ನಟ ರಾಮ್ ಚರಣ್ (Ram Charan) ಅವರು ‘ಆರ್ಆರ್ಆರ್’ ಸಿನಿಮಾದ ಯಶಸ್ಸಿನ ಬಳಿಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಇನ್ನೊಂದು ಖುಷಿಯ ವಿಷಯ ಏನೆಂದರೆ ಅವರು ಶೀಘ್ರದಲ್ಲೇ ತಂದೆ ಆಗಲಿದ್ದಾರೆ. ಅವರ ಪತ್ನಿ ಉಪಾಸನಾ ಕೊನಿಡೆಲಾ (Upasana Konidela) ಪ್ರೆಗ್ನೆಂಟ್ ಎಂಬ ವಿಚಾರವನ್ನು ಕಳೆದ ಡಿಸೆಂಬರ್ನಲ್ಲಿ ತಿಳಿಸಲಾಗಿತ್ತು. ಸದ್ಯದಲ್ಲೇ ಅವರು ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ನಡುವೆ ಒಂದು ಗಾಸಿಪ್ ಹಬ್ಬಿದೆ. ಉಪಾಸನಾ-ರಾಮ್ ಚರಣ್ ದಂಪತಿಯ ಮಗು ಅಮೆರಿಕದಲ್ಲಿ (America) ಜನಿಸಲಿದೆ ಎಂದು ಕೆಲವರು ಊಹಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪಾಸನಾ ಅವರು ಸ್ಪಷ್ಟನೆ ನೀಡಿದ್ದಾರೆ. ಭಾರತದಲ್ಲಿಯೇ ತಾವು ಮಗುವಿಗೆ ಜನ್ಮ ನೀಡುವುದಾಗಿ ತಿಳಿಸಿದ್ದಾರೆ.
‘ಆರ್ಆರ್ಆರ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಈಗಾಗಲೇ ‘ಗೋಲ್ಡನ್ ಗ್ಲೋಬ್’, ‘ಕ್ರಿಟಿಕ್ಸ್ ಚಾಯ್ಸ್ ಮೂವೀ ಅವಾರ್ಡ್ಸ್’, ‘ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್’ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೂ ಈ ಚಿತ್ರದ ‘ನಾಟು ನಾಟು..’ ಹಾಡು ನಾಮಿನೇಟ್ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ರಾಮ್ ಚರಣ್ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ನಡೆದ ಟಿವಿ ಕಾರ್ಯಕ್ರಮವೊಂದರಲ್ಲಿ ಅವರು ಲೇಡಿ ಡಾಕ್ಟರ್ ಒಬ್ಬರ ಅಪಾಯಿಂಟ್ಮೆಂಟ್ ಪಡೆದುಕೊಂಡಿದ್ದಾರೆ. ಅದರಿಂದಾಗಿ ಅನುಮಾನ ಶುರುವಾಗಿದೆ.
Upasana Pregnant: ಮದುವೆ ಆಗಿ 10 ವರ್ಷದ ಬಳಿಕ ಸಿಹಿ ಸುದ್ದಿ ನೀಡಿದ ರಾಮ್ ಚರಣ್-ಉಪಾಸನಾ
‘ಶೀಘ್ರದಲ್ಲೇ ಉಪಾಸನಾ ಕೂಡ ಅಮೆರಿಕಕ್ಕೆ ಬರುತ್ತಾರೆ. ನಿಮ್ಮ ನಂಬರ್ ನಾನು ಪಡೆದುಕೊಳ್ಳುತ್ತೇನೆ’ ಎಂದು ಡಾ. ಜೆನ್ ಆಸ್ಟನ್ ಎಂಬ ಲೇಡಿ ಡಾಕ್ಟರ್ಗೆ ರಾಮ್ ಚರಣ್ ಹೇಳಿರುವ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಹಾಗಾಗಿ ಉಪಾಸನಾ ಅವರು ಅಮೆರಿಕದಲ್ಲೇ ಮೊದಲ ಮಗುವಿಗೆ ಜನ್ಮ ನೀಡಬಹುದು ಎಂದು ಅನೇಕರು ಊಹಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದ ಗಾಸಿಪ್ ಜೋರಾಗುತ್ತಿದ್ದಂತೆಯೇ ಉಪಾಸನಾ ಕೊನಿಡೆಲಾ ಅವರು ಟ್ವೀಟ್ ಮಾಡಿರುವುದು ಗಮನ ಸೆಳೆದಿದೆ. ಅಲ್ಲದೇ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ‘ಭಾರತದಲ್ಲೇ ಮೊದಲ ಮಗುವಿಗೆ ಜನ್ಮ ನೀಡಲಿದ್ದೇನೆ’ ಎಂದು ಹೇಳಿದ್ದಾರೆ. ಭಾರತದಲ್ಲಿನ ವಿಶ್ವದರ್ಜೆಯ ವೈದ್ಯರ ಜೊತೆಗೆ ಅಮೆರಿಕದ ಡಾ. ಜೆನ್ ಆಸ್ಟನ್ ಕೂಡ ಈ ಸಂದರ್ಭದಲ್ಲಿ ಉಪಾಸನಾ ಅವರ ಜೊತೆ ಇರಲಿದ್ದಾರೆ.
RRR ಚಿತ್ರಕ್ಕೆ ಆಸ್ಕರ್ ಸಿಕ್ಕರೆ ಏನಾಗುತ್ತದೆ? ಅಭಿಪ್ರಾಯ ತಿಳಿಸಿದ ನಿರ್ದೇಶಕ ರಾಜಮೌಳಿ
ರಾಮ್ ಚರಣ್ ಮತ್ತು ಉಪಾಸನಾ ಅವರು ಮದುವೆ ಆಗಿದ್ದು 2012ರ ಜೂನ್ 14ರಂದು. ವೈವಾಹಿಕ ಜೀವನಕ್ಕೆ ಕಾಲಿಟ್ಟು 10 ವರ್ಷಗಳ ಬಳಿಕ ಅವರು ಮೊದಲ ಮಗು ಪಡೆಯಲು ನಿರ್ಧರಿಸಿದರು. ಸದ್ಯದಲ್ಲೇ ಅವರ ಕುಟುಂಬದಿಂದ ಗುಡ್ ನ್ಯೂಸ್ ಸಿಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.