ಮೋಸ್ಟ್ ಡಿಸೈರಬಲ್ ಮೆನ್:​ ಯಶ್​ಗೆ ನಂ.1 ಪಟ್ಟ; ಇನ್ನೂ ಯಾರೆಲ್ಲ ಇದ್ದಾರೆ ಪಟ್ಟಿಯಲ್ಲಿ?

Yash: ಕೆಜಿಎಫ್​ ಸಿನಿಮಾ ತೆರೆಕಂಡ ಬಳಿಕ ನಟ ಯಶ್​ ಖ್ಯಾತಿ ದೇಶಾದ್ಯಂತ ಹೆಚ್ಚಿತು. ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಅವರು ಹೊರಹೊಮ್ಮಿದರು. ಈಗ 2020ರ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಅವರು ನಂ.1 ಸ್ಥಾನ ಕಾಪಾಡಿಕೊಂಡಿದ್ದಾರೆ.

ಮೋಸ್ಟ್ ಡಿಸೈರಬಲ್ ಮೆನ್:​ ಯಶ್​ಗೆ ನಂ.1 ಪಟ್ಟ; ಇನ್ನೂ ಯಾರೆಲ್ಲ ಇದ್ದಾರೆ ಪಟ್ಟಿಯಲ್ಲಿ?
ಮೋಸ್ಟ್ ಡಿಸೈರಬಲ್ ಮೆನ್ 2020

Updated on: Jun 03, 2021 | 1:08 PM

ಬೆಂಗಳೂರು ಟೈಮ್ಸ್​ ಪತ್ರಿಕೆಯ 2020ರ ಮೋಸ್ಟ್​ ಡಿಸೈರಬಲ್​ ಮೆನ್​ ಪಟ್ಟಿಯಲ್ಲಿ ‘ರಾಕಿಂಗ್ ಸ್ಟಾರ್​’ ಯಶ್​ ನಂ.1 ಆಗಿದ್ದಾರೆ. ಮೂರನೇ ಬಾರಿಗೆ ಅವರು ನಂಬರ್​ ಒನ್​ ಪಟ್ಟದಲ್ಲಿದ್ದಾರೆ. ಸಿನಿಮಾ, ಸೀರಿಯಲ್​, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರದ ಸೆಲೆಬ್ರಿಟಿಗಳ ನಡುವೆ ಯಶ್​ ಅಗ್ರ ಸ್ಥಾನ ಪಡೆದು ಮಿಂಚುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೆ, ಅನೇಕ ಜನಪರ ಕೆಲಸಗಳ ಮೂಲಕವೂ ಅವರು ಜನಮೆಚ್ಚುಗೆ ಗಳಿಸಿದ್ದಾರೆ. ಕೊವಿಡ್​ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗದ ಕಾರ್ಮಿಕರು, ಕಲಾವಿದರು ಮತ್ತು ತಂತ್ರಜ್ಞರಿಗೆ 1.5 ಕೋಟಿಗೂ ಅಧಿಕ ಹಣ ನೀಡುವುದಾಗಿ ಅವರು ಕೆಲವೇ ದಿನಗಳ ಹಿಂದೆ ತಿಳಿಸಿದ್ದಾರೆ.

ಮೋಸ್ಟ್​ ಡಿಸೈರಬಲ್​ ಮೆನ್​ 2020 ಪಟ್ಟಿಯಲ್ಲಿ ಯುವ ಕ್ರಿಕೆಟಿಗ ಕೆಎಲ್​ ರಾಹುಲ್​ ಅವರು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಈ ಕನ್ನಡಿಗನಿಗೆ ಅಪಾರ ಅಭಿಮಾನಿಗಳಿದ್ದಾರೆ. ಯುವ ಜನತೆಗೆ ಕೆಎಲ್ ರಾಹುಲ್​ ಹತ್ತಿರ ಆಗಿದ್ದಾರೆ. ಬಣ್ಣದ ಲೋಕದ ಎಲ್ಲರನ್ನೂ ಹಿಂದಿಕ್ಕಿ ಅವರು 2ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ‘ಟಗರು’ ಸಿನಿಮಾ ಬಳಿಕ ಡಾಲಿ ಎಂದೇ ಫೇಮಸ್​ ಆಗಿರುವ ನಟ ಧನಂಜಯ ಅವರಿಗೆ ಮೂರನೇ ಸ್ಥಾನ ಸಿಕ್ಕಿದೆ. 2020ರ ಮೋಸ್ಟ್​ ಡಿಸೈರಬಲ್​ ಮೆನ್​ ಸಂಪೂರ್ಣ ಪಟ್ಟಿ ಇಲ್ಲಿದೆ.

1.ಯಶ್​

  1. ಕೆಎಲ್​ ರಾಹುಲ್​
  2. ಡಾಲಿ ಧನಂಜಯ್​
  3. ಪ್ರವೀಣ್​ ತೇಜ್​
  4. ಪ್ರಜ್ವಲ್​ ದೇವರಾಜ್​
  5. ದಿಗಂತ್​
  6. ಅರವಿಂದ್​ ಅಯ್ಯರ್​
  7. ಶ್ರೀಮುರಳಿ
  8. ದೇವದತ್​​ ಪಡಿಕ್ಕಲ್
  9. ಅಭಿಷೇಕ್​ ಅಂಬರೀಷ್​

 

  1. ರಕ್ಷಿತ್​ ಶೆಟ್ಟಿ
  2. ಡಾರ್ಲಿಂಗ್​ ಕೃಷ್ಣ
  3. ದಾನಿಶ್​ ಸೇಠ್​
  4. ಶೈನ್​ ಶೆಟ್ಟಿ
  5. ಪ್ರಭು ಮುಂಡ್ಕೂರ್​
  6. ಮನೀಶ್​ ಪಾಂಡೆ
  7. ವಿಜಯ್​ ಸೂರ್ಯ
  8. ರಿಷಿ
  9. ಚಂದನ್​ ಕುಮಾರ್​
  10. ದೀಕ್ಷಿತ್​ ಶೆಟ್ಟಿ

 

  1. ಧನವೀರ್​
  2. ಕರುಣ್​ ನಾಯರ್​
  3. ಸೂರಜ್​ ಗೌಡ
  4. ಪೃಥ್ವಿ ಅಂಬರ್​
  5. ನಿಖಿಲ್​ ಕುಮಾರಸ್ವಾಮಿ
  6. ರೋಹಿತ್​
  7. ಧೀರೇನ್​ ರಾಮ್​ ಕುಮಾರ್​
  8. ವಿರಾಟ್​
  9. ಅನೀಶ್​ ತೇಜೇಶ್ವರ್​
  10. ರಾಹುಲ್​ ನಾಯರ್​

ಇದನ್ನೂ ಓದಿ:

ರಾಕಿಂಗ್​ ಸ್ಟಾರ್​ ಯಶ್​ ಮಾಡಿದ ಸಹಾಯದ ಬಗ್ಗೆ ರಿಯಲ್​ ಸ್ಟಾರ್​ ಉಪೇಂದ್ರ ಹೇಳಿದ್ದೇನು?

Yash: ಸಿನಿಮಾ ತಂತ್ರಜ್ಞರಿಗೆ ಯಶ್​ ದೊಡ್ಡ ಸಹಾಯ; 1.5 ಕೋಟಿ ರೂ. ನೆರವು ನೀಡುತ್ತಿರುವ ರಾಕಿಂಗ್​ ಸ್ಟಾರ್​

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us