Home Remedies: ವಿಜ್ಞಾನ ಕೂಡ ಒಪ್ಪುವ 5 ಮನೆ ಮದ್ದುಗಳು; ನಿಮ್ಮ ಮನೆಯಲ್ಲಿಯೂ ಇರುತ್ತೆ ಈ ಸಾಮಗ್ರಿಗಳು

|

Updated on: Mar 10, 2023 | 4:16 PM

ನೀವು ಯಾವುದೇ ಔಷಧಿಗಳನ್ನು ಸೇವಿಸುತ್ತಿದ್ದರೆ ಅಥವಾ ನಿಮ್ಮ ಆಹಾರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಇದನ್ನು ಸೇವಿಸುವ ಮೊದಲು ವೈದ್ಯರೊಂದಿಗೆ ಮಾತನಾಡಿ. ಮತ್ತು ಯಾವುದೇ ಮನೆಮದ್ದುಗಳಿಂದ ನೀವು ಅಲರ್ಜಿಗೆ ತುತ್ತಾದಲ್ಲಿ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

Home Remedies: ವಿಜ್ಞಾನ ಕೂಡ ಒಪ್ಪುವ 5 ಮನೆ ಮದ್ದುಗಳು; ನಿಮ್ಮ ಮನೆಯಲ್ಲಿಯೂ ಇರುತ್ತೆ ಈ ಸಾಮಗ್ರಿಗಳು
Home remedies
Follow us on

ಹಲವಾರು ಬರಿ ನೀವು ಮನೆ ಮದ್ದು ಮಾಡಿರುತ್ತೀರಿ. ನಿಮಗೆ ನೆಗಡಿ-ಕೆಮ್ಮಿ ಇದ್ದಾಗ ಕಾಳುಮೆಣಸಿನ ಕಷಾಯ, ಹೊಟ್ಟೆ ನೋವಿಗೆ ಅರಿಶಿನದ ಹಾಲು, ಅಥವಾ ಹಲ್ಲು ನೋವಿದ್ದಾಗ ಲವಂಗವನ್ನು ತಿಂದಿರುತ್ತೀರಿ. ಈ ಮದ್ದುಗಳು ಸಹ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿರುತ್ತವೆ. ಆದರೆ ವಿಜ್ಞಾನ ಇದು ನಿಜವಾಗಿಯೂ ಪರಿಣಾಮಕಾರಿ ಆಗಿದೆಯೇ, ಅಥವಾ ಸೈಕಲಾಜಿಕಲ್ ಎಫೆಕ್ಟ್ ಇಂದಾಗಿ ನೀವು ಗುಣಮುಖರಾಗಿದ್ದೀರಾ ಎಂದು ಪ್ರಶ್ನಿಸಿದೆ. ಈ ಕೆಲವು ದಶಕಗಳಿಂದ ವಿಜ್ಞಾನಿಗಳು ಈ ಕುತೂಹಲಕ್ಕೆ ಅಂತ್ಯ ಹಾಡಿದ್ದಾರೆ. ಇಲ್ಲಿ ಹೇಳಿರುವ 7 ಮನೆ ಮದ್ದುಗಳು ನಿಜವಾಗಿಯೂ ಪರಿಣಾಮಕಾರಿಯಾಗಿದೆ ಎಂದು ಸ್ವತಃ ವಿಜ್ಞಾನಿಗಳೇ ಒಪ್ಪಿದ್ದಾರೆ.

ಅರಿಶಿನ:

ಅರಿಶಿನದಲ್ಲಿನ ಔಷಧೀಯ ಗುಣಕ್ಕೆ ಕರ್ಕ್ಯುಮಿನ್ ಕಾರಣವಾಗಿದೆ ಎಂದು ಹಲವಾರು ಅಧ್ಯಯನಗಳು ತಿಳಿಸುತ್ತದೆ. ಒಂದು ಅಧ್ಯಯನದಲ್ಲಿ, ಸಂಧಿವಾತ ನೋವು ಹೊಂದಿರುವ ಜನರು 50 ಮಿಗ್ರಾಂ ಡಿಕ್ಲೋಫೆನಾಕ್ ಸೋಡಿಯಂನ ಉರಿಯೂತದ ಔಷಧಕ್ಕಿಂತ 500 ಮಿಲಿಗ್ರಾಂ (ಮಿಗ್ರಾಂ) ಕರ್ಕ್ಯುಮಿನ್ ಅನ್ನು ತೆಗೆದುಕೊಂಡ ನಂತರ ಅವರ ನೋವಿನ ಮಟ್ಟವು ಕಡಿಮೆಯಾಗಿದೆ ಎಂದು ಗಮನಿಸಲಾಗಿದೆ. ಅರಿಶಿನವನ್ನು ಹಾಲಿಗೆ ಅಥವಾ ನೀರಿಗೆ ಸೇರಿಸುವಾಗ ಒಂದು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಹಾಕಲು ಮರೆಯದಿರಿ. ಇದು ಅರಿಶಿನದ ಔಷದಿಯ ಗುಣವನ್ನು ಹೆಚ್ಚಿಸುತ್ತದೆ.

ಕಾಳು ಮೆಣಸು:

ಕಾಳು ಮೆಣಸು ನಾಟಿ ಔಷಧದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಹೋಮಿಯೋಪತಿಯ ಹೊರಗೆ ನಿಧಾನವಾಗಿ ಹೆಚ್ಚು ಅಂಗೀಕರಿಸಲ್ಪಟ್ಟಿದೆ. ಇದರಲ್ಲಿನ, ಕ್ಯಾಪ್ಸೈಸಿನ್ ನೋವನ್ನು ನಿರ್ವಹಿಸುವ ಕೆಲಸ ಮಾಡುತ್ತದೆ. ಇದು ಮೊದಲು ಚರ್ಮದ ಪ್ರದೇಶವನ್ನು ಬಿಸಿಯಾಗುವಂತೆ ಮಾಡುವ ಮೂಲಕ ನೋವನ್ನು ತಗ್ಗಿಸುತ್ತದೆ. ಕಾಳು ಮೆನದು ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಕಾರಣ ಇದನ್ನೂ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ

ಶುಂಠಿ:

ನೀವು ಶೀತ, ನೋಯುತ್ತಿರುವ ಗಂಟಲಿನಿಂದ ಬಳಲುತ್ತಿರುವಾಗ ಅಥವಾ ಬೆಳಗಿನ ಬೇನೆ ಮತ್ತು ವಾಕರಿಕೆ ಅನುಭವಿಸುತ್ತಿರುವಾಗ ಶುಂಠಿಯನ್ನು ಸೇವಿಸಿರುತ್ತೀರಿ. ಒಂದು ಕಪ್ ತಶುಂಠಿ ಕಷಾಯ ಅದೆಷ್ಟೋ ರೋಗಗಳನ್ನು ಓಡಿಸಿದೆ. ಶುಂಠಿಯ ಇತರ ಪ್ರಯೋಜನವೆಂದರೆ ಉರಿಯೂತ ನಿವಾರನೆಯಲ್ಲೂ ಸಹಕರಿಸುತ್ತದೆ. ಮುಂದಿನ ಬಾರಿ ನಿಮಗೆ ಸ್ವಲ್ಪ ತಲೆನೋವು, ಶೀತ ಉಂಟಾದಾಗ, ಶುಂಠಿಯನ್ನು ಸೇವಿಸಿ. ಇತರ ನೋವು ನಿವಾರಕಗಳಿಗಿಂತ ಶುಂಠಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.

ನೀಲಗಿರಿ ಎಣ್ಣೆ:

ನೀಲಗಿರಿ ಎಣ್ಣೆಯು 1,8-ಸಿನಿಯೋಲ್ ಎಂಬ ಅಂಶವನ್ನು ಹೊಂದಿದೆ, ಇದು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇಲಿಗಳ ಮೇಲೆ ಇದನ್ನೂ ಪ್ರಯೋಗಿಸಿದಾಗ ಅವುಗಳಲ್ಲಿ ಮಾರ್ಫೀನ್ ಎಫೆಕ್ಟ್ ಕಂಡುಬಂದಿದೆ. ನೀಲಗಿರಿ ಎಣ್ಣೆಯು ದೇಹದ ನೋವನ್ನು ನಿವಾರಿಸುತ್ತದೆ ಎಂದು ಅಧ್ಯಯನಗಳಲ್ಲಿ ತೋರಿಸಲಾಗಿದೆ. Vick’s VapoRub ನ ಪ್ರಿಯರು ಈಗ ನೀಲಗಿರಿ ಎಣ್ಣೆಯನ್ನು ಉಪಯೋಗಿಸಿ ಇದರ ಪ್ರಯೋಜನಗಳನ್ನು ಪಡೆಯಬಹುದು.

ಪುದೀನಾ:

ನಾಟಿ ಔಷಧದಲ್ಲಿ ಸಾಮಾನ್ಯವಾಗಿ ಪುದೀನಾವನ್ನು ಹಲವಾರು ವಿಭಿನ್ನ ಚಿಕಿತ್ಸೆಗಳಲ್ಲಿ ಬಳಸುತ್ತಾರೆ. ಪುದೀನಾ ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್ (IBS) ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಫೈಬರ್ ಜೊತೆಗೆ, ಇದು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಇದು ಜೀರ್ಣಾಂಗದಲ್ಲಿ ಉರಿಯೂತದ ನೋವನ್ನು ಕಡಿಮೆ ಮಾಡುತ್ತದೆ.

ಈ ಮನೆ ಮದ್ದುಗಳು ಯಾವುದೇ ಗಮನಾರ್ಹ ಅಡ್ಡ ಪರಿಣಾಮಗಳನ್ನು ಹೊಂದಿಲ್ಲವಾದರೂ, ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ ಅವು ಹಾನಿಕಾರಕವಾಗಬಹುದು. ನೀವು ಯಾವುದೇ ಔಷಧಿಗಳನ್ನು ಸೇವಿಸುತ್ತಿದ್ದರೆ ಅಥವಾ ನಿಮ್ಮ ಆಹಾರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಇದನ್ನು ಸೇವಿಸುವ ಮೊದಲು ವೈದ್ಯರೊಂದಿಗೆ ಮಾತನಾಡಿ. ಮತ್ತು ಯಾವುದೇ ಮನೆಮದ್ದುಗಳಿಂದ ನೀವು ಅಲರ್ಜಿಗೆ ತುತ್ತಾದಲ್ಲಿ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.