ಐಪಿಎಲ್ ಮ್ಯಾಚ್ ನೋಡಲು ಬಂದ ಸ್ಟಾರ್ ನಟನಿಗೆ ಯಾರು ಎಂದು ಪ್ರಶ್ನೆ; ಮುಂದೇನಾಯ್ತು?

ಐಪಿಎಲ್ ಪಂದ್ಯ ನೋಡಲು ಬಂದ ಖ್ಯಾತ ನಟ ವಿಕ್ರಿ ವೆಂಕಟೇಶ್ ಅವರನ್ನು ಕೆಲವರು ಯಾರು ಎಂದು ಪ್ರಶ್ನಿಸಿದ್ದಾರೆ. ಹೈದರಾಬಾದ್ ಹೋಂ ಮ್ಯಾಚ್‌ಗಳಲ್ಲಿ ಎಸ್ಆರ್‌ಹೆಚ್ ಬಾವುಟ ಹಿಡಿದು ಕಾಣಿಸಿಕೊಳ್ಳುವ ವೆಂಕಟೇಶ್‌ರನ್ನು ಗುರುತಿಸದಿದ್ದಾಗ, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಶಾರುಖ್ ಖಾನ್ ಅವರೊಂದಿಗೆ ವೆಂಕಟೇಶ್ ಕ್ಲಿಪ್ ಹಂಚಿಕೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಮ್ಯಾಚ್ ನೋಡಲು ಬಂದ ಸ್ಟಾರ್ ನಟನಿಗೆ ಯಾರು ಎಂದು ಪ್ರಶ್ನೆ; ಮುಂದೇನಾಯ್ತು?
ವೆಂಕಟೇಶ್

Updated on: Apr 22, 2026 | 8:51 AM

ಐಪಿಎಲ್ ಪಂದ್ಯ ನೋಡಲು ಅನೇಕ ಸೆಲೆಬ್ರಿಟಿಗಳು ಆಗಮಿಸುತ್ತಾರೆ. ಅವರಿಗೆ ವಿಐಪಿ ಸೌಲಭ್ಯ ಸಿಗುತ್ತದೆ. ವಿಶೇಷ ಆಸನದಲ್ಲಿ ಅವರನ್ನು ಕೂರಿಸಲಾಗುತ್ತದೆ. ಟಿವಿಯಲ್ಲೂ ಪದೇ ಪದೇ ಅವರನ್ನೇ ತೋರಿಸಲಾಗುತ್ತದೆ. ಆದರೆ, ಈಗ ಟಾಲಿವುಡ್​ ಸ್ಟಾರ್​ ನಟನಿಗೆ ಅವಮಾನ ಆಗಿದೆ. ಹೈದರಾಬಾದ್ ಪಂದ್ಯ ನೋಡಲು ಬಂದ ವಿಕ್ಟರಿ ವೆಂಕಟೇಶ್​​ ಅವರನ್ನು ಯಾರು ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹೈದರಾಬಾದ್ ಹೋಂ ಮ್ಯಾಚ್ ನೋಡಲು ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ಹಾಜರಿ ಹಾಕುತ್ತಿದ್ದಾರೆ. ಅವರು ಹೈದರಾಬಾದ್ ಬಾವುಟ ಹಿಡಿದು ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಕೆಲ ಉತ್ತರ ಭಾರತದವರಿಗೆ ಆ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

‘ಕೈಯಲ್ಲಿ ಹೈದರಾಬಾದ್ ತಂಡದ ಬಾವುಟ ಹಿಡಿದಿರುವ ಈ ವ್ಯಕ್ತಿ ಯಾರು? ಎಸ್​​ಆರ್​​ಎಚ್​ ತಂಡ ಹೈದರಾಬಾದ್‌ನಲ್ಲಿ ಆಡುವಾಗ ನಾನು ಯಾವಾಗಲೂ ಅವರನ್ನು ನೋಡುತ್ತೇನೆ. ನಾನು ಅವರನ್ನು ಯಾವುದೋ ಸಿನಿಮಾದಲ್ಲಿ ನೋಡಿದಂತೆ ಇದೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಖ್ಯಾತ ತೆಲುಗು ನಟ ಎಂದು ಹೇಳಿದ್ದಾರೆ.

ಇನ್ನೂ ಕೆಲವರು ಒಂದು ವಿಶೇಷ ಕ್ಲಿಪ್​ ಹಂಚಿಕೊಂಡಿದ್ದಾರೆ. ಈ ಕ್ಲಿಪ್​​ನಲ್ಲಿ ಶಾರುಖ್ ಖಾನ್ ಅವರು ವಿಕ್ಟರಿ ವೆಂಕಟೇಶ್​​​ಗೆ ನಮಸ್ಕಾರ ಮಾಡುತ್ತಿರುವ ದೃಶ್ಯ ಇದೆ. ‘ಶಾರುಖ್ ಅವರನ್ನು ಕೇಳಿ, ಆ ವ್ಯಕ್ತಿ ಯಾರೆಂದು ಹೇಳುತ್ತಾರೆ’ ಎಂದು ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:50 am, Wed, 22 April 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us