H3N2 Influenza A Virus: H3N2 ವೈರಸ್‌ನ ರೋಗ ಲಕ್ಷಣ, ಚಿಕಿತ್ಸೆ, ಜತೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಯಾವುವು?

WHO ಪ್ರಕಾರ ಮಾನವರಲ್ಲಿ ಪಕ್ಷಿ, ಹಂದಿ ಮತ್ತು ಇತರ ಪ್ರಾಣಿ ಇನ್‌ಫ್ಲುಯೆನ್ಸಂ ಸೋಂಕುಗಳು ಸೌಮ್ಯವಾದ ಜ್ವರ ಮತ್ತು ಕೆಮ್ಮಿನಂತಹ ಸೋಂಕು, ನ್ಯೂಮೋನಿಯಾ, ತೀವ್ರವಾದ ಉಸಿರಾಟದ ತೊಂದರೆ, ಹಾಗೂ ಸಾವಿಗೂ ಕೂಡಾ ಈ ರೋಗ ಲಕ್ಷಣಗಳು ಕಾರಣವಾಗಬಹುದು ಎಂದು ತಿಳಿಸಿದೆ.

H3N2 Influenza A Virus: H3N2 ವೈರಸ್‌ನ ರೋಗ ಲಕ್ಷಣ, ಚಿಕಿತ್ಸೆ, ಜತೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಯಾವುವು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 10, 2023 | 4:29 PM

H3N2, ಇನ್‌ಫ್ಲುಯೆನ್ಸ ಂ ವೈರಸ್‌ನ ಉಪವಿಧವಾಗಿದ್ದು, ಇದು ಇತ್ತೀಚಿಗೆ ಭಾರತದಾದ್ಯಂತ ಅತೀ ವೇಗವಾಗಿ ಹರಡುತ್ತಿದೆ, ಇದು ನಿರಂತರ ಜ್ವರ, ಕೆಮ್ಮಿನಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ H3N2 ವೈರಸ್​ನಿಂದ ಸಾವನ್ನಪಿರುವ ಘಟನೆಯು ನಡೆದಿದೆ. ಇನ್‌ಫ್ಲುಯೆನ್ಸ ಎ ವೈರಸ್‌ನ ಉಪವಿಧವಾದ H3N2 ದೇಶದಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಕೆಂದ್ರಸರ್ಕಾರದ ಮೂಲಗಳು ತಿಳಿಸಿವೆ. ಇದರಲ್ಲಿ 90 ಪ್ರಕರಣಗಳು ವರದಿಯಾಗಿದ್ದು, ಒಂದು ಸಾವಿನ ಪ್ರಕರಣ ಹರಿಯಾಣದಲ್ಲಿ ಮತ್ತೊಂದು ಸಾವು ಕರ್ನಾಟಕದಲ್ಲಿ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ವೈರಸ್‌ನಿಂದ ಉಂಟಾದ ಜ್ವರವು ದೇಶಾದ್ಯಂತ ವರದಿಯಾಗಿವೆ. ಶೀತ, ಜ್ವರ, ಕೆಮ್ಮುವುದು ಈ ವೈರಸ್‌ನ ರೋಗಲಕ್ಷಣಗಳಾಗಿವೆ.

H3N2 ವೈರಸ್ ಎಂದರೇನು?

ಇದು ಇನ್‌ಫ್ಲುಯೆನ್ಸಂ ಒಂದು ಬಗೆಯ ವೈರಸ್ ಆಗಿದ್ದು, ಅದು ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ. ಈ ವೈರಸ್ ಮನುಷ್ಯರಿಗೆ ಮಾತ್ರವಲ್ಲದೆ ಪಕ್ಷಿಗಳು ಹಾಗೂ ಸಸ್ತನಿಗಳಿಗೂ ಸೋಂಕು ತರುತ್ತವೆ. H3N2 ಎಂಬುದು ಇನ್‌ಫ್ಲುಯೆನ್ಸಂ ವೈರಸ್‌ನ ಉಪವಿಭಾಗವಾಗಿದೆ. ಇದು ಮಾನವರಲ್ಲಿ ಶೀತಜ್ವರಕ್ಕೆ ಕಾರಣವಾಗುತ್ತದೆ.

H3N2 ರೋಗ ಲಕ್ಷಣಗಳು?

WHO ಪ್ರಕಾರ ಮಾನವರಲ್ಲಿ ಪಕ್ಷಿ, ಹಂದಿ ಮತ್ತು ಇತರ ಪ್ರಾಣಿ ಇನ್‌ಫ್ಲುಯೆನ್ಸಂ ಸೋಂಕುಗಳು ಸೌಮ್ಯವಾದ ಜ್ವರ ಮತ್ತು ಕೆಮ್ಮಿನಂತಹ ಸೋಂಕು, ನ್ಯೂಮೋನಿಯಾ, ತೀವ್ರವಾದ ಉಸಿರಾಟದ ತೊಂದರೆ, ಹಾಗೂ ಸಾವಿಗೂ ಕೂಡಾ ಈ ರೋಗ ಲಕ್ಷಣಗಳು ಕಾರಣವಾಗಬಹುದು ಎಂದು ತಿಳಿಸಿದೆ.

ವೈರಸ್‌ನ ಪ್ರಮುಖ ರೋಗಲಕ್ಷಣಗಳೆಂದರೆ: ಚಳಿ, ಕೆಮ್ಮುವುದು, ಜ್ವರ, ವಾಂತಿ, ಗಂಟಲು ನೋವು, ಸ್ನಾಯುಗಳು ಮತ್ತು ದೇಹದಲ್ಲಿ ನೋವು, ಸೀನುವಿಕೆ ಮತ್ತು ಶೀತ. ಉಸಿರಾಟದ ತೊಂದರೆ, ಎದೆ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸಿದರೆ, ನಿರಂತರ ಜ್ವರ ಇದ್ದರೆ ಮತ್ತು ಆಹಾರವನ್ನು ನುಂಗುವಾಗ ಗಂಟಲು ನೋವಾದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು.

ವೈರಸ್ ಹೇಗೆ ಹರಡುತ್ತದೆ?

ಒಬ್ಬ ಸೋಂಕಿತ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಅಥವಾ ಮಾನತಾಡುವಾಗ ಬಾಯಿಯಿಂದ ಬಿಡುಗಡೆಯಾಗುವ ಹನಿಗಳ ಮೂಲಕ H3N2 ಇನ್‌ಫ್ಲುಯೆನ್ಸಂ ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಸೋಂಕು ಹರಡಬಹುದು. ಗರ್ಭಿಣಿಯರು, ಚಿಕ್ಕ ಮಕ್ಕಳು, ವಯಸ್ಸಾದವರು ಹಾಗೂ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಈ ವೈರಸ್ ಜ್ವರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.

ರೋಗ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು:

1. ಪಲ್ಸ್ ಆಕ್ಸಿಮೀಟರ್ ಸಹಾಯದಿಂದ ಆಮ್ಲಜನಕ ಮಟ್ಟವನ್ನು ನಿರಂತರವಾಗಿ ಪರಿಶೀಲಿಸುತ್ತಿರಿ.

2. ಆಮ್ಲಜನಕದ ಶುದ್ಧತ್ವ ಮಟ್ಟವು 95% ಗಿಂತ ಕಡಿಮೆಯಿದ್ದರೆ ವೈದ್ಯರನ್ನು ಕಡ್ಡಾಯವಾಗಿ ಭೇಟಿಯಾಗಬೇಕು.

3. ಆಮ್ಲಜನಕದ ಶುದ್ಧತ್ವ ಮಟ್ಟವು 90% ಗಿಂತ ಕಡಿಮೆ ಇದ್ದರೆ, ತೀವ್ರಾ ನಿಗಾ ಅಗತ್ಯವಾಗಬಹುದು. ಅಂತಹ ಸಂದರ್ಭದಲ್ಲಿ ಸ್ವಯಂ ಔಷಧಿಗಳನ್ನು ತೆಗೆದುಕೊಳ್ಳದೆ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: H3N2 Virus: ಕೊರೊನಾ ಬಳಿಕ ಮತ್ತೊಂದು ವೈರಸ್​, ಕರ್ನಾಟಕದಲ್ಲಿ ಹೆಚ್​​3ಎನ್​​2ಗೆ​​ ಮೊದಲ ಬಲಿ

ಚಿಕಿತ್ಸೆಯ ಆಯ್ಕೆ ಯಾವುವು?

ಸರಿಯಾದ ವಿಶ್ರಾಂತಿಯನ್ನು ಪಡೆಯುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಜ್ವರ ಕಡಿಮೆ ಮಾಡಲು ಅಸೆಟಾಮಿನೋಫೆನ್ ಅಥವಾ ಐಬುಪ್ರೊಫೇನ್ ನಂತಹ ನೋವು ನಿವಾರಕಗಳನ್ನು ತೆಗೆದುಕೊಳ್ಳುವುದು H3N2 ಇನ್‌ಫ್ಲುಯೆನ್ಸಂನ ಕೆಲವೊಂದು ಪ್ರಾಥಮಿಕ ಚಿಕಿತ್ಸೆಗಳಾಗಿವೆ. ರೋಗಿಯು ತೀವ್ರವಾದ ರೋಗಲಕ್ಷಣಗಳನ್ನು ಹೊಂದಿದ್ದರೆ ವೈದ್ಯರು ಆಂಟಿ ವೈರಲ್ ಔಷಧಿಗಳಾದ ಒಸೆಲ್ಟಾಮಿವಿರ್ ಮತ್ತು ಝುನಾಮಿವಿರ್‌ನ್ನು ಸಹ ಶಿಫಾರಸು ಮಾಡಬಹುದು.

ಏನು ಮಾಡಬೇಕು ಮತ್ತು ಏನು ಮಾಡಬಾರದು

ಸೋಂಕಿತ ಜನರಿಂದ ಬೇರೆಯವರಿಗೆ ವೈರಸ್ ವೇಗವಾಗಿ ಹರಡಬಹುದು ಆದ್ದರಿಂದ ತಜ್ಞರು ಕೆಲವು ಪ್ರೋಟೋಕಾಲ್‌ಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದು ಹೇಳುತ್ತಾರೆ.

1. ನಿಯಮಿತವಾಗಿ ನೀರು ಮತ್ತು ಸಾಬೂನಿನಿಂದ ಕೈಗಳನ್ನು ತೊಳೆಯಿರಿ

2. ಫೇಸ್‌ಮಾಸ್ಕ್ ಧರಿಸಿ ಮತ್ತು ಜನಸಂದಣಿ ಇರುವ ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಿ.

3. ನಿಮ್ಮ ಮೂಗು ಮತ್ತು ಬಾಯಿಯನ್ನು ಕೈಗಳಿಂದ ಆಗಾಗ ಮುಟ್ಟಿಕೊಳ್ಳುವುದನ್ನು ತಪ್ಪಿಸಿ

4. ಕೆಮ್ಮುವಾಗ ಮತ್ತು ಸೀನುವಾಗ ಸರಿಯಾಗಿ ಬಾಯಿ ಮತ್ತು ಮೂಗನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ

5. ಸಾಕಷ್ಟು ನೀರನ್ನು ಸೇವಿಸಿ

6. ಜ್ವರ ಮತ್ತು ದೇಹದಲ್ಲಿ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಪ್ಯಾರಸಿಟಮಲ್ ತೆಗೆದುಕೊಳ್ಳಿ

7. ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬಾರದು

8. ಒಬ್ಬರನ್ನೊಬ್ಬರು ಕೈಕುಳುಕಿ ಮಾತಾಡುವುದನ್ನು ತಪ್ಪಿಸಿ

9. ವೈದ್ಯರನ್ನು ಸಂಪರ್ಕಿಸದೆ ಸ್ವಯಂ ಚಿಕಿತ್ಸೆ ಅಥವಾ ಔಷಧಿಗಳನ್ನು ತೆಗೆದುಕೊಳ್ಳಬೇಡಿ

ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ