MV DIABET: ಮಧುಮೇಹಿಗಳಿಗೆ ಇಲ್ಲಿದೆ ಸಿಹಿ ಸುದ್ದಿ, ನಿಮಗಾಗಿ ಬಂದಿದೆ ಅಪ್ಲಿಕೇಶನ್, ಅದರ ಕಾರ್ಯ ವಿಧಾನ ಹೀಗಿದೆ

|

Updated on: Feb 12, 2023 | 4:01 PM

ಮಧುಮೇಹಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳ ಕುರಿತು ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಹೊಸದಾಗಿ MV DIABET Application ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

MV DIABET: ಮಧುಮೇಹಿಗಳಿಗೆ ಇಲ್ಲಿದೆ ಸಿಹಿ ಸುದ್ದಿ, ನಿಮಗಾಗಿ ಬಂದಿದೆ ಅಪ್ಲಿಕೇಶನ್, ಅದರ ಕಾರ್ಯ ವಿಧಾನ ಹೀಗಿದೆ
MV DIABET Application
Follow us on

ಮಧುಮೇಹಿಗಳಿಗಾಗಿ ಚೆನ್ನೈನ ಎಂವಿ ಆಸ್ಪತ್ರೆ ಮತ್ತು ರಾಯಪುರಂನ ಪ್ರೊ.ಎಂ ವಿಶ್ವನಾಥನ್ ಮಧುಮೇಹ ಸಂಶೋಧನಾ ಕೇಂದ್ರವು ಹೊಸದಾಗಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇದರ ಮೂಲಕ ಮಧುಮೇಹಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆ ಅಥವಾ ಪ್ರಶ್ನೆಗಳಿದ್ದರೂ ನೀವು ತಜ್ಞರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಮಧುಮೇಹಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳ ಕುರಿತು ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಹೊಸದಾಗಿ MV DIABET Application ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಈ ಅಪ್ಲಿಕೇಶನ್ ಶನಿವಾರ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಮಧುಮೇಹ ತಜ್ಞರಾದ ಡಾ.ವಿಜಯ್ ವಿಶ್ವನಾಥನ್ ಮಾತನಾಡಿ, ಈ ಆ್ಯಪ್ ವಾಟ್ಸಾಪ್ ಸಂಖ್ಯೆಗೆ ಸಂಪರ್ಕಗೊಂಡಿದ್ದು, ನಮ್ಮ ತಂಡ ನಿಮ್ಮ ಎಲ್ಲ ರೀತಿಯ ಸಮಸ್ಯೆ ಆಥವಾ ಪ್ರಶ್ನೆಗಳನ್ನು ಬಗೆಹರಿಸಬಲ್ಲದು ಎಂದು ಹೇಳಿದರು. ಮಧುಮೇಹ ಹೊಂದಿರುವ ರೋಗಿಗಳು ಕೆಲವು ರೀತಿಯ ನರ ಹಾನಿ ಅಥವಾ ನರಗಳಿಗೆ ಸಂಬಂಧಪಟ್ಟ ರೋಗಗಳಿಗೆ ತುತ್ತಾಗುತ್ತಾರೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗಲು ಕಾರಣವಾಗುತ್ತದೆ. ಇದರಿಂದಾಗಿ ವಿಶೇಷವಾಗಿ ಕಾಲುಗಳಲ್ಲಿನ ರಕ್ತನಾಳಗಳ ಗೋಡೆಗಳಿಗೆ ಹಾನಿಯಾಗುತ್ತದೆ. ಇದು ಸಾಕಷ್ಟು ನೋವುಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಸೆಲೆಬ್ರಿಟಿಗಳು ಫಾಲೋ ಮಾಡುವ ಐಸ್ ವಾಟರ್ ಬಾತ್, ನೀವು ಪ್ರಯತ್ನಿಸುವ ಮೊದಲು ಈ ವಿಷಯ ತಿಳಿದುಕೊಳ್ಳಿ

ಈ ರೀತಿಯ ಸಮಸ್ಯೆಯನ್ನು ನಿರ್ಲಕ್ಷ್ಯಿಸುತ್ತಾ ಹೋದ ಹಾಗೆ ಸಮಸ್ಯೆ ಹೆಚ್ಚಾಗಿ ಕಾಲು ಕೊಳೆತು ಹೋಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು. ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ MV DIABET ಎಂಬ ಅಪ್ಲಿಕೇಶನ್ ವಾಟ್ಸ್ ಆಪ್ ಸಂಖ್ಯೆಗೆ ಸಂಪರ್ಕಿಸಲಾಗಿದೆ. ಇದರಿಂದಾಗಿ ಮಧುಮೇಹ ಕಾಲು ರೋಗ ಮತ್ತು ಮಧುಮೇಹದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 4:00 pm, Sun, 12 February 23