ ಮೂಲಕ ತೋರಿಸಲಾಗಿದೆ. ಇದರ ಜೊತೆ ಧಾರಾವಾಹಿ ಪ್ರಸಾರ ಸಮಯ ತಿಳಿಸಲಾಗಿದೆ.

ಹೊಸ ಪ್ರೋಮೋ ಹಂಚಿಕೊಂಡು ‘ಸೀತಾ ರಾಮ’ ಧಾರಾವಾಹಿಯ ಪ್ರಸಾರ ಸಮಯ ತಿಳಿಸಿದ ಜೀ ಕನ್ನಡ
ಸೀತಾ ರಾಮ ಧಾರಾವಾಹಿ

Updated on: Jul 12, 2023 | 8:03 AM

ವೈಷ್ಣವಿ ಗೌಡ (Vaishnavi Gowda) ಹಾಗೂ ಗಗನ್ ಚಿನ್ನಪ್ಪ ನಟನೆಯ ‘ಸೀತಾ ರಾಮ’ ಧಾರಾವಾಹಿ (Seetha Rama Serial) ಪ್ರೋಮೋ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿತ್ತು. ಕಾರಣಾಂತರಗಳಿಂದ ಧಾರಾವಾಹಿ ಪ್ರಸಾರ ವಿಳಂಬ ಆಗುತ್ತಲೇ ಇತ್ತು. ಇತ್ತೀಚೆಗೆ ಧಾರಾವಾಹಿ ಪ್ರಾರಂಭ ದಿನಾಂಕ ತಿಳಿಸಿದ್ದ ಜೀ ಕನ್ನಡ ವಾಹಿನಿ, ಈಗ ಧಾರಾವಾಹಿಯ ಪ್ರಸಾರ ಸಮಯ ತಿಳಿಸಿದೆ. ವಾಹಿನಿ ಈ ಕುರಿತು ಹೊಸ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋ ಎಲ್ಲರ ಗಮನ ಸೆಳೆಯುತ್ತಿದೆ. ಈ ಪ್ರೋಮೋನ ಬರೋಬ್ಬರಿ 56 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

ರಾಮ್ (ಗಗನ್)​ ದೊಡ್ಡ ಉದ್ಯಮಿ. ವಿದೇಶದಲ್ಲಿದ್ದರೂ ಆತನಿಗೆ ನೆನಪಗೋದು ಕುಟುಂಬವೇ. ಸದಾ ಕುಟುಂಬದ ಕಾಳಜಿ ಬಗ್ಗೆ ಯೋಚಿಸುತ್ತಾ ಇರುತ್ತಾನೆ. ಆದರೆ, ಕುಟುಂಬದವರಿಗೆ ಇವನ ಮೇಲೆ ಪ್ರೀತಿ ಇಲ್ಲ. ಬರೀ ದ್ವೇಷ. ಆಶೀರ್ವಾದ ಪಡೆಯ ಹೋದ ರಾಮ್​ಗೆ ಸಿಗೋದು ಕೆಟ್ಟದಾಗಲಿ ಎನ್ನುವ ಹಾರೈಕೆ. ಮತ್ತೊಂದು ಕಡೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ವಾಸಿಸುತ್ತಿರುವ ಸೀತಾ (ವೈಷ್ಣವಿ ಗೌಡ) ಹಾಗೂ ಆಕೆಯ ಮಗಳು ಸಿಹಿ (ರೀತು ಸಿಂಗ್). ರಾಮ ಹಾಗೂ ಸೀತೆಯ ನಡುವೆ ಆಪ್ತತೆ ಬೆಳೆಯಲು ಸಿಹಿ ಸೇತುವೆ ಆಗುತ್ತಾಳೆ. ಇವಿಷ್ಟನ್ನು ಪ್ರೋಮೋ ಮೂಲಕ ತೋರಿಸಲಾಗಿದೆ.

‘ಸೀತಾ ರಾಮ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಪ್ರಸಾರ ಆಗಲಿದೆ. ಜುಲೈ 17ರಿಂದ ಧಾರಾವಾಹಿ ಪ್ರಸಾರ ಆರಂಭಿಸಲಿದೆ. ಈಗಾಗಲೇ ರಿಲೀಸ್ ಆಗಿರುವ ಟೈಟಲ್ ಸಾಂಗ್ ಎಲ್ಲರ ಗಮನ ಸೆಳೆದಿದೆ. ಈಗ ಹೊಸ ಪ್ರೋಮೋಗೆ ಮೆಚ್ಚುಗೆ ಸಿಗುತ್ತಿದೆ.

ಇದನ್ನೂ ಓದಿ: ‘ಸೀತಾ ರಾಮ’ ಟೈಟಲ್ ಗೀತೆಯಲ್ಲಿ ಗಮನ ಸೆಳೆದ ವೈಷ್ಣವಿ; ಧಾರಾವಾಹಿ ಕಥೆಯ ಬಗ್ಗೆ ಮೂಡಿದೆ ಕುತೂಹಲ

ವೈಷ್ಣವಿ ಗೌಡ ಅವರು ‘ಬಿಗ್ ಬಾಸ್’ನಿಂದ ಸಾಕಷ್ಟು ಜನಪ್ರಿಯತೆ ಪಡೆದರು. ಅವರು ಇತ್ತೀಚೆಗೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಇನ್ನು, ಗಗನ್ ಚಿನ್ನಪ್ಪ ಅವರು ‘ಮಂಗಳ ಗೌರಿ ಮದುವೆ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದವರು. ಅವರನ್ನು ಈಗ ಮತ್ತೆ ಕಿರುತೆರೆ ಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 7:47 am, Wed, 12 July 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us