AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀ ಕನ್ನಡದಲ್ಲಿ ಹೊಸ ಧಾರಾವಾಹಿ; ರಿತ್ವಿಕ್ ಕೃಪಾಕರ್ ಹಾಗೂ ಅನು ಪ್ರಭಾಕರ್ ಅಭಿನಯದ ‘ಗೌರಿಪುತ್ರ’ ಶೀಘ್ರದಲ್ಲೇ ಪ್ರಾರಂಭ

ಜೀ ಕನ್ನಡ ವಾಹಿನಿಯಲ್ಲಿ 'ರಾಮಾಚಾರಿ' ಫೇಮ್ ರಿತ್ವಿಕ್ ಕೃಪಾಕರ್ ಹಾಗೂ ಹಿರಿಯ ನಟಿ ಅನು ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಗೌರಿಪುತ್ರ' ಹೊಸ ಧಾರಾವಾಹಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ತಾಯಿಯ ಗೌರವ ಮತ್ತು ತವರ ಸంతోಷವನ್ನು ಮರಳಿ ತಂದುಕೊಡಲು ಶ್ರಮಿಸುವ ಮಗನ ಭಾವನಾತ್ಮಕ ಕಥೆಯನ್ನು ಈ ಧಾರಾವಾಹಿ ಒಳಗೊಂಡಿದೆ.

ಜೀ ಕನ್ನಡದಲ್ಲಿ ಹೊಸ ಧಾರಾವಾಹಿ; ರಿತ್ವಿಕ್ ಕೃಪಾಕರ್ ಹಾಗೂ ಅನು ಪ್ರಭಾಕರ್ ಅಭಿನಯದ ‘ಗೌರಿಪುತ್ರ’ ಶೀಘ್ರದಲ್ಲೇ ಪ್ರಾರಂಭ
ಗೌರಿಪುತ್ರImage Credit source: Zee Kannada
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 08, 2026 | 8:42 AM

Share

ಮುಖ್ಯಾಂಶಗಳು

  • 'ರಾಮಾಚಾರಿ' ರಿತ್ವಿಕ್ ಕೃಪಾಕರ್ ಹೊಸ ಅಧ್ಯಾಯ
  • ಜೀ ಕನ್ನಡದಲ್ಲಿ 'ಗೌರಿಪುತ್ರ' ಆಗಿ ಎಂಟ್ರಿ
  • ಚಿತ್ರರಂಗದ ಹಿರಿಯ ನಟಿ ಅನು ಪ್ರಭಾಕರ್ ನಟನೆ

ಕಿರುತೆರೆ ವೀಕ್ಷಕರಿಗೆ ಸದಾ ಹೊಸ ಮಾದರಿಯ ಕಥೆಗಳನ್ನು ನೀಡುತ್ತಾ ಬಂದಿರುವ ಜೀ ಕನ್ನಡ ವಾಹಿನಿ, ಈಗ ಮತ್ತೊಂದು ಭಾವುಕ ಹಾಗೂ ಕುಟುಂಬ ಆಧಾರಿತ ಹೊಸ ಧಾರಾವಾಹಿ ‘ಗೌರಿಪುತ್ರ’ ಪ್ರಸಾರಕ್ಕೆ ಸಜ್ಜಾಗಿದೆ. ‘ರಾಮಾಚಾರಿ’ ಧಾರಾವಾಹಿಯ ಮೂಲಕ ಪ್ರತಿಯೊಬ್ಬ ಕನ್ನಡಿಗರ ಮನಗೆದ್ದು ಅಪಾರ ಜನಪ್ರಿಯತೆ ಗಳಿಸಿದ್ದ ನಟ ರಿತ್ವಿಕ್ ಕೃಪಾಕರ್ ಈ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಧಾರಾವಾಹಿಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಚಿತ್ರರಂಗದ ಹಿರಿಯ ಹಾಗೂ ಜನಪ್ರಿಯ ನಟಿ ಅನು ಪ್ರಭಾಕರ್ ಅವರು ಮುಖ್ಯ ಪಾತ್ರದಲ್ಲಿ (ಗೌರಿ) ಅಭಿನಯಿಸುತ್ತಿರುವುದು. ಜೊತೆಗೆ ಹಿರಿಯ ನಟ ರಮೇಶ್ ಭಟ್, ಮಹತಿ ಭಟ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

ತಾಯಿಯ ಗೌರವ ಹಾಗೂ ತವರ ನೆನಪಿನ ಭಾವನಾತ್ಮಕ ಕಥೆ

ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ ತಾಯಿಯ ಜನ್ಮದಿನದ ಅಂಗವಾಗಿ ಆಕೆಗೆ ವಿಭಿನ್ನ ಗಿಫ್ಟ್ ನೀಡುವ ಸನ್ನಿವೇಶ ಮೂಡಿಬಂದಿದೆ. ಕಾರು, ವಜ್ರದ ಹಾರಗಳಂತಹ ದುಬಾರಿ ಉಡುಗೊರೆಗಳಿಗಿಂತ ತಾಯಿಗೆ ಆಕೆಯ ‘ತವರು ಮನೆ’ ಅತ್ಯಂತ ಪ್ರಿಯವಾದುದು ಎಂಬುದನ್ನು ಅರಿತ ಮಗ (ರಿತ್ವಿಕ್), ತಾಯಿಯನ್ನು ಆಕೆಯ ಹಳೆಯ ತವರು ಮನೆಗೆ ಕರೆದುಕೊಂಡು ಹೋಗುತ್ತಾನೆ.

View this post on Instagram

A post shared by Zee Kannada (@zeekannada)

ಆದರೆ ಗತಕಾಲದಲ್ಲಿ ಮದುವೆಯಾದ ಕಾರಣಕ್ಕೆ ಕುಟುಂಬಸ್ಥರಿಂದ ಹೊರಹಾಕಲ್ಪಟ್ಟು, ಕಹಿ ನೆನಪುಗಳನ್ನು ಹೊಂದಿರುವ ಆ ತವರಿಗೆ ಕಾಲಿಡಲು ತಾಯಿ ಹಿಂಜರಿಯುತ್ತಾಳೆ.ಆದರೆ, ಮಗ ನಾನಿದ್ದೇನೆ ಎನ್ನುತ್ತಾನೆ. ತಾಯಿಯ ಕಳೆದುಹೋದ ಗೌರವ ಹಾಗೂ ಸಂತೋಷವನ್ನು ಮರಳಿ ತಂದುಕೊಡಲು ಮಗ ನಿಲ್ಲುವ ಭಾವನಾತ್ಮಕ ಕಥಾಹಂದರವನ್ನು ತೋರಿಸಲಾಗಿದೆ.

ಇದನ್ನೂ ಓದಿ: ಪ್ರಿಯಾಂಕಾ ಉಪೇಂದ್ರ ಚಿತ್ರಕ್ಕೆ ಅನು ಪ್ರಭಾಕರ್ ಶುಭ ಹಾರೈಕೆ

ಅನು ಪ್ರಭಾಕರ್ ಅವರ ಅಭಿನಯ ಹಾಗೂ ರಿತ್ವಿಕ್ ಅವರ ಮಾಸ್ ಮತ್ತು ಕ್ಲಾಸ್ ಲುಕ್ ಧಾರಾವಾಹಿಯ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ‘ಗೌರಿಪುತ್ರ’ ಶೀಘ್ರದಲ್ಲೇ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ
‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ