ಇನ್ಮುಂದೆ ಈ AI ಕ್ಯಾಲ್ಕುರೇಟರ್ ಮೂಲಕ ಸಾವಿಗೆ ಎಷ್ಟು ಹತ್ತಿರದಲ್ಲಿದ್ದೇವೆ ಎಂದು ತಿಳಿಯಬಹುದು

|

Updated on: Oct 27, 2024 | 11:21 AM

ಲಂಡನ್‌ನ ಸಂಶೋಧಕರು ಅಭಿವೃದ್ಧಿಪಡಿಸಿರುವ ಹೊಸ AI ಕ್ಯಾಲ್ಕುಲೇಟರ್, ಎಲೆಕ್ಟ್ರೋಕಾರ್ಡಿಯೋಗ್ರಾಮ್‌ಗಳನ್ನು ಬಳಸಿ ವ್ಯಕ್ತಿಯ ಸಾವಿನ ಅಪಾಯವನ್ನು ಬಹಿರಂಗಪಡಿಸಲಿದೆ. UK ರಾಷ್ಟ್ರೀಯ ಆರೋಗ್ಯ ಸೇವೆಯು ಮುಂದಿನ ವರ್ಷದಿಂದ ಈ ತಂತ್ರಜ್ಞಾನವನ್ನು ಎರಡು ಆಸ್ಪತ್ರೆಗಳಲ್ಲಿ ಪ್ರಯೋಗಿಸಲು ಯೋಜಿಸಿದೆ. ನೂರಾರು ರೋಗಿಗಳು ಈ AI ಉಪಕರಣದಿಂದ ಅಂದಾಜು ಜೀವಿತಾವಧಿ ಮುನ್ಸೂಚನೆಯನ್ನು ಪಡೆಯಲಿದ್ದಾರೆ.

ಇನ್ಮುಂದೆ ಈ AI ಕ್ಯಾಲ್ಕುರೇಟರ್ ಮೂಲಕ ಸಾವಿಗೆ ಎಷ್ಟು ಹತ್ತಿರದಲ್ಲಿದ್ದೇವೆ ಎಂದು ತಿಳಿಯಬಹುದು
AI Calculator
Follow us on

ಈಗಂತೂ ಎಲ್ಲೇ ಹೋದರೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಆವರಿಸಿಕೊಂಡು ಬಿಟ್ಟಿದೆ. ಮುಂದಿನ ದಿನಗಳಲ್ಲಿ ಮನುಷ್ಯರಿಗೆ ಅಂತ ಮಾಡಲು ಯಾವುದಾದರೂ ಕೆಲಸ ಉಳಿದುಕೊಳ್ಳುತ್ತದೆಯೇ ಅನ್ನೋ ಸಂಶಯ ಶುರುವಾಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಹುಟ್ಟಿದ ಮನುಷ್ಯ ಒಂದು ದಿನ ಸಾಯಲೇಬೇಕು. ನಾವು ಯಾವಾಗ ಹೇಗೆ ಸಾಯುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಇದೀಗ ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ನಾವು ಸಾವಿಗೆ ಎಷ್ಟು ಹತ್ತಿರದಲ್ಲಿದ್ದೇವೆ ಎಂಬುದನ್ನು ತಿಳಿಯಬಹುದಾಗಿದೆ ಎಂದು ವಿಜ್ಞಾನಿಗಳ ಬಹಿರಂಗಪಡಿಸಿದ್ದಾರೆ.

ಹೌದು ಇನ್ಮುಂದೆ AI ಕ್ಯಾಲ್ಕುರೇಟರ್ ಮೂಲಕ ನಮ್ಮ ಸಾವಿಗೆ ಬಗ್ಗೆ ಹೃದಯಾಘಾತ ಸಂಭವಿಸುವ ಅಪಾಯಗಳ ಬಗ್ಗೆ ತಿಳಿಯಬಹುದುದಾಗಿದೆ. ಲ್ಯಾನ್ಸೆಟ್ ಡಿಜಿಟಲ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನವು ಹೊಸ ಎಐ ಕ್ಯಾಲ್ಕುಲೇಟರ್ ಕುರಿತು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಲಂಡನ್ ಲ್ಯಾನ್ಸೆಟ್ ಸಂಶೋಧಕರು ಹೊಸ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಯಾಲ್ಕುಲೇಟರ್ ಅಭಿವೃದ್ಧಿಪಡಿಸಿದ್ದಾರೆ. AI-ಚಾಲಿತ ಎಲೆಕ್ಟ್ರೋಕಾರ್ಡಿಯೋಗ್ರಾಮ್‌ಗಳು (ECGs) ಒಬ್ಬ ವ್ಯಕ್ತಿಯ ಭವಿಷ್ಯದ ಆರೋಗ್ಯ ಸಮಸ್ಯೆಗಳು ಮತ್ತು ಸಾವಿನ ಅಪಾಯವನ್ನು ಊಹಿಸಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿದೆ.

ಇದನ್ನೂ ಓದಿ: ವಾಕಿಂಗ್​ ವೇಳೆ ಈ ತಪ್ಪುಗಳನ್ನು ಮಾಡಬೇಡಿ; ಪ್ರಯೋಜನಕ್ಕಿಂತ ಸಮಸ್ಯೆಗಳೇ ಹೆಚ್ಚು

ಈ ಹೊಸ ಅವಿಷ್ಕಾರವನ್ನು ಪ್ರಯೋಗಕ್ಕೆ ತರಲು ಯುಕೆ ಆರೋಗ್ಯ ಸಂಸ್ಥೆ ಸಿದ್ಧವಾಗಿವೆ. ರಾಷ್ಟ್ರೀಯ ಆರೋಗ್ಯ ಸೇವೆಯ ಅಡಿಯಲ್ಲಿ ಎರಡು ಆಸ್ಪತ್ರೆಗಳಲ್ಲಿ ಮುಂದಿನ ವರ್ಷದ ಮಧ್ಯದಿಂದ ಈ ತಂತ್ರಜ್ಞಾನವನ್ನು ಚಾಲ್ತಿಗೆ ತರಲಿದೆ. ಈ ಮೂಲಕ ನೂರಾರು ರೋಗಿಗಳು ಶೀಘ್ರದಲ್ಲೇ AI “ಡೆತ್ ಕ್ಯಾಲ್ಕುಲೇಟರ್” ನಿಂದ ಅಂದಾಜು ಜೀವಿತಾವಧಿಯ ಮುನ್ಸೂಚನೆಯನ್ನು ಪಡೆಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:05 am, Sun, 27 October 24