ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟ
ಅತಿಥಿ ಪಾತ್ರಗಳಲ್ಲೇ ನಟಿಸದ ಆಮಿರ್ ಖಾನ್ ಸಹ ದಕ್ಷಿಣದ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಮಾತ್ರವೇ ಅಲ್ಲದೆ ಸಲ್ಮಾನ್ ಖಾನ್, ಹೃತಿಕ್ ರೋಷನ್, ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಇನ್ನೂ ಕೆಲವು ಸ್ಟಾರ್ ನಟ-ನಟಿಯರು ಸಹ ದಕ್ಷಿಣದ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇದೀಗ ಮತ್ತೊಬ್ಬ ಬಾಲಿವುಡ್ನ ಜನಪ್ರಿಯ ನಟ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿರಿಸುತ್ತಿದ್ದಾರೆ. ಅವರೇ ರಿತೇಶ್ ದೇಶ್ಮುಖ್.

ಮುಖ್ಯಾಂಶಗಳು
- ದಕ್ಷಿಣಕ್ಕೆ ಬಂದ ಬಾಲಿವುಡ್ನ ಜನಪ್ರಿಯ ನಟ
- ಜೆನಿಲಿಯಾ ಡಿಸೋಜಾ ಪತಿ ರಿತೇಶ್ ದೇಶ್ಮುಖ್
- ತೆಲುಗು ಸಿನಿಮಾನಲ್ಲಿ ನಟಿಸಲಿರುವ ರಿತೇಶ್ ದೇಶ್ಮುಖ್
ಬಾಲಿವುಡ್ನ ಹಲವಾರು ಸ್ಟಾರ್ ನಟರು ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಅತಿಥಿ ಪಾತ್ರಗಳಲ್ಲೇ ನಟಿಸದ ಆಮಿರ್ ಖಾನ್ ಸಹ ದಕ್ಷಿಣದ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಮಾತ್ರವೇ ಅಲ್ಲದೆ ಸಲ್ಮಾನ್ ಖಾನ್, ಹೃತಿಕ್ ರೋಷನ್, ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಇನ್ನೂ ಕೆಲವು ಸ್ಟಾರ್ ನಟ-ನಟಿಯರು ಸಹ ದಕ್ಷಿಣದ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇದೀಗ ಮತ್ತೊಬ್ಬ ಬಾಲಿವುಡ್ನ ಜನಪ್ರಿಯ ನಟ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿರಿಸುತ್ತಿದ್ದಾರೆ. ಅವರೇ ರಿತೇಶ್ ದೇಶ್ಮುಖ್.
ಮಹಾರಾಷ್ಟ್ರದ ಮಾಜಿ ಸಿಎಂ ವಿಲಾಸ್ರಾವ್ ದೇಶ್ಮುಖ್ ಅವರ ಪುತ್ರ, ಬಾಲಿವುಡ್ನ ಜನಪ್ರಿಯ ನಟ ರಿತೇಶ್ ದೇಶ್ಬುಖ್ ಅವರು ದಶಕಗಳಿಂದಲೂ ಹಿಂದಿ ಸಿನಿಮಾನಲ್ಲಿ ಹಲವಾರು ರೀತಿಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಇದೀಗ ಇವರು ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದು, ಚಿತ್ರೀಕರಣದಲ್ಲಿ ಸಹ ಪಾಲ್ಗೊಂಡಿದ್ದಾರೆ.
ರಿತೇಶ್ ಅವರು ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಅವರ ಪತಿಯಾಗಿದ್ದು, ಜೆನಿಲಿಯಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು. ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿ, ಸ್ಟಾರ್ ನಟಿ ಎನಿಸಿಕೊಂಡಿದ್ದರು. ತೆಲುಗಿನಲ್ಲಿ ಸ್ಟಾರ್ ಆಗಿ ಮೆರಿದ್ದಿದ್ದ ಜೆನಿಲಿಯಾ ಅವರ ಪತಿ ರಿತೇಶ್, ತೆಲುಗು ಚಿತ್ರರಂಗಕ್ಕೆ ಕಾಲಿರಿಸುತ್ತಿರುವುದು ವಿಶೇಷ.
ಇದನ್ನೂ ಓದಿ:ಬಾಲಿವುಡ್ಗೆ ಹಾರಲಿರುವ ಮಂಗಳೂರು ಮೂಲದ ನಟಿ ಕೃತಿ ಶೆಟ್ಟಿ
ತೆಲುಗು ಚಿತ್ರರಂಗದಲ್ಲಿ ಜೆನಿಲಿಯಾ ಡಿಸೋಜಾ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾದ ನಾಯಕ ನಟ ರಾಮ್, ಇದೇ ಮೊದಲ ಬಾರಿಗೆ ಸಿನಿಮಾ ಒಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಮ್ ನಿರ್ದೇಶಿಸುತ್ತಿರುವ ಸಿನಿಮಾನಲ್ಲಿ ರಿತೇಶ್ ದೇಶ್ಮುಖ್ ನಟನೆ ಮಾಡುತ್ತಿದ್ದಾರೆ. ರಾಮ್ ಹಾಗೂ ಜೆನಿಲಿಯಾ ಕೆಲ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅದೇ ರಾಮ್, ಜೆನಿಲಿಯಾ ಪತಿಯನ್ನು ತೆಲುಗಿಗೆ ಕರೆದುಕೊಂಡು ಬಂದಿದ್ದಾರೆ.
ರಿತೇಶ್ ದೇಶ್ಮುಖ್ ನಟನೆಯ ‘ರಾಜಾ ಶಿವಾಜಿ’ ಸಿನಿಮಾ ಕೆಲ ತಿಂಗಳ ಹಿಂದಷ್ಟೆ ಹಿಂದಿ ಮತ್ತು ಮರಾಠಿಯಲ್ಲಿ ರಿಲೀಶ್ ಆಗಿತ್ತು. ಸಿನಿಮಾನಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟನೆ ಮಾಡಿದ್ದರು. ಇದೀಗ ಅವರು ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದು, ಬಾಲಿವುಡ್ನಲ್ಲಿ ಪಡೆಯಲಾಗದಿದ್ದ ಭಾರಿ ದೊಡ್ಡ ಯಶಸ್ಸನ್ನು ತೆಲುಗಿನಲ್ಲಾದರೂ ಪಡೆಯುತ್ತಾರಾ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




