AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟರ್​​ಗಳ ಮೊದಲ ಟಾರ್ಗೆಟ್ ಆಮಿರ್ ಖಾನ್, ಅದು ಬದಲಾಗಿದ್ದು ಏಕೆ?

ಟೈಗರ್ ಶ್ರಾಫ್ ಮೇಲಿನ ದಾಳಿಗೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಮಹತ್ವದ ವಿಷಯವನ್ನು ಆರೋಪಿಗಳು ಹೊರಹಾಕಿದ್ದಾರೆ. ಅಸಲಿಗೆ ಶೂಟರ್​​ಗಳ ಮೊದಲ ಗುರಿ ಆಗಿದ್ದಿದ್ದು ಆಮಿರ್ ಖಾನ್ ಅಂತೆ. ಆದರೆ ಅದನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಆಮಿರ್ ಖಾನ್ ಮೇಲೆ ದಾಳಿಗೆ ಯೋಜಿಸಲು ಕಾರಣ ಏನಾಗಿತ್ತು, ಯೋಜನೆ ಬದಲಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ...

ಶೂಟರ್​​ಗಳ ಮೊದಲ ಟಾರ್ಗೆಟ್ ಆಮಿರ್ ಖಾನ್, ಅದು ಬದಲಾಗಿದ್ದು ಏಕೆ?
Aamir Khan Tiger Shroff
ಮಂಜುನಾಥ ಸಿ.
|

Updated on: Oct 27, 2026 | 11:42 AM

Share

ಮುಖ್ಯಾಂಶಗಳು

  • ಟೈಗರ್ ಶ್ರಾಫ್ ದಾಳಿಕೋರರ ವಿಚಾರಣೆ
  • ಆಮಿರ್ ಖಾನ್ ಮೇಲೆ ದಾಳಿಗೆ ಯೋಜನೆ
  • ಯೋಜನೆ ಬದಲಾಗಿದ್ದು ಹೇಗೆ?

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ದಾಳಿಯ ಘಟನೆ ಬಾಲಿವುಡ್​​ ಅನ್ನು ಅಲುಗಾಡಿಸಿದೆ. ಮುಂಬೈ ಪೊಲೀಸರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಮಹತ್ವದ ವಿಷಯವನ್ನು ಆರೋಪಿಗಳು ಹೊರಹಾಕಿದ್ದಾರೆ. ಅಸಲಿಗೆ ಶೂಟರ್​​ಗಳ ಮೊದಲ ಗುರಿ ಆಗಿದ್ದಿದ್ದು ಆಮಿರ್ ಖಾನ್ ಅಂತೆ. ಆದರೆ ಅದನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಆಮಿರ್ ಖಾನ್ ಮೇಲೆ ದಾಳಿಗೆ ಯೋಜಿಸಲು ಕಾರಣ ಏನಾಗಿತ್ತು, ಯೋಜನೆ ಬದಲಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ…

ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಿದ ಮೂವರು ಯುವಕರು ಮುಂಬೈಗೆ ಸೆಪ್ಟೆಂಬರ್ 20ರಂದೇ ಬಂದು ತಿಂಗಳ ಕಾಲ ಹಲವು ಸ್ಟಾರ್ ನಟರ ಬಳಿ ಗಸ್ತು ತಿರುಗಿದ್ದಾರೆ. ಮಾಹಿತಿ ಕಲೆ ಹಾಕಿದ್ದಾರೆ. ಅವರ ಮೊದಲ ಟಾರ್ಗೆಟ್ ಸಲ್ಮಾನ್ ಖಾನ್ ಆಗಿತ್ತು. ಸಲ್ಮಾನ್ ಖಾನ್ ಮನೆಯ ಬಳಿ ಓಡಾಡಿದ ಅವರಿಗೆ ಸಲ್ಮಾನ್ ಖಾನ್​​ ಅವರ ಭದ್ರತೆ ನೋಡಿ, ಸಲ್ಮಾನ್ ಖಾನ್ ಹತ್ತಿರವೂ ಹೋಗಲಾಗುವುದಿಲ್ಲ ಎಂದು ಗೊತ್ತಾಗಿದೆ. ಬಳಿಕ ಅವರು ಆಮಿರ್ ಖಾನ್ ಅವರನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ.

ಆಮಿರ್ ಖಾನ್ ಮನೆಯ ಬಳಿಯೂ ಶೂಟರ್​​ಗಳು ಗಸ್ತು ತಿರುಗಿದ್ದಾರೆ ಆದರೆ ಆಮಿರ್ ಖಾನ್ ಮನೆಯಿಂದ ಹೊರಗೇ ಬರುವುದಿಲ್ಲ. ಹೊರಗೆ ಸಹ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿದು ಆಮಿರ್ ಖಾನ್ ಮೇಲೆ ದಾಳಿ ಅಸಾಧ್ಯ ಎಂದು ತಿಳಿದು ಮತ್ತೆ ತಮ್ಮ ಯೋಜನೆ ಬದಲಾವಣೆ ಮಾಡಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಅಮಿತಾಬ್ ಬಚ್ಚನ್ ಅವರುಗಳ ಮನೆಗಳ ಬಳಿಯೂ ಗಸ್ತು ತಿರುಗಿ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಅವರು ಟೈಗರ್ ಶ್ರಾಫ್ ಹೆಚ್ಚಾಗಿ ಹೊರ ಬರುವುದು ಅಭಿಮಾನಿಗಳೊಟ್ಟಿಗೆ ಬೆರೆಯುವುದು, ಸೆಲ್ಫಿ ತೆಗೆದುಕೊಳ್ಳುವುದು ಗಮನಿಸಿ ಟೈಗರ್ ಶ್ರಾಫ್ ಸುಲಭದ ಟಾರ್ಗೆಟ್ ಎಂದು ನಿರ್ಧರಿಸಿ ಅವರ ಮೇಲೆ ದಾಳಿಗೆ ಯೋಜನೆ ರೂಪಿಸಿದ್ದಾರೆ.

ಇದನ್ನೂ ಓದಿ:ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟ

ಆಮಿರ್ ಖಾನ್ ಟಾರ್ಗೆಟ್ ಆಗಿದ್ದು ಏಕೆ?

ಈ ವರ್ಷದ ಜುಲೈನಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೆಂದು ಹೇಳಿಕೊಂಡ ಅಝೂ ಬಿಷ್ಣೋಯ್ ಎಂಬಾತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸ್ಕ್ರೀನ್‌ಶಾಟ್ ಮತ್ತು ಆಡಿಯೋ ಕ್ಲಿಪ್‌ನಲ್ಲಿ, ಆಮಿರ್ ಖಾನ್ ಅವರು ಗೌರಿ ಅವರೊಂದಿಗೆ ಜುಲೈ 5 ರಂದು ಮದುವೆಯಾಗಿದ್ದು ಈ ವಿವಾಹವು ‘ಸನಾತನ ಧರ್ಮ ಮತ್ತು ರಾಷ್ಟ್ರಕ್ಕೆ ವಿರೋಧವಾಗಿದೆ’ ಎಂದು ಆರೋಪಿಸಿ ಬೆದರಿಕೆ ಹಾಕಿದ್ದನು. ಈ ರೀತಿಯ ಕೃತ್ಯಗಳನ್ನು ಗ್ಯಾಂಗ್ ಸಹಿಸುವುದಿಲ್ಲ ಮತ್ತು ಬೇಗನೆ ಪ್ರತಿಕ್ರಿಯಿಸುತ್ತದೆ ಎಂದು ಸಂದೇಶದಲ್ಲಿ ಎಚ್ಚರಿಸಲಾಗಿತ್ತು. ಗೌರಿ ಅವರನ್ನು ಮದುವೆ ಆಗಿದ್ದಕ್ಕಾಗಿಯೇ ಆಮಿರ್ ಅನ್ನು ಕೊಲ್ಲುವ ಯೋಜನೆ ಮಾಡಲಾಗಿತ್ತು ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More