ಒಂದೇ ರಕ್ತ ಪರೀಕ್ಷೆಯಿಂದ ನೀವು ಯಾವಾಗ ಮತ್ತು ಹೇಗೆ ಸಾಯುತ್ತೀರಿ ಎಂದು ಹೇಳಬಹುದು! ಸಂಶೋಧನೆಯಲ್ಲಿ ಬಹಿರಂಗ
ಯುಸಿಎಲ್ ಸಂಶೋಧನೆ ಒಂದು ಮಹತ್ವದ ವರದಿಯೊಂದನ್ನು ನೀಡಿದೆ. ಒಂದೇ ರಕ್ತ ಪರೀಕ್ಷೆಯು ಮಾನವ ದೇಹದ ಅಂಗಗಳ ವಯಸ್ಸನ್ನು ನಿಖರವಾಗಿ ಅಂದಾಜು ಮಾಡಬಹುದು ಎಂದು ಹೇಳಿದೆ. ಇದು ಹೃದಯ, ಯಕೃತ್ತು, ಶ್ವಾಸಕೋಶಗಳು ಮುಂತಾದ ಅಂಗಗಳ ವಯಸ್ಸಾಗುವ ಪ್ರಕ್ರಿಯೆಯನ್ನು ಊಹಿಸಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯು ಮುಂಬರುವ ದಶಕದಲ್ಲಿ ಸಾವಿಗೆ ಕಾರಣವಾಗುವ ರೋಗಗಳು ಮತ್ತು ಅಂಗಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಹಾಗಾಗಿ ಈ ಇದನ್ನು ಪತ್ತೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ನೋಡಿ

ನಮಗೆ ಜ್ವರ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳು ಬಂದಾಗ ಆಸ್ಪತ್ರೆಗೆ ಹೋಗುತ್ತೇವೆ. ಅಲ್ಲಿ ವೈದ್ಯರು ರಕ್ತ ಪರೀಕ್ಷೆ ಮಾಡುವಂತೆ ಹೇಳುವುದು ಉಂಟು, ಅವರು ಕನಿಷ್ಠ ಮೂರು ಅಥವಾ ನಾಲ್ಕು ರೀತಿಯ ರಕ್ತ ಪರೀಕ್ಷೆಗಳನ್ನು ಮಾಡುತ್ತಾರೆ. ಒಂದೇ ರಕ್ತ ಪರೀಕ್ಷೆಯಿಂದ ನೀವು ಯಾವಾಗ ಮತ್ತು ಹೇಗೆ ಸಾಯುತ್ತೀರಿ ಎಂದು ತಿಳಿಯುತ್ತದೆ ಎಂಬ ಬಗ್ಗೆ ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಮತ್ತು ಹೆಲ್ಸಿಂಕಿ ವಿಶ್ವವಿದ್ಯಾಲಯದ ತಜ್ಞರ ಯುಸಿಎಲ್ (ಯೂನಿವರ್ಸಿಟಿ ಕಾಲೇಜ್ ಲಂಡನ್) ಸಂಶೋಧನಾ ತಂಡವು ಬ್ರಿಟಿಷ್ ವೈಟ್ಹಾಲ್ II ಅಧ್ಯಯನದಲ್ಲಿ 45 ರಿಂದ 69 ವರ್ಷ ವಯಸ್ಸಿನ 6,235 ಜನರಿಂದ ರಕ್ತದ ಪ್ಲಾಸ್ಮಾ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಒಂಬತ್ತು ಅಂಗಗಳು (ಹೃದಯ, ರಕ್ತನಾಳಗಳು, ಯಕೃತ್ತು, ರೋಗನಿರೋಧಕ ವ್ಯವಸ್ಥೆ, ಮೇದೋಜ್ಜೀರಕ ಗ್ರಂಥಿ, ಮೂತ್ರಪಿಂಡಗಳು, ಶ್ವಾಸಕೋಶಗಳು, ಕರುಳುಗಳು ಮತ್ತು ಮೆದುಳು) ಸೇರಿದಂತೆ ಇಡೀ ದೇಹದ ಜೈವಿಕ ವಯಸ್ಸನ್ನು ನಿರ್ಧರಿಸುವ ಬಗ್ಗೆ ಒಂದು ಸಂಶೋಧನೆಯನ್ನು ನಡೆಸಿದ್ದಾರೆ.
ಯುಸಿಎಲ್ ನಡೆಸಿದ ಈ ಸಂಶೋಧನೆಯ ಫಲಿತಾಂಶಗಳನ್ನು ಲ್ಯಾನ್ಸೆಟ್ ಡಿಜಿಟಲ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಯುಸಿಎಲ್ನ ಮೆದುಳು ವಿಜ್ಞಾನ ವಿಭಾಗದ ಪ್ರೊಫೆಸರ್ ಮಿಕಾ ಕಿವಿಮಾಕಿ ಈ ಬಗ್ಗೆ ಹೇಳಿರುವಂತೆ, ನಮ್ಮ ಅಂಗಗಳು ಸಂಯೋಜಿತ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ, ಆದರೆ ಅವು ವಿಭಿನ್ನ ದರಗಳಲ್ಲಿ ವಯಸ್ಸುಗಳನ್ನು ಸೂಚಿಸುತ್ತದೆ. ವಿಶೇಷವಾಗಿ ಅಂಗಗಳಲ್ಲಿ ಅಥವಾ ವಯಸ್ಸಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳು ಕಂಡು ಬರುತ್ತದೆ. ಆದ್ದರಿಂದ ನಮ್ಮ ಆರೋಗ್ಯದ ಎಲ್ಲಾ ಅಂಶಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಅಂಗಾಗಳಿಗೂ ವಯಸ್ಸು ಎಂಬುದನ್ನು ಕೂಡ ಈ ಸಂಶೋಧನೆಯಲ್ಲಿ ಪತ್ತೆ ಮಾಡಲಾಗಿದೆ. ಅಂಗವು ನಿರೀಕ್ಷೆಗಿಂತ ವೇಗವಾಗಿ ವಯಸ್ಸಾಗುತ್ತಿದೆಯೇ ಎಂದು ಸರಳ ರಕ್ತ ಪರೀಕ್ಷೆಯು ಪತ್ತೆ ಮಾಡುತ್ತದೆ. ಮುಂಬರುವ ವರ್ಷಗಳಲ್ಲಿ, ಈ ರೀತಿಯ ರಕ್ತ ಪರೀಕ್ಷೆಗಳು ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಕ್ಕಳಲ್ಲಿ ಮಧುಮೇಹ ಬರದಂತೆ ತಡೆಯಲು ಈ ಸಲಹೆಗಳನ್ನು ಪಾಲಿಸಿ
ಈ ಅಧ್ಯಯನಗಳು ಒಂದೇ ರಕ್ತ ಪರೀಕ್ಷೆಯಿಂದ ಮಾನವ ಅಂಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತೋರಿಸುತ್ತವೆ. ಹಾಗೂ ಎಷ್ಟು ಬೇಗನೆ ವಯಸ್ಸಾಗುತ್ತಾರೆಂದು ಅಂದಾಜು ಮಾಡುವ ಮೂಲಕ, ಮುಂದಿನ ಹತ್ತು ವರ್ಷಗಳಲ್ಲಿ ಒಬ್ಬ ವ್ಯಕ್ತಿಯು ಯಾವ ಕಾಯಿಲೆಗಳಿಗೆ ಒಳಗಾಗುತ್ತಾನೆ ಮತ್ತು ಯಾವ ಅಂಗಾಂಗ ಹಾನಿಯು ಅವರನ್ನು ಸಾಯುವಂತೆ ಮಾಡುತ್ತದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿದೆ. ಉದಾಹರಣೆಗೆ, ಮನುಷ್ಯನ ಮೇಲೆ ಈ ವಿಶೇಷ ರಕ್ತ ಪರೀಕ್ಷೆಯನ್ನು ನಡೆಸುವ ಮೂಲಕ, ಅವನ ದೇಹದ ಪ್ರಮುಖ ಭಾಗಗಳಾದ ಹೃದಯ, ಯಕೃತ್ತು, ಶ್ವಾಸಕೋಶಗಳು, ರಕ್ತನಾಳಗಳು, ಮೆದುಳು ಮತ್ತು ಮೂತ್ರಪಿಂಡಗಳ ವಯಸ್ಸಾಗುವ ಪ್ರಕ್ರಿಯೆಯನ್ನು ನಿರ್ಧಾರಿಸಬಹುದು ಎಂದು ಹೇಳಿದ್ದಾರೆ. 30 ವರ್ಷ ವಯಸ್ಸಿನ ವ್ಯಕ್ತಿಗೆ 30 ವರ್ಷ ಹಳೆಯ ಅಂಗಗಳು ಇರಬೇಕು. ಆದರೆ, ಅವನು ತಿನ್ನುವ ಆಹಾರ, ಮಾಲಿನ್ಯ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ, ಅವನ ಕೆಲವು ಅಂಗಗಳು 30 ವರ್ಷಕ್ಕಿಂತ ಮೇಲ್ಪಟ್ಟ 40 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕಂಡುಬರುವ ಅಂಗಗಳಾಗಿ ಬದಲಾಗುತ್ತಿವೆ. ಇದರರ್ಥ ದೇಹದಲ್ಲಿನ ಅಂಗಗಳ ವಯಸ್ಸು ಮಾನವನ ವಯಸ್ಸುಗಿಂತ ವೇಗವಾಗಿ ಹೆಚ್ಚಾಗುತ್ತದೆ. ಇದು ಅಂಗವು ಬೇಗನೆ ಹಾನಿಗೊಳ್ಳುತ್ತದೆ ಎಂದು. ಒಬ್ಬ ವ್ಯಕ್ತಿಯ ಹೃದಯದ ವಯಸ್ಸು ಅವರ ವಯಸ್ಸಿಗಿಂತ ಹೆಚ್ಚಿದ್ದರೆ, ಅವರಿಗೆ ಹೃದಯಾಘಾತದಂತಹ ಹೃದಯ ಸಂಬಂಧಿತ ಕಾಯಿಲೆಗಳು ಬರುವ ಅಪಾಯವಿರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ