ಹಳ್ಳಿಕಾರ್ ತಳಿ ಸಂರಕ್ಷಣೆ ಮೂಲಕ ಹೆಸರು ಮಾಡಿರುವ ವರ್ತೂರು ಸಂತೋಷ್ ಅವರಿಗೆ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಜನರಿಂದ ಅವರಿಗೆ ಭರ್ಜರಿ ಬೆಂಬಲ ಕೂಡ ಸಿಕ್ಕಿದೆ. ಆದರೆ ಅರ್ಧದಲ್ಲೇ ಅವರು ಆಟವನ್ನು ಕೈ ಚೆಲ್ಲಲು ಮುಂದಾಗಿದ್ದಾರೆ. ವೀಕ್ಷಕರು ಅವರಿಗೆ ಬರೋಬ್ಬರಿ 34 ಲಕ್ಷಕ್ಕೂ ಹೆಚ್ಚು ವೋಟ್ ಮಾಡಿದ್ದಾರೆ. ಜನರ ಅಭಿಪ್ರಾಯದ ವಿರುದ್ಧವಾಗಿ ಹೋಗಲು ತಾವು ಸಿದ್ಧರಿಲ್ಲ ಎಂದು ಕಿಚ್ಚ ಸುದೀಪ್ (Kichcha Sudeep) ಕೂಡ ಹೇಳಿದ್ದಾರೆ. ಹಾಗಿದ್ದರೂ ವರ್ತೂರು ಸಂತೋಷ್ (Varthur Santhosh) ಅವರು ಕಣ್ಣೀರು ಹಾಕುವುದು ನಿಲ್ಲಿಸಿಲ್ಲ. ನವೆಂಬರ್ 13ರ ಎಪಿಸೋಡ್ನಲ್ಲಿ ತಮ್ಮ ನಿರ್ಧಾರ ಏನು ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಭಾನುವಾರದ (ನವೆಂಬರ್ 13) ಸಂಚಿಕೆಯಲ್ಲಿ ವರ್ತೂರು ಸಂತೋಷ್ ಅವರನ್ನು ಮನವೊಲಿಸಲು ಇನ್ನುಳಿದ ಸ್ಪರ್ಧಿಗಳು ಪ್ರಯತ್ನಿಸಿದರು. ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ಅತಿಥಿಯಾಗಿ ಬಂದ ಸುಷ್ಮಾ ರಾವ್ ಸೇರಿದಂತೆ ಎಲ್ಲರೂ ಪದೇ ಪದೇ ಅದನ್ನೇ ಹೇಳಿದಾಗ ವರ್ತೂರು ಸಂತೋಷ್ ಅವರಿಗೆ ಇನ್ನೂ ಬೇಸರ ಆಯಿತು. ಮತ್ತೆ ಮತ್ತೇ ಅದೇ ವಿಷಯ ಕೆದಕಬೇಡಿ ಎಂದು ಅವರು ಸ್ವಲ್ಪ ಗರಂ ಆಗಿಯೇ ಹೇಳಿದರು.
ಇದನ್ನೂ ಓದಿ: Varthur Santhosh: ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದೇ ಬಿಕ್ಕಿಬಿಕ್ಕಿ ಅತ್ತ ವರ್ತೂರು ಸಂತೋಷ್
‘ಇಷ್ಟೆಲ್ಲ ಆದ ಮೇಲೆ ಇರು ಎಂದರೆ ಇರೋಕೆ ಆಗಲ್ಲ. ಚಿನ್ನದ ಚೈನ್ನಲ್ಲಿ ಕಟ್ಟಿ ಹಾಕಿದ್ರೂ ಇರೋಕೆ ಆಗಲ್ಲ’ ಎಂದು ವರ್ತೂರು ಸಂತೋಷ್ ಅವರು ಹೇಳಿದ್ದಾರೆ. ಮನೆಯಿಂದ ಹೇಗೆ ಹೊರಗೆ ಹೋಗಬೇಕು ಎಂಬ ಬಗ್ಗೆ ಅವರಿಗೆ ನಾನಾ ಆಲೋಚನೆಗಳು ಬರುತ್ತಿವೆ. ಒಂದು ವೇಳೆ ಬಿಗ್ ಬಾಸ್ ಕೊಟ್ಟ ಎಲ್ಲ ಟಾಸ್ಕ್ಗಳನ್ನು ಆಡದೇ ಸುಮ್ಮನೇ ಕುಳಿತುಬಿಟ್ಟರೆ ಏನಾಗುತ್ತದೆ ಎಂದು ಕೂಡ ಅವರು ಆಲೋಚಿಸಿದ್ದಾರೆ. ‘ಹಾಗೆಲ್ಲ ಮಾಡಿಕೊಳ್ಳಬೇಡಿ’ ಎಂದು ಮನೆ ಮಂದಿ ಬುದ್ಧಿ ಹೇಳಿದ್ದಾರೆ. ಏನೇ ಆದರೂ ವರ್ತೂರು ಸಂತೋಷ್ ಅವರು ಮನಸ್ಸು ಬದಲಾಯಿಸಿಲ್ಲ.
ಇದನ್ನೂ ಓದಿ: Varthur Santhosh: ಸ್ಪರ್ಧಿಗಳಿಗೆ ಹೊಡೆದು ಬಿಗ್ ಬಾಸ್ ಮನೆಯಿಂದ ಹೊರಬರಲು ವರ್ತೂರು ಸಂತೋಷ್ ಪ್ಲ್ಯಾನ್?
ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲ ಸ್ಪರ್ಧಿಗಳ ಮನೆಯಿಂದ ಊಟ ತರಿಸಲಾಗಿದೆ. ಈ ವೇಳೆ ವರ್ತೂರು ಸಂತೋಷ್ ಅವರು ಹೆಚ್ಚು ಎಮೋಷನಲ್ ಆದರು. ಅವರ ಮನೆಯಿಂದ ಊಟ ಬಂದಿಲ್ಲ. ಅವರನ್ನು ಡ್ರೋನ್ ಪ್ರತಾಪ್ ಸಮಾಧಾನ ಮಾಡಿದ್ದಾರೆ. ಇದಕ್ಕೂ ಮುನ್ನ ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ವರ್ತೂರು ಸಂತೋಷ್ ಅವರ ತಾಯಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದು ಕಾಣಿಸಿತ್ತು. ಆದರೆ ಭಾನುವಾರದ ಸಂಚಿಕೆಯಲ್ಲಿ ಅದು ಪ್ರಸಾರ ಆಗಿಲ್ಲ. ಸೋಮವಾರ (ನ.14) ಏನಾಗಲಿದೆ ಎಂಬುದನ್ನು ಕಾದುನೋಡಬೇಕು. ತಾಯಿಯ ಮಾತಿಗೆ ಅವರು ಬೆಲೆ ಕೊಡುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.