ನಿಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ 5 ಯೋಗಾಸನಗಳನ್ನು ಮಾಡಿ

| Updated By: ವಿವೇಕ ಬಿರಾದಾರ

Updated on: Sep 08, 2022 | 7:00 AM

ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂಬಂಧಿತ  ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ನಿಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ 5 ಯೋಗಾಸನಗಳನ್ನು ಮಾಡಿ
Heart
Follow us on

ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂಬಂಧಿತ  ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಒತ್ತಡ, ಆತಂಕ ಮತ್ತು ಹೃದಯದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಯೋಗದ ಮೂಲಕ ಗುಣಪಡಿಸಿಕೊಳ್ಳಬಹುದು. ಇತ್ತೀಚಿಗೆ ಹೃದಯರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಗಳ ಹೆಚ್ಚುತ್ತಿದೆ. ಇದನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಸವಾಲಿನ ಸಂಗತಿಯಾಗಿದೆ.

ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ನೀವು ಉತ್ತಮ ಆಹಾರವನ್ನು ಸೇವಿಸಬೇಕು ಮತ್ತು ಚೆನ್ನಾಗಿ ನಿದ್ದೆ ಮಾಡಬೇಕು. ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಬಹಳ ಮುಖ್ಯ.

ನಿಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ 5 ಯೋಗಾಸನಗಳನ್ನು ಮಾಡಿ

ಭುಜಂಗಾಸನ


ಕೋಬ್ರಾ ಸ್ಟ್ರೆಚ್ ಎಂದೂ ಕರೆಯಲ್ಪಡುವ ಭುಜಂಗಾಸನವು ಬೆನ್ನು-ಬಾಗುವ ಆಸನವಾಗಿದ್ದು, ಇದು ಮುಖ್ಯವಾಗಿ ಕಿಬ್ಬೊಟ್ಟೆಯ ಪ್ರದೇಶವನ್ನು ಗುರಿಯಾಗಿಸುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿಡುತ್ತದೆ ಎಂದು ತಿಳಿದುಬಂದಿದೆ. ಈ ಯೋಗಾಸನವು ಒತ್ತಡ ಮತ್ತು ಆಯಾಸವನ್ನು ದೂರ ಮಾಡುತ್ತದೆ. ಇದು ಬೆನ್ನು ಬಲಪಡಿಸುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತಾಡಾಸನ

ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುವ ಹಲವು ಸಮಸ್ಯೆಗಳಲ್ಲಿ ಒತ್ತಡವೂ ಸೇರಿದೆ. ತಾಡಾಸನವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಈ ಮೂಲಕ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಬೆನ್ನು, ಸೊಂಟ ಮತ್ತು ಕಾಲುಗಳನ್ನು ಬಲಪಡಿಸುತ್ತದೆ.

ಮಕರಾಸನ

ಮಕರಾಸನವನ್ನು ಮೊಸಳೆಯ ಭಂಗಿ ಎಂದೂ ಕರೆಯುತ್ತಾರೆ, ಇದು ಒರಗಿಕೊಳ್ಳುವ ಯೋಗಾಸನವಾಗಿದ್ದು ಅದು ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡ, ಹೃದ್ರೋಗಗಳು ಮತ್ತು ಮಾನಸಿಕ ಕಾಯಿಲೆಗಳು ಸೇರಿದಂತೆ ಹಲವಾರು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಈ ಯೋಗಾಸನವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಉಸಿರಾಟ ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ.

ಗೋಮುಖಾಸನ

ಗೋಮುಖಾಸನವು ಕುಳಿತಿರುವ ಯೋಗ ಭಂಗಿಯಾಗಿದ್ದು, ಈ ಆಸನವು ಅಧಿಕ ರಕ್ತದೊತ್ತಡಕ್ಕೆ ನಿಯಂತ್ರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ.

ಮಲಸಾನ

ಮಲಸಾನವನ್ನು ಹಾರದ ಭಂಗಿ ಎಂದೂ ಕರೆಯುತ್ತಾರೆ, ಇದು ಸುಲಭವಾದ ಭಂಗಿಯಂತೆ ಕಾಣಿಸಬಹುದು ಆದರೆ ಸಾಕಷ್ಟು ಸ್ಥಿರತೆ ಮತ್ತು ಶಾಂತತೆಯ ಅಗತ್ಯವಿರುತ್ತದೆ.