‘ಇವರೆಲ್ಲ ಮನುಷ್ಯರಾ?’; ಮುಖಕ್ಕೆ ಹೊಡೆದಂತೆ ಹೇಳಿದ ವರ್ತೂರು ಸಂತೋಷ್

ಟಾಸ್ಕ್ ಗೆದ್ದವರಿಗೆ ಬಿಗ್ ಬಾಸ್ ಪಾಯಿಂಟ್ಸ್ ನೀಡುತ್ತಿದ್ದರು. ಇದನ್ನು ಬಳಕೆ ಮಾಡಿಕೊಂಡು ಗ್ರೋಸರಿ ಪಡೆಯಲು ಬಿಗ್ ಬಾಸ್ ಅವಕಾಶ ನೀಡಿದರು. ಈ ವೇಳೆ ಎಲ್ಲರೂ ಕಿತ್ತಾಡಿಕೊಂಡಿದ್ದಾರೆ.

‘ಇವರೆಲ್ಲ ಮನುಷ್ಯರಾ?’; ಮುಖಕ್ಕೆ ಹೊಡೆದಂತೆ ಹೇಳಿದ ವರ್ತೂರು ಸಂತೋಷ್
ವರ್ತೂರು ಸಂತೋಷ್

Updated on: Dec 23, 2023 | 7:25 AM

ಬಿಗ್ ಬಾಸ್ ಮನೆಯಲ್ಲಿ ಗೆಳೆತನ, ಪ್ರೀತಿಗೆ ಬೆಲೆ ನೀಡೋಕೆ ಸ್ಪರ್ಧಿಗಳು ಹಿಂದೇಟು ಹಾಕುತ್ತಾರೆ. ಒಳ್ಳೆಯ ರೀತಿಯಲ್ಲಿ ವರ್ತಿಸುವ ಕೆಲವರು ನಂತರ ಉಲ್ಟಾ ಹೊಡೆಯುತ್ತಾರೆ. ಯಾರು ಯಾವಾಗ ಬೇಕಾದರೂ ಬದಾಗುತ್ತಾರೆ. ಈ ವಿಚಾರ ವರ್ತೂರು ಸಂತೋಷ್ (Varthur Santosh) ಅವರಿಗೆ ಸ್ಪಷ್ಟವಾಗಿದೆ. ಅವರು ಈ ವಿಚಾರವಾಗಿ ಮಾತನಾಡಿದ್ದಾರೆ. ‘ಇವರೆಲ್ಲ ಮನುಷ್ಯರಾ’ ಎಂದು ಪ್ರಶ್ನೆ ಮಾಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ‘ಬಿಗ್ ಬಾಸ್’ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಉಚಿತವಾಗಿ ಲೈವ್ ವೀಕ್ಷಿಸುವ ಅವಕಾಶ ಇದೆ.

ಬಿಗ್ ಬಾಸ್ ಮನೆಯಲ್ಲಿ ಹಣದ ಮಾತೇ ಬರುವುದಿಲ್ಲ. ಬಿಗ್ ಬಾಸ್ ಏನು ನೀಡುತ್ತಾರೋ ಅದನ್ನೇ ಬಳಕೆ ಮಾಡಿಕೊಳ್ಳಬೇಕು. ಆದರೆ, ಈ ವಾರ ಸ್ಪರ್ಧಿಗಳಿಗೆ ಒಂದು ಅವಕಾಶ ಸಿಕ್ಕಿತ್ತು. ಟಾಸ್ಕ್ ಗೆದ್ದವರಿಗೆ ಬಿಗ್ ಬಾಸ್ ಪಾಯಿಂಟ್ಸ್ ನೀಡುತ್ತಿದ್ದರು. ಇದನ್ನು ಬಳಕೆ ಮಾಡಿಕೊಂಡು ಗ್ರೋಸರಿ ಪಡೆಯಲು ಬಿಗ್ ಬಾಸ್ ಅವಕಾಶ ನೀಡಿದರು. ಈ ವೇಳೆ ಎಲ್ಲರೂ ಕಿತ್ತಾಡಿಕೊಂಡಿದ್ದಾರೆ.

ಯಾವುದೋ ವಿಚಾರ ಮಾತನಾಡುವಾಗ ಮೋಸ ಶಬ್ದವನ್ನು ಬಳಕೆ ಮಾಡಿದರು ತುಕಾಲಿ ಸಂತೋಷ್. ತನಿಷಾಗೆ ಮೋಸ ಆಗುತ್ತಿದೆ ಎಂದರು. ಈ ಮಾತನ್ನು ಕೇಳಿ ವರ್ತೂರು ಸಂತೋಷ್ ಅವರು ತಮ್ಮ ವಾದ ಮುಂದಿಟ್ಟರು. ‘200 ರೂಪಾಯಿ ತಂಡದ ಕಟ್ಟಿದ ತನಿಷಾ ಉತ್ತಮಳಾ ಅಥವಾ 1000 ಪಾಯಿಂಟ್ಸ್ ಕೊಟ್ಟು ತಂಡ ಕಟ್ಟಿದ ಸಂಗೀತ ಉತ್ತಮಳಾ? ಹಾಲು, ಬಾಳೆಹಣ್ಣು, ಮೂರು ಮೊಟ್ಟೆ ಕೊಟ್ಟು ಕ್ಷಮೆ ಕೇಳಿದ ಅವಳು (ತನಿಷಾ) ಇಂದು ಪಾಯಿಂಟ್ಸ್ ನೀಡಿ ದಿನಸಿ ಖರೀದಿ ಮಾಡಬೇಕು ಎಂದು ಹೇಳಿದಾಗ ಸೈಲೆಂಟ್ ಆದಳು. ಅವಳು ಉತ್ತಮಳಾ? ಇವರೆಲ್ಲಾ ಮನುಷ್ಯರಾ?’ ಎಂದು ವರ್ತೂರು ಸಂತೋಷ್ ಕೋಪದಿಂದ ಕೇಳಿದ್ದಾರೆ.

ಇದನ್ನೂ ಓದಿ: ಹಣ ಕೊಟ್ಟು ದಿನಸಿ ಪಡೆಯಲು ಬಿಗ್ ಬಾಸ್ ಅವಕಾಶ; ಮತ್ತೆ ದೊಡ್ಮನೆ ರಣರಂಗ

‘ಕ್ಯಾಪ್ಟನ್ ಆಗಬೇಕು ಎನ್ನುವ ಕಾರಣಕ್ಕೆ ಸ್ವಾರ್ಥ ಮೆರೆಯುತ್ತಿದ್ದಾರೆ. ಬೇಯದೇ ಇರುವ ಚಪಾತಿ ತಿಂದಿದ್ದೇನೆ. ಇವರೆಲ್ಲ ಮನುಷ್ಯರಾ’ ಎಂದು ಪ್ರಶ್ನೆ ಮಾಡಿದ್ದಾರೆ ಸಂತೋಷ್. ಅವರ ಮಾತನ್ನು ಅನೇಕ ವೀಕ್ಷಕರು ಒಪ್ಪಿದ್ದಾರೆ. ಅವರು ನಿಜವಾದ ಮಾತನ್ನು ಹೇಳಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us