ಸೆಲೆಬ್ರಿಟಿಗಳು ಫಾಲೋ ಮಾಡುವ ಐಸ್ ವಾಟರ್ ಬಾತ್, ನೀವು ಪ್ರಯತ್ನಿಸುವ ಮೊದಲು ಈ ವಿಷಯ ತಿಳಿದುಕೊಳ್ಳಿ

ಐಸ್​​ ಕ್ಯೂಬ್​​​ಗಳ ಟಬ್​​​​ನಲ್ಲಿ ಸ್ನಾನ ಮಾಡುವುದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಇದು ಉತ್ತಮವೇ ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ

ಸೆಲೆಬ್ರಿಟಿಗಳು ಫಾಲೋ ಮಾಡುವ ಐಸ್ ವಾಟರ್ ಬಾತ್, ನೀವು ಪ್ರಯತ್ನಿಸುವ ಮೊದಲು ಈ ವಿಷಯ ತಿಳಿದುಕೊಳ್ಳಿ
ಐಸ್ ವಾಟರ್ ಬಾತ್
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Feb 12, 2023 | 2:25 PM

ಸೆಲೆಬ್ರಿಟಿಗಳು ತಣ್ಣನೆಯ ನೀರಿನಲ್ಲಿ ಧುಮುಕುವುದು ಅಥವಾ ಐಸ್​​ ಕ್ಯೂಬ್​​​ಗಳ ಟಬ್​​​​ನಲ್ಲಿ ಸ್ನಾನ ಮಾಡುವುದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಇದು ಉತ್ತಮವೇ ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ. ತಜ್ಞರ ಪ್ರಕಾರ ಐಸ್​​ ಬಾತ್​​ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಆರೋಗ್ಯವಂತ ಜನರಿಗೆ ಇದು ಸುರಕ್ಷಿತವಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಆದರೆ ಹೃದಯದ ತೊಂದರೆ ಇರುವವರಿಗೆ ಇದು ಅಪಾಯಕಾರಿಯಾಗಬಹುದು, ಕೆಲವೊಮ್ಮೆ ಹೃದಯ ಬಡಿತಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಆದ್ದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಈ ರೀತಿಯ ಪ್ರಯತ್ನಗಳನ್ನು ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದು ತಜ್ಞರು ಎಚ್ಚರಿಸುತ್ತಾರೆ.

ಐಸ್​​ ಬಾತ್​​​​ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ದೇಹವು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ, ಜೊತೆಗೆ ತೂಕವನ್ನು ಕಳೆದುಕೊಳ್ಳಲು ತಣ್ಣೀರಿನ ಇಮ್ಮರ್ಶನ್ ಪರಿಣಾಮಕಾರಿ ಮಾರ್ಗವಾಗಿದೆಯೇ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಕೇವಲ 2 ನಿಮಿಷಗಳಲ್ಲಿ ಚಾಕೊಲೇಟ್ ಮಗ್ ಕೇಕ್ ತಯಾರಿಸಿ

ಇತ್ತೀಚೆಗೆ ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಐಸ್​​​ ಕ್ಯೂಬ್​​​ಗಳಿಂದ ತುಂಬಿಸಲಾದ ಬಾತ್​​​ ಟಬ್​​ನಲ್ಲಿ ಕೊಹ್ಲಿಯನ್ನು ಕಾಣಬಹುದು. ಇದು ನನ್ನ ದಿನ ಪೂರ್ತಿಯ ವರ್ಕ್​ಔಟ್​​​ ನಂತರದ ನೋವನ್ನು ಶಮನಗೊಳಿಸಲು ಸಹಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ನೀವು ಈ ರೀತಿ ಪ್ರಯತ್ನಿಸುವ ಮುನ್ನ ನಿಮ್ಮ ಹತ್ತಿರದ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುವುದು ಅಗತ್ಯ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:24 pm, Sun, 12 February 23