ಮಂಜುಗೆ ಬಗ್ಗದ ಶೋಭಾ ಶೆಟ್ಟಿ ಹನುಮಂತನ ಒಂದೇ ಮಾತಿಗೆ ಸೈಲೆಂಟ್

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹನುಮಂತ, ತಮ್ಮ ಪ್ರಭಾವಶಾಲಿ ಮಾತಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶೋಭಾ ಮತ್ತು ಮಂಜು ನಡುವೆ ಜಗಳ ಆಯಿತು. ಆದರೆ, ಹನುಮಂತ ಅವರು ಅಭಿಪ್ರಾಯ ತಿಳಿಸಿದಾಗ ಶೋಭಾ ಸುಮ್ಮನಾದರು.

ಮಂಜುಗೆ ಬಗ್ಗದ ಶೋಭಾ ಶೆಟ್ಟಿ ಹನುಮಂತನ ಒಂದೇ ಮಾತಿಗೆ ಸೈಲೆಂಟ್
ಶೋಭಾ ಶೆಟ್ಟಿ

Updated on: Nov 20, 2024 | 11:50 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತನ ಆಟಕ್ಕೆ ಮರುಳಾಗದವರೇ ಇಲ್ಲ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಯಾರನ್ನಾದರೂ ಮಾತಿನಲ್ಲಿ ಸೋಲಿಸಬಲ್ಲ ಶಕ್ತಿ ಅವರಿಗೆ ಇದೆ. ಅವರು ಇಡುವ ಪಾಯಿಂಟ್ ಎಲ್ಲರಿಗೂ ಇಷ್ಟ ಆಗುತ್ತಿದೆ. ಮಂಜು ಜೊತೆ ಜೋರು ಜಗಳವಾಡಿದ ಶೋಭಾ, ಹನುಮಂತನ ಮಾತಿಗೆ ಸೈಲೆಂಟ್ ಆಗಿದ್ದಾರೆ. ಈ ವಿಚಾರವನ್ನು ಧನರಾಜ್ ಅವರು ಓಪನ್ ಆಗಿ ಮಾತನಾಡಿದ್ದಾರೆ.

ಇತ್ತೀಚೆಗೆ ರಜತ್ ಹಾಗೂ ಶೋಭಾ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದರು. ಸರಿಯಾಗಿ 50ನೇ ದಿನಕ್ಕೆ ಇವರನ್ನು ಕರೆದು ತರಲಾಗಿದೆ. ಶೋಭಾ ಶೆಟ್ಟಿ ಹಾಗೂ ರಜತ್ ಮಧ್ಯೆ ಯಾರು ನಾಯಕತ್ವದ ರೇಸ್​ನಲ್ಲಿ ಇರಬೇಕು ಎಂದು ಮನೆಯವರು ಆಯ್ಕೆ ಮಾಡಬೇಕಿತ್ತು. ಈ ಆಯ್ಕೆ ಮಾಡುವಾಗ ಮಂಜು ಅವರು ಶೋಭಾಗೆ ತಂಡದ ನಾಯಕತ್ವ ಪಡೆಯುವ ಅರ್ಹತೆ ಇಲ್ಲ ಎಂದರು. ಇದು ಶೋಭಾ ಅವರ ಸಿಟ್ಟಿಗೆ ಕಾರಣ ಆಯಿತು. ಅವರು ಮಂಜು ವಿರುದ್ಧ ತಿರುಗಿಬಿದ್ದರು.

ಮಂಜು ಹಾಗೂ ಶೋಭಾ ಮಧ್ಯೆ ದೊಡ್ಡ ಜಗಳವೇ ನಡೆದು ಹೋಗಿದೆ. ನಂತರ ಎಲ್ಲಾ ಸ್ಪರ್ಧಿಗಳು ಕಾರಣಗಳನ್ನು ನೀಡುತ್ತಾ ಹೋದರು. ಹನುಮಂತ ಕೂಡ ಶೋಭಾ ಅವರು ತಂಡದ ನಾಯಕತ್ವ ವಹಿಸಿಕೊಳ್ಳಲು ಅನರ್ಹರು ಎಂದರು. ‘ರಜತ್ ಅವರು ತಲೆ ಓಡಿಸುತ್ತಾರೆ. ಅವರು ಆಟದಲ್ಲಿ ಚೆನ್ನಾಗಿ ಇದ್ದಾರೆ. ನೀವು ಆಡ್ತೀರಾ ಎಂಬುದು ಗೊತ್ತಾಗಿಲ್ಲ’ ಎಂದರು ಹನುಮಂತ. ಇದಕ್ಕೆ ಶೋಭಾ ಯಾವುದೇ ತಕರಾರು ತೆಗೆದಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಶೋಭಾ ಶೆಟ್ಟಿ ಬಾಯ್​ಫ್ರೆಂಡ್ ವಿಚಾರ ರಿವೀಲ್ ಮಾಡಿದ ಶಿಶಿರ್

ಆ ಬಳಿಕ ಮಾತನಾಡಿದ ಧನರಾಜ್ ಅವರು, ‘ಶೋಭಾ ಅವರ ಬಾಯಿಯನ್ನೇ ಮುಚ್ಚಿಸಿದರಲ್ಲ. ಮಂಜು ಬಂದಾಗ ಬಾಯಿ ಮುಚ್ಚಿಲ್ಲ, ಗೌತಮಿ ಬಂದಾಗ ಸುಮ್ಮನೆ ಇರಲಿಲ್ಲ. ಆದರೆ, ನೀವು ಬಂದಾಗ ಮಾತ್ರ ಸೈಲೆಂಟ್ ಆದ್ರಲ್ಲ’ ಎಂದರು. ‘ಅವರ ಮಾತಿಗೆ ಇಡೀ ಮನೆ ಸೈಲೆಂಟ್ ಆಗಿದೆ’ ಎಂದು ಹನುಮಂತ ಅಭಿಪ್ರಾಯಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us