ಪ್ರಪಂಚದಾದ್ಯಂತ ಗರ್ಭಾವಸ್ಥೆ, ಹೆರಿಗೆಯ ಸಮಯದಲ್ಲಿ ಪ್ರತಿ 2 ನಿಮಿಷಕ್ಕೆ ಒಬ್ಬ ಮಹಿಳೆ ಸಾವು: ಯು ಎನ್​​​ ಏಜೆನ್ಸಿ

ಗರ್ಭಾವಸ್ಥೆ ಹಾಗೂ ಹೆರಿಗೆಯ ಸಮಯದಲ್ಲಿ ಪ್ರತಿ ನಿಮಿಷಕ್ಕೆ ಒಬ್ಬ ಮಹಿಳೆಯ ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯು ಎನ್​​ ಏಜೆನ್ಸಿ ವರದಿ ಮಾಡಿದೆ.

ಪ್ರಪಂಚದಾದ್ಯಂತ ಗರ್ಭಾವಸ್ಥೆ, ಹೆರಿಗೆಯ ಸಮಯದಲ್ಲಿ  ಪ್ರತಿ 2 ನಿಮಿಷಕ್ಕೆ ಒಬ್ಬ ಮಹಿಳೆ ಸಾವು: ಯು ಎನ್​​​ ಏಜೆನ್ಸಿ
ಸಾಂದರ್ಭಿಕ ಚಿತ್ರ
Image Credit source: Arab News

Updated on: Feb 23, 2023 | 11:53 AM

20 ವರ್ಷಗಳಲ್ಲಿ ಗರ್ಭಿಣಿ ಅಥವಾ ಹೊಸ ತಾಯಂದಿರ ಮರಣ ಪ್ರಮಾಣದಲ್ಲಿ ಶೇಕಡಾ 34.3 ರಷ್ಟು ಕಡಿಮೆಯಾಗಿದ್ದರೂ ಕೂಡ ಹೆರಿಗೆಯ ಸಮಯದಲ್ಲಿ ಪ್ರತಿ ನಿಮಿಷಕ್ಕೆ ಒಬ್ಬ ಮಹಿಳೆಯ ಮರಣಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.
20 ವರ್ಷಗಳಲ್ಲಿ ತಾಯಂದಿರ ಮರಣ ಪ್ರಮಾಣವು ಮೂರನೇ ಒಂದು ಭಾಗದಷ್ಟು ಕಡಿಮೆಯಾದರೂ, ಗರ್ಭಧಾರಣೆ ಅಥವಾ ಹೆರಿಗೆಯ ತೊಂದರೆಗಳಿಂದಾಗಿ ಪ್ರತಿ ಎರಡು ನಿಮಿಷಗಳಿಗೊಮ್ಮೆ ಮಹಿಳೆ ಸಾಯುತ್ತಾಳೆ ಎಂದು ವಿಶ್ವಸಂಸ್ಥೆ ಗುರುವಾರ ವರದಿ ಮಾಡಿದೆ.

ಒಟ್ಟಾರೆ ಹೆರಿಗೆಯ ಸಮಯದ ಮರಣ ಪ್ರಮಾಣವು 20 ವರ್ಷಗಳ ಅವಧಿಯಲ್ಲಿ ಶೇಕಡಾ 34.3 ರಷ್ಟು ಕಡಿಮೆಯಾಗಿದೆ. ಅದೇನೇ ಇದ್ದರೂ, ಅಂದರೆ 2020 ರಲ್ಲಿ ದಿನಕ್ಕೆ ಸುಮಾರು 800 ಮಹಿಳೆಯರು ಅಥವಾ ಪ್ರತಿ ಎರಡು ನಿಮಿಷಕ್ಕೆ ಒಬ್ಬರು ಸಾವನ್ನಪ್ಪಿದ್ದಾರೆ. 2000 ಮತ್ತು 2015 ರ ನಡುವೆ ಅಮೆರಿಕದಲ್ಲಿ ಹೆರಿಗೆಯ ಸಮಯದ ಮರಣ ಪ್ರಮಾಣದಲ್ಲಿ ಅತೀ ಹೆಚ್ಚು ಏರಿಕೆ ಕಂಡಿದೆ.

ಇದನ್ನೂ ಓದಿ: ಮಧ್ಯರಾತ್ರಿಯಾದರೂ ನಿದ್ರೆ ಬರುತ್ತಿಲ್ಲವೇ? ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ, ತಕ್ಷಣವೇ ನಿದ್ದೆ ಬರುತ್ತದೆ

ಗರ್ಭಧಾರಣೆಯು ಪ್ರತೀ ಮಹಿಳೆಗೂ ವಿಶೇಷ ಅನುಭವವಾಗಿದೆ. ಆದರೆ ದುರಂತವೆನೆಂದರೆ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಶ್ವ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಶೇಕಡಾ 17 ರಷ್ಟು ಮತ್ತು ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್‌ನಲ್ಲಿ ಶೇಕಡಾ 15 ರಷ್ಟು ದರ ಏರಿಕೆಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:53 am, Thu, 23 February 23