ಕನ್ನಡದಲ್ಲಿ ಹೊಸ ಹೊಸ ಕಥೆಗಳೊಂದಿಗೆ ಧಾರಾವಾಹಿಗಳು ಬರುತ್ತಿವೆ. ಎಲ್ಲಾ ಧಾರಾವಾಹಿಗಳಿಗೂ ಭವ್ಯ ಸ್ವಾಗತ ಸಿಗೋದಿಲ್ಲ. ಇತ್ತೀಚೆಗೆ ಆರಂಭ ಆದ ಧಾರಾವಾಹಿಗಳಿಗೆ ಅಂದುಕೊಂಡ ಮಟ್ಟದ ಟಿಆರ್ಪಿ ಸಿಕ್ಕಿಲ್ಲ. ಇನ್ನು ‘ಸೀತಾ ರಾಮ’ ಧಾರಾವಾಹಿಯಲ್ಲಿ ಮದುವೆ ಸೀಸನ್. ಹೀಗಾಗಿ, ಈ ಧಾರಾವಾಹಿಯ ಟಿಆರ್ಪಿಯಲ್ಲಿ ಏರಿಕೆ ಕಂಡಿದೆ. ‘ಬ್ರಹ್ಮಗಂಟು’ ಧಾರಾವಾಹಿಯಲ್ಲೂ ಮದುವೆ ಜರುಗುತ್ತಿದ್ದು, ಅದರ ಟಿಆರ್ಪಿಯಲ್ಲಿ ಏರಿಕೆ ಆಗಿದೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಈ ಬಾರಿ ಅತಿ ಹೆಚ್ಚು ಟಿಆರ್ಪಿ ಪಡೆದು ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ವಾರ ಈ ಧಾರಾವಾಹಿ ಹಾಗೂ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಈಗ ಕೆಲವೇ ಪಾಯಿಂಟ್ಗಳ ಅಂತರದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿಗೆ ಈ ಬಾರಿ ಮೂರನೇ ಸ್ಥಾನ ಸಿಕ್ಕಿದೆ. ಈ ಧಾರಾವಾಹಿಯನ್ನು ಜನರು ಹೆಚ್ಚು ವೀಕ್ಷಿಸುತ್ತಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಒಳ್ಳೆಯ ಟಿಆರ್ಪಿ ಪಡೆದುಕೊಂಡಿದೆ. ಇದಕ್ಕೆ ಕಾರಣ ಆಗಿರೋದು ಸೀತಾ ಹಾಗೂ ರಾಮನ ಮದುವೆ. ನಗರ ಭಾಗದಲ್ಲಿ ಈ ಧಾರಾವಾಹಿ ಒಂದನೇ ಸ್ಥಾನ ಪಡೆದುಕೊಂಡಿದೆ. ಮದುವೆ ಬಳಿಕ ಟ್ವಿಸ್ಟ್ಗಳು ಸಿಕ್ಕರೆ ಧಾರಾವಾಹಿ ಟಿಆರ್ಪಿ ಮತ್ತಷ್ಟು ಹೆಚ್ಚಲಿದೆ.
ಇದನ್ನೂ ಓದಿ: ‘ಸೀತಾ ರಾಮ’ ಟಿಆರ್ಪಿಯಲ್ಲಿ ಭರ್ಜರಿ ಏರಿಕೆ; ಉಳಿದ ಧಾರಾವಾಹಿಗಳ ಕಥೆ ಏನು?
ಐದನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ. ಈ ಧಾರಾವಾಹಿ ಹಲವು ದಿನಗಳಿಂದ ಟಾಪ್ ಐದರಲ್ಲಿ ಬಂದಿರಲಿಲ್ಲ. ಈ ಧಾರಾವಾಹಿಯನ್ನು ಜನರು ಹೆಚ್ಚು ಇಷ್ಟಪಟ್ಟಿದ್ದಾರೆ. ಹೊಸ ಧಾರಾವಾಹಿಗಳಿಗೆ ಅಷ್ಟಾಗಿ ಟಿಆರ್ಪಿ ಸಿಗುತ್ತಿಲ್ಲ. ‘ಕಲ್ಯಾಣಿ’ ಧಾರಾವಾಹಿ ಹಾಗೂ ‘ನನ್ನ ದೇವ್ರು’ 3 ಅಂಕದ ಟಿಆರ್ಪಿ ಪಡೆಯಲು ಹರಸಾಹ ಪಟ್ಟಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:25 pm, Thu, 18 July 24