ನಿಮಗೂ ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಅಭ್ಯಾಸ ಇದ್ದಲ್ಲಿ ಈ ಸ್ಟೋರಿ ತಪ್ಪದೆ ಓದಿ! ಇದು ನಿಮಗೆ ತಿಳಿದಿರಲೇಬೇಕು

ಈಗಂತೂ ಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಶ್ವಾಸಕೋಶಗಳ ಮೇಲೆ ಮಾತ್ರವಲ್ಲದೆ ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ಈ ರೀತಿ ಹೆಚ್ಚುತ್ತಿರುವ ಮಾಲಿನ್ಯದ ಮಧ್ಯೆ ಆರೋಗ್ಯವಾಗಿರಲು ಹೆಣಗಾಡುವ ಸ್ಥಿತಿ ಆರಂಭವಾಗಿದೆ. ಅಷ್ಟೇ ಅಲ್ಲ, ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಅಭ್ಯಾಸ ಇದ್ದಲ್ಲಿ ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಇದು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನಿಮಗೂ ಕೂಡ ಕಾಂಟ್ಯಾಕ್ಟ್ ಲೆನ್ಸ್‌ ಹಾಕುವ ಅಭ್ಯಾಸವಿದ್ದರೆ ತಪ್ಪದೆ ಈ ಸ್ಟೋರಿ ಓದಿ.

ನಿಮಗೂ ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಅಭ್ಯಾಸ ಇದ್ದಲ್ಲಿ ಈ ಸ್ಟೋರಿ ತಪ್ಪದೆ ಓದಿ! ಇದು ನಿಮಗೆ ತಿಳಿದಿರಲೇಬೇಕು
Contact Lens Care In Polluted Areas

Updated on: Nov 03, 2025 | 8:53 PM

ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ (Air Pollution) ಹೆಚ್ಚಾಗುತ್ತಿದ್ದು ಇದರಿಂದ ಅನೇಕ ರೀತಿಯ ಆರೋಗ್ಯ (Health) ಸಮಸ್ಯೆಗಳು ಕಂಡುಬರುತ್ತಿದೆ. ಅದರಲ್ಲಿಯೂ ಜನರಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಏರಿಕೆ ಕಂಡುಬಂದಿದ್ದು, ಕಿರಿಕಿರಿ ಮತ್ತು ಪದೇ ಪದೇ ಕಣ್ಣಿನಲ್ಲಿ ನೀರು ಬರುವುದು ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ವರ್ಷವೂ ಕೂಡ ಈ ಸಮಯದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿರುತ್ತದೆ, ಇದು ವಿವಿಧ ರೀತಿಯ ಅನಾರೋಗ್ಯವನ್ನು ಆಹ್ವಾನಿಸುತ್ತದೆ. ಈ ರೀತಿ ಮಾಲಿನ್ಯದ ಹೆಚ್ಚಳ ಶ್ವಾಸಕೋಶ ಮತ್ತು ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆಯಾದರೂ, ಕಣ್ಣುಗಳು ಸಹ ಅಪಾಯದಲ್ಲಿರುತ್ತವೆ ಎಂಬುದನ್ನು ಮರೆಯಬಾರದು. ಆರೋಗ್ಯಕ್ಕೆ ಹಾನಿಕಾರಕವಾದ ಈ ಗಾಳಿಯು ವಿಶೇಷವಾಗಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು (Contact Lens) ಧರಿಸುವವರಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನಿಮಗೂ ಕೂಡ ಕಾಂಟ್ಯಾಕ್ಟ್ ಲೆನ್ಸ್‌ ಹಾಕುವ ಅಭ್ಯಾಸವಿದ್ದರೆ ತಪ್ಪದೆ ಈ ಸ್ಟೋರಿ ಓದಿ.

ವೈದ್ಯರು ಹೇಳುವ ಪ್ರಕಾರ, ವಾಯು ಗುಣಮಟ್ಟ ಸೂಚ್ಯಂಕ (AQI) 200 ಕ್ಕಿಂತ ಹೆಚ್ಚಿದ್ದರೆ ಮತ್ತು ಪಿಎಂ 2.5 ಮಟ್ಟವು 100 ಕ್ಕಿಂತ ಹೆಚ್ಚಿದ್ದರೆ, ಕಣ್ಣುಗಳಿಗೆ ಹಾನಿಯಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಟ್ಟವು 100 ಕ್ಕಿಂತ ಕಡಿಮೆ ಇರಬೇಕು. ಆದರೆ ಅನೇಕ ಪ್ರದೇಶಗಳಲ್ಲಿ ಇದು ಹೆಚ್ಚಾಗಿರುತ್ತದೆ. ಪಿಎಂ 2.5 ಅಥವಾ PM 2.5 ಮಾಲಿನ್ಯವು ಕೂದಲಿನ ಪ್ರಮಾಣಕ್ಕಿಂತ ಅನೇಕ ಪಟ್ಟು ತೆಳ್ಳಗಿರುವಷ್ಟು ಸಣ್ಣ ಕಣಗಳನ್ನು ಹೊಂದಿರುತ್ತದೆ. ಈ ಕಣಗಳು ನೈಟ್ರೋಜನ್ ಡೈಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್‌ನಂತಹ ರಾಸಾಯನಿಕಗಳನ್ನು ಹೊಂದಿರುತ್ತವೆ, ಇದು ಕಣ್ಣುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ವಾಯುಮಾಲಿನ್ಯವು ಕಣ್ಣುಗಳಿಗೆ ಯಾವ ರೀತಿಯಲ್ಲಿ ಹಾನಿ ಮಾಡುತ್ತದೆ?

ಡಾ. ಅಶುತೋಷ್ ಶರ್ಮಾ ಅವರು ತಿಳಿಸಿರುವ ಮಾಹಿತಿ ಪ್ರಕಾರ ಆಸ್ಪತ್ರೆಗಳಲ್ಲಿ, ಕಳೆದ ಕೆಲವು ವಾರಗಳಲ್ಲಿ ಶುಷ್ಕತೆ, ಕಿರಿಕಿರಿ ಮತ್ತು ಕಣ್ಣಿನಲ್ಲಿ ನೀರು ಬರುವಿಕೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಸುಮಾರು 50% ಹೆಚ್ಚಳವಾಗಿದೆ. ಕೆಲವು ರೋಗಿಗಳು ತಮ್ಮ ಕಣ್ಣುಗಳಲ್ಲಿ ಜುಮ್ಮೆನ್ನುವ ಸಂವೇದನೆಯೂ ಕಂಡುಬರುತ್ತದೆ ಎಂದಿದ್ದಾರೆ. ಮಾಲಿನ್ಯದಲ್ಲಿರುವ ಸಣ್ಣ ಕಣಗಳು ಕಣ್ಣುಗಳನ್ನು ಪ್ರವೇಶಿಸಿ ಈ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ. ಮಾತ್ರವಲ್ಲ ಈ ಕಣಗಳು ಕಣ್ಣುಗಳಿಗೆ ಗಂಭೀರ ಹಾನಿಯನ್ನುಂಟುಮಾಡಬಹುದು. ಅದರಲ್ಲಿಯೂ ಕೆಲಸಕ್ಕಾಗಿ ಹೊರಗೆ ದೀರ್ಘಕಾಲ ಕಳೆಯುವವರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಇನ್ನು ಶ್ವಾಸಕೋಶದಂತೆಯೇ, ಮಾಲಿನ್ಯವು ಕಣ್ಣುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಾಲಿನ್ಯದಲ್ಲಿರುವ ಸಾರಜನಕ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್ ಮತ್ತು ಇಂಗಾಲದ ಕಣಗಳಂತಹ ಮಾಲಿನ್ಯಕಾರಕಗಳು ಕಣ್ಣುಗಳಲ್ಲಿನ ತೇವಾಂಶವನ್ನು ಕಡಿಮೆ ಮಾಡಿ, ಕಿರಿಕಿರಿ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಣ್ಣಿಗೆ ಕಸ ಬಿದ್ದರೆ ತಕ್ಷಣ ಕಣ್ಣನ್ನು ಉಜ್ಜಬೇಡಿ, ಈ ಕೆಲಸ ಮೊದ್ಲು ಮಾಡಿ

ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಿಗೆ ಯಾವ ರೀತಿಯಲ್ಲಿ ಹಾನಿ ಉಂಟುಮಾಡುತ್ತದೆ?

ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಲ್ಲಿ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ಕಂಡುಬರುತ್ತಿದೆ. ಏಕೆಂದರೆ ಕಣ್ಣುಗಳ ಮೇಲ್ಮೈ ಬಹಳ ಸೂಕ್ಷ್ಮವಾಗಿರುತ್ತದೆ. ಹೊಗೆಗೆ ಅಲ್ಪಾವಧಿಗೆ ಒಡ್ಡಿಕೊಂಡರೂ ಕಣ್ಣುಗಳಲ್ಲಿ ಉರಿ, ತುರಿಕೆ ಅಥವಾ ನೀರು ಬರಬಹುದು. ಮಾತ್ರವಲ್ಲ ಕಾಂಟ್ಯಾಕ್ಟ್ ಲೆನ್ಸ್‌ಗಳು ಕಾರ್ನಿಯಾದ ಮೇಲೆ ಇರುತ್ತವೆ ಮತ್ತು ಕಣ್ಣಿನೊಂದಿಗೆ ನೇರ ಸಂಪರ್ಕದಲ್ಲಿರುತ್ತವೆ. ಒಬ್ಬ ವ್ಯಕ್ತಿಯು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಿ ಕಲುಷಿತ ವಾತಾವರಣಕ್ಕೆ ಹೋದಾಗ, ಸಣ್ಣ ಕಣಗಳು (PM 2.5) ಲೆನ್ಸ್‌ಗಳ ಮೇಲೆ ನೆಲೆಗೊಂಡು ಕ್ರಮೇಣ ಕಣ್ಣುಗಳಿಗೆ ಹಾನಿ ಮಾಡುತ್ತವೆ. ಇದು ಶುಷ್ಕತೆ, ತುರಿಕೆ ಮತ್ತು ಸುಡುವಿಕೆಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಕಾರ್ನಿಯಲ್ ಬರ್ನಿಂಗ್ ಕೂಡ ಸಂಭವಿಸಬಹುದು, ಇದು ಕಣ್ಣುಗಳಿಗೆ ಬಹಳ ಅಪಾಯಕಾರಿಯಾಗಬಹುದು.

ಅಷ್ಟೇ ಅಲ್ಲ, ದೀರ್ಘಕಾಲದ ವರೆಗೆ ಲೆನ್ಸ್‌ಗಳನ್ನು ಧರಿಸಿದರೆ, ಸೋಂಕುಗಳು ಹೆಚ್ಚಾಗಬಹುದು, ಇದು ಕಣ್ಣುಗಳಿಗೆ ಹಾನಿಯನ್ನುಂಟುಮಾಡಬಹುದು. ಹೆಚ್ಚಿನ ಮಾಲಿನ್ಯವಿರುವ ಪ್ರದೇಶಗಳಲ್ಲಿ, ಜನರು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವುದನ್ನು ತಪ್ಪಿಸಬೇಕು. ಹೌದು, ಅವುಗಳನ್ನು ಕೆಲಸ ಮಾಡುವಾಗ ಅಥವಾ ಮನೆಯಲ್ಲಿರುವಾಗ ಧರಿಸಿ, ಆದರೆ ಹೊರಗೆ ಹೋಗುವಾಗ ಧರಿಸುವುದನ್ನು ಆದಷ್ಟು ತಪ್ಪಿಸಬೇಕು. ಲೆನ್ಸ್‌ಗಳನ್ನು ಧರಿಸುವುದು ಅಗತ್ಯವಿದ್ದರೆ, ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಒಳ್ಳೆಯದು.

ಲೆನ್ಸ್‌ಗಳನ್ನು ಧರಿಸುವ ಮೊದಲು ಈ ವಿಷಯ ನೆನಪಿರಲಿ:

  • ಪ್ರತಿದಿನ ಹೊಸ ಲೆನ್ಸ್‌ಗಳನ್ನು ಧರಿಸಿ. ಬಳಸಿದ ಲೆನ್ಸ್‌ಗಳನ್ನು ಮತ್ತೆ ಮತ್ತೆ ಬಳಸಬೇಡಿ. ನಿಮ್ಮ ವೈದ್ಯರ ನಿರ್ದೇಶನದಂತೆ ನಿಮ್ಮ ಕಣ್ಣುಗಳಿಗೆ ಐ ಡ್ರಾಪ್ ಬಳಸಿ.
  • ನಿಮ್ಮ ಕಣ್ಣುಗಳಿಗೆ ಧೂಳು ಬರದಂತೆ ಹೊರಗೆ ಹೋಗುವಾಗ ಕನ್ನಡಕಗಳನ್ನು ಧರಿಸಿ.
  • ನಿಮ್ಮ ಕಣ್ಣುಗಳನ್ನು ತಣ್ಣೀರಿನಿಂದ ತೊಳೆಯಿರಿ. ದೀರ್ಘಕಾಲದ ವರೆಗೆ ಲೆನ್ಸ್‌ಗಳನ್ನು ಧರಿಸಬೇಡಿ.
  • ಕಣ್ಣುಗಳು ಉರಿಯುತ್ತಿದ್ದರೆ ಅಥವಾ ತುರಿಕೆ ಕಂಡುಬಂದರೆ ಅವುಗಳನ್ನು ಉಜ್ಜಬೇಡಿ, ಏಕೆಂದರೆ ಇದು ಕಿರಿಕಿರಿಯನ್ನು ಇನ್ನಷ್ಟು ಹೆಚ್ಚಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Mon, 3 November 25