ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ಸೈಲೆಂಟ್ ಆಗಿದ್ದರು. ಅವರ ಸಿನಿಮಾಗಳು ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ನೆಲಕಚ್ಚಿದೆ. ಈ ಬೆನ್ನಲ್ಲೇ ಅವರು ‘ವಿಡಿ 12’ ಚಿತ್ರದ ಪೋಸ್ಟರ್ ಅನಾವರಣ ಮಾಡಿದ್ದಾರೆ. ಈ ಪೋಸ್ಟರ್ನಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಮಾರ್ಚ್ 28ಕ್ಕೆ ಥಿಯೇಟರ್ಗೆ ಅಪ್ಪಳಿಸಲಿದೆ. ಚಿತ್ರದ ಮೊದಲ ಪೋಸ್ಟರ್ ಗಮನ ಸೆಳೆದಿದೆ.
ವಿಜಯ್ ದೇವರಕೊಂಡ ಅವರು ಬಿಗ್ ಬಜೆಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಅವರು ಈ ಮೊದಲು ಬಿಗ್ ಬಜೆಟ್ ಸಿನಿಮಾ ‘ಲೈಗರ್’ನಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಈಗ ಅವರು ‘ವಿಡಿ 12’ ಚಿತ್ರದ ಮೂಲಕ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಮೊದಲ ಲುಕ್ನಲ್ಲಿ ಅವರ ಗೆಟಪ್ ಸಖತ್ ರಗಡ್ ಆಗಿದೆ. ಅವರು ಕೂದಲನ್ನು ಕಟ್ ಮಾಡಿಸಿದ್ದಾರೆ. ‘ಅವನ ಡೆಸ್ಟಿನಿ ಅವನಿಗೆ ಕಾಯುತ್ತಿದೆ’ ಎಂದು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ.
ವಿಜಯ್ ದೇವರಕೊಂಡ ಅವರ ಈ ಫೋಟೋಗೆ ರಶ್ಮಿಕಾ ಮಂದಣ್ಣ, ರಾಶಿ ಖಾನ್ ಸೇರಿ ಅನೇಕರು ಫೈಯರ್ ಎಮೋಜಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅವರ ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್ ಲೀಕ್ ಆಗಿತ್ತು. ಅವರು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ತಂಡ ಶ್ರೀಲಂಕಾದಲ್ಲಿ ಶೂಟ್ ಮಾಡಿದೆ.
ಇದನ್ನೂ ಓದಿ: ವಿಜಯ್ ದೇವರಕೊಂಡಗೆ ಬರ್ತ್ಡೆ ವಿಶ್ ಮಾಡಲೇ ಇಲ್ಲ ರಶ್ಮಿಕಾ; ಮೂಡಿದೆ ಅನುಮಾನ
‘ಸಿತಾರಾ ಎಂಟರ್ಟೇನ್ಮೆಂಟ್’ ಮೂಲಕ ಈ ಸಿನಿಮಾ ಸಿದ್ಧವಾಗುತ್ತಿದೆ. ವಿಜಯ್ ಜೊತೆ ಭಾಗ್ಯಶ್ರೀ ಬೋರ್ಸೆ ಅವರು ಜೊತೆಯಾಗುತ್ತಾರೆ ಎನ್ನುವ ಮಾತಿದೆ. ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಗೌತಮ್ ತಿನ್ನನುರಿ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ಜೆರ್ಸಿ’ ಸಿನಿಮಾ ನಿರ್ದೇಶನ ಮಾಡಿ ಅವರು ಗಮನ ಸೆಳೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Sat, 3 August 24