ವಿಜಯ್​ ಸೇತುಪತಿ ಮೇಲೆ ಕಣ್ಣಿಟ್ಟ ‘ದಿ ಫ್ಯಾಮಿಲಿ ಮ್ಯಾನ್​’ ತಂಡ; 3ನೇ ಸೀಸನ್​ನಲ್ಲಿ ಬಿಗ್​ ಸರ್ಪ್ರೈಸ್​?​

The Family Man: ‘ದಿ ಫ್ಯಾಮಿಲಿ ಮ್ಯಾನ್​’ಗೆ ದೇಶಾದ್ಯಂತ ಪ್ರೇಕ್ಷಕರು ಇದ್ದಾರೆ. ದಕ್ಷಿಣ ಭಾರತದಲ್ಲಿ ಇನ್ನಷ್ಟು ಸಂಖ್ಯೆಯ ನೋಡುಗರನ್ನು ಸೆಳೆದುಕೊಳ್ಳಲು ಇಲ್ಲಿನ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ತಂತ್ರವನ್ನು ಬಳಸಲಾಗುತ್ತಿದೆ.

ವಿಜಯ್​ ಸೇತುಪತಿ ಮೇಲೆ ಕಣ್ಣಿಟ್ಟ ‘ದಿ ಫ್ಯಾಮಿಲಿ ಮ್ಯಾನ್​’ ತಂಡ; 3ನೇ ಸೀಸನ್​ನಲ್ಲಿ ಬಿಗ್​ ಸರ್ಪ್ರೈಸ್​?​
ವಿಜಯ್​ ಸೇತುಪತಿ

Updated on: Jun 21, 2021 | 8:42 AM

ಭಾರತದ ವೆಬ್​ ಸಿರೀಸ್​ಗಳ ಪೈಕಿ ‘ದಿ ಫ್ಯಾಮಿಲಿ ಮ್ಯಾನ್​’ ದೊಡ್ಡ ಯಶಸ್ಸು ಕಂಡಿದೆ. ಎರಡು ಸೀಸನ್​ಗಳಲ್ಲಿ ರಿಲೀಸ್​ ಆದ ಈ ವೆಬ್​ ಸರಣಿಗೆ ಪ್ರೇಕ್ಷಕರು ಫಿದಾ ಆದರು. ಈಗ ಮೂರನೇ ಸರಣಿ ಬಗ್ಗೆ ಕುತೂಹಲ ಉಂಟಾಗಿದೆ. ನಿರ್ದೇಶಕರಾದ ರಾಜ್​ ಮತ್ತು ಡಿಕೆ ಅವರಿಗೆ ‘ದಿ ಫ್ಯಾಮಿಲಿ ಮ್ಯಾನ್​ 3’ ವಿಚಾರದಲ್ಲಿ ಸಖತ್​ ಒತ್ತಡ ಇದೆ. ಅದಕ್ಕಾಗಿ ಅವರು ಪಾತ್ರವರ್ಗದ ಆಯ್ಕೆಯನ್ನು ತುಂಬಾ ಕಾಳಜಿ ವಹಿಸಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಖ್ಯಾತ ನಟ ವಿಜಯ್​ ಸೇತುಪತಿ ಹೆಸರು ಕೇಳಿಬರಲು ಆರಂಭಿಸಿದೆ.

ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾದ ‘ದಿ ಫ್ಯಾಮಿಲಿ ಮ್ಯಾನ್​’ ಒಂದು ಮತ್ತು ಎರಡನೇ ಸೀಸನ್​ ಸೂಪರ್​ ಹಿಟ್​ ಆಗಿರುವುದರಿಂದ 3ನೇ ಸೀಸನ್​ ಅನ್ನು ಇನ್ನಷ್ಟು ರೋಚಕವಾಗಿ ಕಟ್ಟಿಕೊಡುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಘಟಾನುಘಟಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ನಿರ್ದೇಶಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ವಿಜಯ್​ ಸೇತುಪತಿ ಜೊತೆ ಮಾತುಕತೆ ನಡೆದಿರುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ಆದರೆ ಯಾವುದೂ ಇನ್ನೂ ಅಧಿಕೃತ ಆಗಿಲ್ಲ.

ಮೂಲಗಳ ಪ್ರಕಾರ, ‘ದಿ ಫ್ಯಾಮಿಲಿ ಮ್ಯಾನ್​ 2’ನಲ್ಲಿಯೇ ವಿಜಯ್​ ಸೇತುಪತಿ ನಟಿಸಬೇಕಿತ್ತಂತೆ. ಆದರೆ ಡೇಟ್ಸ್​ ಹೊಂದಾಣಿಕೆ ಆಗದ ಕಾರಣ ಅವರು ನಟಿಸಲು ಸಾಧ್ಯವಾಗಿಲ್ಲ. ಈಗ ಹೇಗಾದರೂ ಮಾಡಿ ಮೂರನೇ ಸೀಸನ್​ನಲ್ಲಿ ಅವರಿಂದ ಒಂದು ಮುಖ್ಯ ಪಾತ್ರ ಮಾಡಿಸಬೇಕು ಎಂದು ನಿರ್ದೇಶಕರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

‘ದಿ ಫ್ಯಾಮಿಲಿ ಮ್ಯಾನ್​’ಗೆ ದೇಶಾದ್ಯಂತ ಪ್ರೇಕ್ಷಕರು ಇದ್ದಾರೆ. ದಕ್ಷಿಣ ಭಾರತದಲ್ಲಿ ಇನ್ನಷ್ಟು ಸಂಖ್ಯೆಯ ನೋಡುಗರನ್ನು ಸೆಳೆದುಕೊಳ್ಳಲು ಇಲ್ಲಿನ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ತಂತ್ರವನ್ನು ಬಳಸಲಾಗುತ್ತಿದೆ. ‘ದಿ ಫ್ಯಾಮಿಲಿ ಮ್ಯಾನ್​ 2’ನಲ್ಲಿ ಸಮಂತಾ ಅಕ್ಕಿನೇನಿ ಒಂದು ಖಡಕ್​ ಪಾತ್ರ ಮಾಡಿದ್ದಾರೆ. ಅದು ಜನಪ್ರಿಯತೆಯ ಜೊತೆಗೆ ಸಾಕಷ್ಟು ವಿವಾದವನ್ನೂ ಮೈಮೇಲೆ ಎಳೆದುಕೊಂಡಿತು. ಈ ಎಲ್ಲ ತಂತ್ರಗಳ ಮೂಲಕ ‘ದಿ ಫ್ಯಾಮಿಲಿ ಮ್ಯಾನ್​ 2’ ಯಶಸ್ವಿ ಆಗಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ ಕೊನೆಯಲ್ಲಿ ಒಂದು ಸುಳಿವು ನೀಡಲಾಗಿತ್ತು. 3ನೇ ಸೀಸನ್​ನಲ್ಲಿ ಕೊರೊನಾ ವೈರಸ್​ ಬಗ್ಗೆ ಕಥೆ ಹೇಳಲಾಗುತ್ತದೆ ಎಂಬ ಸಣ್ಣ ಮಾಹಿತಿಯನ್ನು ಬಿಟ್ಟುಕೊಡಲಾಗಿತ್ತು. ಆ ಮೂಲಕ ಮುಂದಿನ ಸೀಸನ್​ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ಕೌತುಕ ಇಟ್ಟುಕೊಳ್ಳುವಂತೆ ಮಾಡಲಾಗಿದೆ. ಈಗ ವಿಜಯ್​ ಸೇತುಪತಿ ಬಗ್ಗೆ ಗುಸುಗುಸು ಕೂಡ ಕೇಳಿಬರುತ್ತಿರುವುದರಿಂದ ಆ ಕೌತುಕ ದುಪ್ಪಟ್ಟಾಗಿದೆ.

ಇದನ್ನೂ ಓದಿ:

ದಿ ಫ್ಯಾಮಿಲಿ ಮ್ಯಾನ್​ 2ನಲ್ಲಿ ಸಮಂತಾ ಆ್ಯಕ್ಷನ್​ ನೋಡಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಹುಟ್ಟುಹಬ್ಬದಂದು ತಲ್ವಾರ್​ನಲ್ಲಿ ಕೇಕ್​ ಕತ್ತರಿಸಿ ವಿವಾದ ಸೃಷ್ಟಿಸಿದ ನಟ ವಿಜಯ್​ ಸೇತುಪತಿ..

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us