June 2024 Festival Calendar: ಜೂನ್ 2024 ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

|

Updated on: May 29, 2024 | 6:30 AM

ಈ ಹಬ್ಬಗಳನ್ನು ಹಿಂದೂ ಪಂಚಾಂಗದ ಪ್ರಕಾರ ಆಚರಿಸಲಾಗುತ್ತದೆ. ಹಬ್ಬಗಳು ವಿವಿಧ ಪ್ರದೇಶಗಳು, ನಂಬಿಕೆಗಳು, ವಾಡಿಕೆಗಳು, ಸಂಪ್ರದಾಯಗಳು ಮತ್ತು ಭಾಷೆಗಳ ಜನರನ್ನು ಒಟ್ಟುಗೂಡಿಸುತ್ತದೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ. ಆದ್ದರಿಂದ, ಜೂನ್ 2024 ರಲ್ಲಿ ಆಚರಿಸುವ ಪ್ರಮುಖ ಹಬ್ಬಗಳ ಬಗ್ಗೆ ತಿಳಿದುಕೊಳ್ಳಲು ಈ ಲೇಖನ ಓದಿ

June 2024 Festival Calendar: ಜೂನ್ 2024 ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಜೂನ್ 2024 ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ
Follow us on

ಬೆಂಗಳೂರು: ವೈವಿಧ್ಯಮಯ ಭಾರತದಲ್ಲಿ ಜನರು ತಮ್ಮದೇ ಆದ ಹಬ್ಬ, ವ್ರತ, ಪೂಜೆ ಮತ್ತು ಆಚರಣೆಗಳನ್ನು ಹೊಂದಿದ್ದಾರೆ ಮತ್ತು ಇಲ್ಲಿ ಜನರು ಪ್ರತಿ ಹಬ್ಬವನ್ನು ಉತ್ಸಾಹ ಮತ್ತು ಸಂತೋಷದಿಂದ ಎಲ್ಲಾ ಸಂಪ್ರದಾಯಗಳನ್ನು ಭಕ್ತಿ ಭಾವದಿಂದ ಆಚರಿಸುತ್ತಾರೆ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದ್ದು, ಜನರು ಸಂಭ್ರಮ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಈ ಹಬ್ಬಗಳನ್ನು ಹಿಂದೂ ಪಂಚಾಂಗದ (Hindu Calendar) ಪ್ರಕಾರ ಆಚರಿಸಲಾಗುತ್ತದೆ. ಹಬ್ಬಗಳು ವಿವಿಧ ಪ್ರದೇಶಗಳು, ನಂಬಿಕೆಗಳು, ವಾಡಿಕೆಗಳು, ಸಂಪ್ರದಾಯಗಳು ಮತ್ತು ಭಾಷೆಗಳ ಜನರನ್ನು ಒಟ್ಟುಗೂಡಿಸುತ್ತದೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ. ಆದ್ದರಿಂದ, ಜೂನ್ 2024 ರಲ್ಲಿ (June 2024) ಆಚರಿಸುವ ಪ್ರಮುಖ ಹಬ್ಬಗಳ ಬಗ್ಗೆ ತಿಳಿದುಕೊಳ್ಳಲು ಈ ಲೇಖನ ಓದಿ ( June 2024 Festival Calendar). ಈ ಜೂನ್ ತಿಂಗಳಿನಲ್ಲಿ ಒಟ್ಟು 30 ದಿನಗಳಿದ್ದು, 5 ಭಾನುವಾರಗಳು ಇವೆ.

ಮಳೆ ಭವಿಷ್ಯ
ಈ ಜೂನ್ ತಿಂಗಳ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಮಳೆಗಾಲದ ಮಳೆಯ ಹೆಸರು ಮತ್ತು ವಾಹನ ಹಾಗೂ ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಜೂನ್​ ತಿಂಗಳಿನಲ್ಲಿ ಬರುವ ಮಳೆ ಯಾವುವು ಹಾಗೂ ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ

ಮೃಗಶಿರ ಮಳೆ
ಈ ಮಳೆಯು ದಿನಾಂಕ 7/6/2024 ರಂದು ರಾತ್ರಿ 1.05 ಕ್ಕೆ ನರಿ ವಾಹನದ ಮೇಲೆ ಮೀನ ಲಗ್ನದಲ್ಲಿ ಶುರುವಾಗುತ್ತದೆ. ಈ ಮಳೆಯು ಕೆಲವು ಕಡೆ ಜೋರಾಗಿ ಬೀಳುವ ಸಂಭವವಿದೆ. ಇನ್ನು ಮುಂಗಾರು ಏರಿಳಿತಗಳು ಹೆಚ್ಚಿರುತ್ತದೆ. ಹಾಗೆ ಈ ಮಳೆಯು 21/6/2024ರಂದು ಮುಕ್ತಾಯಗೊಳ್ಳುತ್ತದೆ.

ಆದ್ರಾ ಮಳೆ
ಈ ಮಳೆಯು ದಿನಾಂಕ 21/06/2024 ರಂದು ರಾತ್ರಿ 12.5 ಕ್ಕೆ ಸರಿಯಾಗಿ ಮೀನ ಲಗ್ನದಲ್ಲಿ ನವಿಲು ವಾಹನದಲ್ಲಿ ಆರಂಭವಾಗುತ್ತದೆ. ಅಲ್ಲಲ್ಲಿ ಮೋಡ ಹೆಚ್ಚಿದ್ದು, ಹೆಚ್ಚು ಮಳೆಯಾಗುವ ಸಂಭವವಿದೆ. ಈ ಮಳೆಯು 5/7/2024 ಕ್ಕೆ ಮುಕ್ತಾಯಗೊಳ್ಳುತ್ತದೆ

ಗ್ರಹಣ ವಿಚಾರಗಳು: ಈ ಜೂನ್ ತಿಂಗಳಿನಲ್ಲಿ ಯಾವುದೇ ಗ್ರಹಣಗಳು ಇರುವುದಿಲ್ಲ.

Festivals in June 2024: ಜೂನ್ ತಿಂಗಳಲ್ಲಿ ಭಾರತದ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

1. ಹನುಮಾನ್ ಜಯಂತಿ (ತೆಲುಗು) – ಶನಿವಾರ, 01 ಜೂನ್, 2024

2. ಅಪರ ಏಕಾದಶಿ – ಭಾನುವಾರ, 02 ಜೂನ್, 2024

3. ವೈಷ್ಣವ ಅಪರ ಏಕಾದಶಿ ಸೋಮವಾರ, 03 ಜೂನ್, 2024

4. ಮಾಸಿಕ ಶಿವರಾತ್ರಿ – ಮಂಗಳವಾರ, 04 ಜೂನ್, 2024

5. ಪ್ರದೋಷ ವ್ರತ – ಮಂಗಳವಾರ, 04 ಜೂನ್, 2024

6. ಮಾಸಿಕ ಕಾರ್ತಿಗೈ – ಬುಧವಾರ, 05 ಜೂನ್, 2024

7. ವಟ ಸಾವಿತ್ರಿ ಪೂಜೆ – ಗುರುವಾರ, 06 ಜೂನ್, 2024

8. ರೋಹಿಣಿ ವ್ರತ – ಗುರುವಾರ, 06 ಜೂನ್, 2024

9. ಶನಿ ಜಯಂತಿ – ಗುರುವಾರ, 06 ಜೂನ್, 2024

10. ಜ್ಯೇಷ್ಠ ಅಮಾವಾಸ್ಯೆ – ಗುರುವಾರ, 06 ಜೂನ್, 2024

11. ಚಂದ್ರ ದರ್ಶನ – ಶುಕ್ರವಾರ, 07 ಜೂನ್, 2024

12. ಜಮೈ ಷಷ್ಠಿ – ಶನಿವಾರ, 08 ಜೂನ್, 2024

13. ಮಹಾರಾಣಾ ಪ್ರತಾಪ್ ಜಯಂತಿ – ಭಾನುವಾರ, 09 ಜೂನ್, 2024

14 ಗುರು ಅರ್ಜನ್ ದೇವ್ ಪುಣ್ಯತಿಥಿ – ಸೋಮವಾರ, 10 ಜೂನ್, 2024

15. ವಿನಾಯಕ ಚತುರ್ಥಿ – ಸೋಮವಾರ, 10 ಜೂನ್, 2024

16. ಸ್ಕಂದ ಷಷ್ಠಿ – ಮಂಗಳವಾರ, 11 ಜೂನ್, 2024

17. ಮಾಸಿಕ ದುರ್ಗಾಷ್ಟಮಿ – ಶುಕ್ರವಾರ, 14 ಜೂನ್, 2024

18. ಧೂಮಾವತಿ ಜಯಂತಿ – ಶುಕ್ರವಾರ, 14 ಜೂನ್, 2024

19. ಮಹೇಶ ನವಮಿ – ಶನಿವಾರ, 15 ಜೂನ್, 2024

20. ರಾಜ ಹಬ್ಬ (ಮಿಥುನ ಸಂಕ್ರಾಂತಿ) – ಶನಿವಾರ, 15 ಜೂನ್, 2024

21. ಗಂಗಾ ದಸರಾ – ಭಾನುವಾರ, 16 ಜೂನ್, 2024

22. ಗಾಯತ್ರಿ ಜಯಂತಿ – ಸೋಮವಾರ, 17 ಜೂನ್, 2024

23. ನಿರ್ಜಲ ಏಕಾದಶಿ – ಮಂಗಳವಾರ, 18 ಜೂನ್, 2024

24. ಪ್ರದೋಷ ವ್ರತ – ಬುಧವಾರ, 19 ಜೂನ್, 2024

25. ರಾಮಲಕ್ಷ್ಮಣ ದ್ವಾದಶಿ – ಬುಧವಾರ, 19 ಜೂನ್, 2024

26. ವಟ ಪೂರ್ಣಿಮಾ ವ್ರತ (ಉಪವಾಸ) – ಶುಕ್ರವಾರ, 21 ಜೂನ್, 2024

27. ಜ್ಯೇಷ್ಠ ಪೂರ್ಣಿಮಾ – ಶನಿವಾರ, 22 ಜೂನ್, 2024

Also read: ಗರುಡ ಪುರಾಣದ ಈ ಏಳು ವಿಷಯಗಳನ್ನು ಪಾಲಿಸಿದರೆ ನಿಮ್ಮ ಏಳಿಗೆ ಖಚಿತ

28. ಸಂತ ಕಬೀರದಾಸ್ ಜಯಂತಿ – ಶನಿವಾರ, 22 ಜೂನ್, 2024

29. ಇಷ್ಟಿ – ಶನಿವಾರ, 22 ಜೂನ್, 2024

30. ಕೃಷ್ಣ ಪಿಂಗ್ಲ ಸಂಕಷ್ಟ ಚತುರ್ಥಿ – ಮಂಗಳವಾರ, 25 ಜೂನ್, 2024

31. ಕಲಾ ಅಷ್ಟಮಿ – ಶುಕ್ರವಾರ, 28 ಜೂನ್, 2024

33. ಮಾಸಿಕ ಕೃಷ್ಣ ಜನ್ಮಾಷ್ಟಮಿ – ಶುಕ್ರವಾರ, 28 ಜೂನ್, 2024

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ