Art Therapy: ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುವ ಆರ್ಟ್ ಥೆರಪಿ

|

Updated on: Jul 18, 2023 | 6:41 AM

ಆರ್ಟ್ ಥೆರಪಿಯ ಮೂಲಭೂತ ಉದ್ದೇಶವು ಕ್ಯಾನ್ಸರ್ ಅಥವಾ ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಅನುಭವಿಸುವ ರೋಗಲಕ್ಷಣಗಳನ್ನು ಗುಣಪಡಿಸಿ, ಮಾನಸಿಕವಾಗಿ ಆರೋಗ್ಯವನ್ನು ಕಾಪಾಡುವುದು.

Art Therapy: ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುವ ಆರ್ಟ್ ಥೆರಪಿ
Art therapy
Follow us on

ಇತ್ತೀಚಿನ ವರ್ಷಗಳಲ್ಲಿ, ವಿವಿಧ ಆರೋಗ್ಯ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ಆರ್ಟ್ ಥೆರಪಿಯ ಸಾಕಷ್ಟು ಬಳಕೆಯಲ್ಲಿದೆ. ಈ ಆರ್ಟ್ ಥೆರಪಿಯ ನೋವನ್ನು ನಿವಾರಿಸುತ್ತದೆ, ನಿದ್ರೆಯ ಗುಣಮಟ್ಟ, ವಿಶ್ರಾಂತಿ ಮತ್ತು ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಇದಲ್ಲದೆ, ಇದು ಕ್ಯಾನ್ಸರ್, ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಅನಾರೋಗ್ಯದ ವ್ಯಕ್ತಿಗಳಿಗೆ ಮಾನಸಿಕ ಬೆಂಬಲವನ್ನು ನೀಡುತ್ತದೆ. ಕಲಾ ಚಿಕಿತ್ಸೆಯು ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಗಾಢವಾಗಿ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರಾದ ಡಾ ರಾಜೀವ್ ಕೋವಿಲ್ ವಿವರಿಸುತ್ತಾರೆ.

ಆರ್ಟ್ ಥೆರಪಿ ಎನ್ನುವುದು ಒಂದು ಚಿಕಿತ್ಸಕ ಅಭ್ಯಾಸವಾಗಿದ್ದು ಅದು ಸೃಜನಾತ್ಮಕ ಪ್ರಕ್ರಿಯೆಗಳು ಮತ್ತು ಕಲೆ-ತಯಾರಿಕೆಯ ಶಕ್ತಿಯನ್ನು ಗುಣಪಡಿಸುವುದು ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. “ಮನೋವಿಜ್ಞಾನ ಮತ್ತು ಕಲೆಯನ್ನು ಒಟ್ಟುಗೂಡಿಸಿ, ಈ ವಿಧಾನವು ಎಲ್ಲಾ ವಯಸ್ಸಿನ ವ್ಯಕ್ತಿಗಳಲ್ಲಿ ಭಾವನಾತ್ಮಕ, ಮಾನಸಿಕ ಮತ್ತು ನಡವಳಿಕೆಯ ಸವಾಲುಗಳನ್ನು ಪರಿಹರಿಸುತ್ತದೆ. ಚಿತ್ರಕಲೆ , ಶಿಲ್ಪಕಲೆ ಅಥವಾ ಕೊಲಾಜ್ ತಯಾರಿಕೆಯಂತಹ ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕವಾಗಿ ಸದೃಡರಾಗುತ್ತಾರೆ ಎಂದು ಡಾ.ಕೋವಿಲ್ ಹೇಳುತ್ತಾರೆ.

ಇದನ್ನೂ ಓದಿ: ಟವೆಲ್​​​ನಿಂದ ಮುಖ ಒರೆಸುವುದು ಚರ್ಮಕ್ಕೆ ಹಾನಿಯುಂಟು ಮಾಡಬಹುದು

ಮಾನಸಿಕ ಆರೋಗ್ಯ ಪರಿಸ್ಥಿತಿಗಳು ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಕಲಾ ಚಿಕಿತ್ಸೆ:

ಆರ್ಟ್ ಥೆರಪಿಯು ಮಾನಸಿಕ ಅಥವಾ ಭಾವನಾತ್ಮಕ ಆರೋಗ್ಯದ ಸವಾಲುಗಳನ್ನು ಎದುರಿಸುತ್ತಿರುವ ವ್ಯಕ್ತಿಗಳನ್ನು ಗುಣಪಡಿಸಲು ಅಮೂಲ್ಯವಾದ ಸಾಧನವಾಗಿದೆ. ಇದು ದೈಹಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಸುಧಾರಿಸಲು ಸಮಗ್ರ ವಿಧಾನವನ್ನು ನೀಡುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಹಲವಾರು ಸಮಗ್ರ ಮಾನಸಿಕ ಆರೋಗ್ಯ ಸೇವೆಗಳು ಖಿನ್ನತೆ ಮತ್ತು ಆತಂಕವನ್ನು ಅನುಭವಿಸುತ್ತಿರುವ ವ್ಯಕ್ತಿಗಳಿಗೆ ತಮ್ಮ ಚಿಕಿತ್ಸಾ ಯೋಜನೆಗಳಲ್ಲಿ ಕಲಾ ಚಿಕಿತ್ಸೆಯನ್ನು ನೀಡುತ್ತಿವೆ. ಮಾರ್ಗದರ್ಶಿ ಕಲಾತ್ಮಕ ಚಟುವಟಿಕೆಗಳ ಮೂಲಕ, ರೋಗಿಗಳು ತಮ್ಮ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ಸೃಜನಾತ್ಮಕವಾಗಿ ವ್ಯಕ್ತಪಡಿಸಲು ಪ್ರೋತ್ಸಾಹಿಸಲಾಗುತ್ತದೆ. ಈ ವಿಧಾನವು ಧನಾತ್ಮಕ ಫಲಿತಾಂಶಗಳನ್ನು ನೀಡಿದ್ದು, ರೋಗಿಗಳು ಖಿನ್ನತೆಯ ರೋಗಲಕ್ಷಣಗಳಲ್ಲಿ ಗಮನಾರ್ಹವಾದ ಕಡಿತ ಮತ್ತು ಯೋಗಕ್ಷೇಮದಲ್ಲಿ ಒಟ್ಟಾರೆ ಸುಧಾರಣೆಯನ್ನು ಕಂಡಿದೆ ಎಂದು ವರದಿಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: