- Kannada News Photo gallery This year, prominent celebrities revealed their health issues kannada health news
Year Ender 2022: ಈ ವರ್ಷ, ಆರೋಗ್ಯ ಸಮಸ್ಯೆಗಳನ್ನು ಬಹಿರಂಗಪಡಿಸಿದ ಪ್ರಮುಖ ಸೆಲೆಬ್ರಿಟಿಗಳು
ಈ ವರ್ಷ, ಸಿನಿಮಾ ಕ್ಷೇತ್ರದ ಹಲವಾರು ತಾರೆಯರು ತಮ್ಮ ಆರೋಗ್ಯ ಸಮಸ್ಯೆಯ ಪರಿಸ್ಥಿತಿಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
Updated on:Dec 18, 2022 | 1:08 PM

ಈ ವರ್ಷ, ಸಿನಿಮಾ ಕ್ಷೇತ್ರದ ಹಲವಾರು ತಾರೆಯರು ತಮ್ಮ ಆರೋಗ್ಯ ಸಮಸ್ಯೆಯ ಪರಿಸ್ಥಿತಿಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದರಿಂದಾಗಿ ಪ್ರಪಂಚದಾದ್ಯಂತ ಇರುವ ಆದರೆ ಬಹುಪಾಲು ಜನರಿಗೆ ತಿಳಿದಿಲ್ಲದ ಹಲವಾರು ಅಪರೂಪದ ಕಾಯಿಲೆಗಳ ಬಗ್ಗೆ ಅವರು ಜಾಗೃತಿ ಮೂಡಿಸುತ್ತಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಈ ವರ್ಷ ತಮ್ಮ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟ ವರುಣ್ ಧವನ್ ಇತ್ತೀಚೆಗೆ ವೆಸ್ಟಿಬುಲರ್ ಹೈಪೋಫಂಕ್ಷನ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದು ಶ್ರವಣ ಸಮಸ್ಯೆಗಳನ್ನು ಉಂಟುಮಾಡುವ ಆರೋಗ್ಯದ ಸಮಸ್ಯೆಯಾಗಿದೆ. ಕಿವಿಯ ಒಳಗಿನ ಭಾಗವು ಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ಮೆದುಳಿಗೆ ಸಂದೇಶಗಳನ್ನು ಕಳಿಸುವ ನರಗಳಿಗೆ ಅಡ್ಡಿಪಡಿಸುತ್ತದೆ ಎಂದು ಧವನ್ ಹೇಳಿಕೊಂಡಿದ್ದಾರೆ.

ಅಕ್ಟೋಬರ್‌ನಲ್ಲಿ, ಸಮಂತಾ ರುತ್ ಪ್ರಭು ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಅಪರೂಪದ ಸ್ವಯಂ ನಿರೋಧಕ ಸ್ಥಿತಿಯಾದ ಮೈಯೋಸಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದರು. ಮೈಯೋಸಿಟಿಸ್ ಅಪರೂಪದ ಸ್ವಯಂ ನಿರೋಧಕ ಸ್ಥಿತಿಯಾಗಿದ್ದು ಅದು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ದೇಹದ ಕೆಲವು ಭಾಗಗಳಲ್ಲಿ ನೋವು ಮತ್ತು ತುಂಬಾ ದಣಿದಂತೆ ಮಾಡುತ್ತದೆ ಎಂದು ಹೇಳಿಕೊಂಡಿದ್ದಾರೆ.

ಫಾತಿಮಾ ಸನಾ ಶೇಖ್ ಬಾಲಿವುಡ್ ಚೊಚ್ಚಲ ಚಿತ್ರ ದಂಗಲ್ ನಂತರ ಮೂರ್ಛೆ ರೋಗದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಹೊರ ಬರಲು ಔಷಧಿ ಮತ್ತು ವ್ಯಾಯಾಮಗಳನ್ನು ರೂಢಿಸಿಕೊಂಡಿದ್ದೀನಿ ಎಂದು ಸ್ವತಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಿತಿ ಟೇಲರ್ ಇತ್ತೀಚೆಗೆ ಡ್ಯಾನ್ಸ್ ರಿಯಾಲಿಟಿ ಶೋ, ಜಲಕ್ ದಿಖ್ಲಾ ಜಾ ಸೀಸನ್ 10 ನಲ್ಲಿ ತನ್ನ ಡ್ಯಾನ್ಸ್ ಪ್ರದರ್ಶನದ ಸಮಯದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಬಾಲ್ಯದಲ್ಲಿದ್ದಾಗ, ತನ್ನ ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿದ್ದರಿಂದ ಮನೆಯಲ್ಲಿ ಡ್ಯಾನ್ಸ್ ಮಾಡಲು ಅನುಮತಿ ಇರಲಿಲ್ಲ ಎಂದು ನಿತಿ ಹೇಳಿಕೊಂಡಿದ್ದಾರೆ.

ಯಾಮಿ ಗೌತಮ್ ಕೆರಟೋಸಿಸ್ ಪಿಲಾರಿಸ್ ಎಂಬ ಅಪರೂಪದ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಸ್ಥಿತಿಯು ಚರ್ಮದ ಮೇಲೆ ಒರಟು ತೇಪೆಗಳು ಮತ್ತು ಸಣ್ಣ ಮೊಡವೆ ತರಹದ ಉಬ್ಬುಗಳನ್ನು ಉಂಟುಮಾಡುತ್ತದೆ. ನಟಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಸಿರಿಯಲ್ ಹಾಗೂ ಟಿವಿ ನಟಿ ನಿಮೃತ್ ಕೌರ್ ಅಹುಲ್ವಾಲಿಯಾ ಇತ್ತೀಚೆಗೆ ತಮ್ಮ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಬಿಗ್ ಬಾಸ್ ಎಪಿಸೋಡ್ ಒಂದರಲ್ಲಿ ಜೊತೆಗಿನ ಸ್ಪರ್ಧಿಯೊಂದಿಗಿನ ಸಂಭಾಷಣೆಯಲ್ಲಿ, ನಿಮೃತ್ ಮಾನಸಿಕ ಅಸ್ವಸ್ಥತೆಯ ಅಂದರೆ ಆತಂಕ ಮತ್ತು ಖಿನ್ನತೆಯಿಂದ ಸಾಕಷ್ಟು ಸಮಯದಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
Published On - 1:06 pm, Sun, 18 December 22




