ಟೈಗರ್ ಶ್ರಾಫ್ ದಾಳಿಕೋರರಿಂದ ರಣ್​​ಬೀರ್ ಕಪೂರ್ ಮೇಲೂ ದಾಳಿಗೆ ಸಂಚು

ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಿದ್ದ ದಾಳಿಕೋರರು ರಣ್​​ಬೀರ್ ಕಪೂರ್ ಮೇಲೂ ದಾಳಿಗೆ ಯೋಜನೆ ಹಾಕಿದ್ದು, ರಣ್​ಬೀರ್ ಕಪೂರ್ ಅವರ ಮನೆಯ ಬಳಿ ಬಂದು ವೀಕ್ಷಿಸಿ ತೆರಳಿದ್ದರು. ವಿಷಯ ಬಹಿರಂಗವಾಗುತ್ತಿದ್ದಂತೆ ಪೊಲೀಸರು ರಣ್​​ಬೀರ್ ಕಪೂರ್ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಚಾಲ್ತಿಯಲ್ಲಿದ್ದು, ಇನ್ನೂ ಯಾವ ನಟರುಗಳ ಮೇಲೆ ದಾಳಿಗೆ ಆರೋಪಿಗಳು ಸಂಚು ನಡೆಸಿದ್ದರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಚಾಲ್ತಿಯಲ್ಲಿದೆ.

ಟೈಗರ್ ಶ್ರಾಫ್ ದಾಳಿಕೋರರಿಂದ ರಣ್​​ಬೀರ್ ಕಪೂರ್ ಮೇಲೂ ದಾಳಿಗೆ ಸಂಚು
Ranbir Kapoor House

Updated on: Oct 22, 2026 | 10:59 AM

ಮುಖ್ಯಾಂಶಗಳು

  • ರಣ್​​ಬೀರ್ ಕಪೂರ್ ಮೇಲೆ ದಾಳಿಗೆ ಸಂಚು
  • ಟೈಗರ್ ಶ್ರಾಫ್ ಪ್ರಕರಣ ತನಿಖೆಯಲ್ಲಿ ಮಾಹಿತಿ ಬಹಿರಂಗ
  • ರಣ್​​ಬೀರ್ ಕಪೂರ್ ಮನೆಗೆ ಭದ್ರತೆ

ಟೈಗರ್ ಶ್ರಾಫ್ ಅವರ ವಾಹನದ ಮೇಲಿನ ಗುಂಡಿನ ದಾಳಿ ಪ್ರಕರಣದ ತನಿಖೆ ಜಾರಿಯಲ್ಲಿದೆ. ಬಂಧಿಸಲ್ಪಟ್ಟ ಆರೋಪಿಗಳು ಹಲವು ಮಹತ್ವದ ಅಂಶಗಳನ್ನು ಹೊರಗೆ ಹಾಕಿದ್ದಾರೆ. ತನಿಖೆ ವೇಳೆ ಹೊರಬಿದ್ದಿರುವ ಆಘಾತಕಾರಿ ಅಂಶವೆಂದರೆ ದಾಳಿಕೋರರು ರಣ್​​ಬೀರ್ ಕಪೂರ್ ಮೇಲೂ ದಾಳಿಗೆ ಯೋಜನೆ ಹಾಕಿದ್ದು, ರಣ್​ಬೀರ್ ಕಪೂರ್ ಅವರ ಮನೆಯ ಬಳಿ ಬಂದು ವೀಕ್ಷಿಸಿ ತೆರಳಿದ್ದರು. ವಿಷಯ ಬಹಿರಂಗವಾಗುತ್ತಿದ್ದಂತೆ ಪೊಲೀಸರು ರಣ್​​ಬೀರ್ ಕಪೂರ್ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಚಾಲ್ತಿಯಲ್ಲಿದ್ದು, ಇನ್ನೂ ಯಾವ ನಟರುಗಳ ಮೇಲೆ ದಾಳಿಗೆ ಆರೋಪಿಗಳು ಸಂಚು ನಡೆಸಿದ್ದರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಚಾಲ್ತಿಯಲ್ಲಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ನಂಟಿದೆ ಎನ್ನಲಾದ ಈ ಸಂಚಿನ ತನಿಖೆಯನ್ನು ಪೊಲೀಸರು ಮತ್ತಷ್ಟು ವಿಸ್ತರಿಸಿದ್ದಾರೆ. ಶಂಕಿತರ ಓಡಾಟ, ಶಸ್ತ್ರಾಸ್ತ್ರಗಳ ಸರಬರಾಜು ಮತ್ತು ಇತರೆ ವ್ಯಕ್ತಿಗಳ ಕೈವಾಡವಿರುವ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ವರದಿಯ ಪ್ರಕಾರ, ಗ್ಯಾಂಗ್‌ನ ಸಹಚರನೆನ್ನಲಾದ ಅನಿಲ್ ಪಂಡಿತ್ ಎಂಬಾತನ ಸೂಚನೆಯ ಮೇರೆಗೆ ಟೈಗರ್ ಶ್ರಾಫ್ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮುಂಬೈ ಪೊಲೀಸ್ ವರದಿಗಳ ಪ್ರಕಾರ, ಆರೋಪಿಗಳು ರಣಬೀರ್ ಕಪೂರ್ ಅವರ ಬಾಂದ್ರಾ ನಿವಾಸದ ಮೇಲೂ ನಿಗಾ ಇರಿಸಿ, ಮನೆಯ ಸುತ್ತಾ ಓಡಾಡಿ ದಾಳಿಗೆ ಯೋಜನೆ ರೂಪಿಸುವ ಪ್ರಯತ್ನ ಮಾಡಿದ್ದರು. ಇದು ಈ ಪ್ರಕರಣದ ತನಿಖೆಗೆ ಹೊಸ ತಿರುವು ನೀಡಿದೆ. ಬಾಲಿವುಡ್‌ನ ಇತರೆ ಗಣ್ಯರ ಮೇಲೆ ದಾಳಿ ಮಾಡುವ ಯೋಜನೆ ಇತ್ತು ಎಂಬ ಬಗ್ಗೆ ತನಿಖಾಧಿಕಾರಿಗಳ ತನಿಖೆಯಿಂದ ತಿಳಿದು ಬಂದಿದೆ. ಗುಂಡಿನ ದಾಳಿ ಘಟನೆಗೆ ಮುನ್ನ ಶಂಕಿತರು ಎಲ್ಲೆಲ್ಲಿ ಓಡಾಡಿದ್ದರು. ಯಾರು ಯಾರೊಂದಿಗೆ ಆ ಮಾಹಿತಿಯನ್ನು ಹಂಚಿಕೊಂಡಿದ್ದರು ಎಂಬಿತ್ಯಾದಿ ವಿಷಯಗಳ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ;ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಎಐ ವಿಡಿಯೋ, ಸುಳ್ಳು ಮಾಹಿತಿ ವಿರುದ್ಧ ಎಚ್ಚರಿಕೆ

ಶಂಕಿತರು ಮುಂಬೈಗೆ ತಲುಪಿದ ನಂತರ ಆರಂಭದಲ್ಲಿ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಲು ಯೋಜಿಸಿದ್ದರು. ಅವರು ಸಲ್ಮಾನ್ ನಿವಾಸದ ಬಳಿ ತೆರಳಿ ಪರಿಶೀಲನೆ ನಡೆಸಿದ್ದರು, ಆದರೆ ಮನೆಯ ಹೊರಗೆ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿರುವುದನ್ನು ಗಮನಿಸಿ ತಮ್ಮ ಯೋಜನೆಯನ್ನು ಬದಲಾಯಿಸಿದರು. ಆ ಬಳಿಕ ಆರೋಪಿಗಳು ಟೈಗರ್ ಶ್ರಾಫ್ ಕಡೆಗೆ ತಮ್ಮ ಗಮನಹರಿಸಿದರು ಎನ್ನಲಾಗಿದೆ. ಟೈಗರ್ ಶ್ರಾಫ್ ಪ್ರತಿ ಭಾನುವಾರ ಜುಹುವಿನಲ್ಲಿರುವ ಫುಟ್‌ಬಾಲ್ ಮೈದಾನಕ್ಕೆ ಭೇಟಿ ನೀಡುತ್ತಾರೆ ಎಂಬುದನ್ನು ಶಂಕಿತರು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಕೊಂಡಿದ್ದರು ಎಂದು ಪೊಲೀಸ್ ವರದಿಗಳು ತಿಳಿಸಿವೆ.

ಅವರ ಸಾರ್ವಜನಿಕ ಓಡಾಟದಲ್ಲಿ ಭದ್ರತಾ ವ್ಯವಸ್ಥೆಗಳು ಕಡಿಮೆ ಇರುವುದರಿಂದ, ಅವರನ್ನು ಸುಲಭವಾದ ಗುರಿ ಮಾಡಿಕೊಳ್ಳಬಹುದು ಎಂದು ಯೋಜಿಸಿ ಫುಟ್​​ಬಾಲ್ ಗ್ರೌಂಡ್​​ನಿಂದ ಹೊರ ಬಂದಾಗ ಅವರನ್ನು ಕೊಲ್ಲುವ ಯತ್ನ ಮಾಡಿದರು. ಆರೋಪಿಗಳ ಕರೆ, ಸಂದೇಶಗಳ ಮಾಹಿತಿ ಇನ್ನಿತರೆಗಳನ್ನು ಸಂಗ್ರಹಿಸಲಾಗುತ್ತದೆ. ಅಲ್ಲದೆ ಸೆಲೆಬ್ರಿಟಿಗಳ ಮನೆಗಳ ಬಳಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ವರೆಗೆ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಮೂವರು ಬಂದೂಕು ಚಲಾಯಿಸಿದ ಆರೋಪಿಗಳು, ಇಬ್ಬರು ಬಂದೂಕು ಸರಬರಾಜು ಮಾಡಿದವರು. ಇನ್ನಿಬ್ಬರು ಯುವತಿಯರು ಬಂದೂಕನ್ನು ಶೂಟರ್​​ಗಳ ಕೈಗೆ ತಲುಪಿಸಿದ್ದವರು. ಒಟ್ಟು ಏಳು ಮಂದಿಯ ಬಂಧನವಾಗಿದ್ದು, ಇನ್ನೂ ಕೆಲ ಆರೋಪಿಗಳ ಬಂಧನ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Thu, 22 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us