Kannada News Health Ashwagandha Benefits: Do you know the benefits of consuming Ashwagandha? Here is the information
Ashwagandha Benefits: ಅಶ್ವಗಂಧ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ
ಆಯುರ್ವೇದದಲ್ಲಿ ಅಶ್ವಗಂಧವನ್ನು ಪ್ರಮುಖ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಅಶ್ವಗಂಧ ಹಳದಿ ಹೂವುಗಳನ್ನು ಹೊಂದಿರುವ ಸಣ್ಣ ಸಸ್ಯದಿಂದ ಪಡೆಯಲಾಗಿದೆ.
ಅಶ್ವಗಂಧ (ಸಂಗ್ರಹ ಚಿತ್ರ)
Follow us on
ಆಯುರ್ವೇದದಲ್ಲಿ ಅಶ್ವಗಂಧಕ್ಕೆ ಅದರದ್ದೇ ಪ್ರಾಮುಖ್ಯತೆಯಿದೆ. ಇದು ಅನೇಕ ಆರೋಗ್ಯ (Health) ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿಯೇ ಆಯುರ್ವೇದದಲ್ಲಿ ಅಶ್ವಗಂಧ (Ashwagandha) ವನ್ನು ಪ್ರಮುಖ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಅಶ್ವಗಂಧ ಹಳದಿ ಹೂವುಗಳನ್ನು ಹೊಂದಿರುವ ಸಣ್ಣ ಸಸ್ಯದಿಂದ ಪಡೆಯಲಾಗಿದೆ. ಈ ಸಸ್ಯವು ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಸಸ್ಯದ ಬೇರು, ಎಲೆಗಳ ಸಾರ ಮತ್ತು ಪುಡಿಯನ್ನು ಬಳಸಲಾಗುತ್ತದೆ. ಅಶ್ವಗಂಧ ಎಂಬ ಹೆಸರು ಸಂಸ್ಕೃತ ಪದದಿಂದ ಬಂದಿದೆ. ಅಶ್ವಗಂಧವನ್ನು ಪುಡಿ ರೂಪದಲ್ಲಿ ಅಥವಾ ಮಾತ್ರೆ ರೂಪದಲ್ಲಿ ತೆಗೆದುಕೊಳ್ಳಬಹುದು. ಆದಾಗ್ಯೂ, ಇದನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು ಉತ್ತಮ. ಏಕೆಂದರೆ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದು ವ್ಯಕ್ತಿಯ ದೇಹವನ್ನು ಅವಲಂಬಿಸಿರುತ್ತದೆ.
ಅಶ್ವಗಂಧದ ಪ್ರಯೋಜನಗಳು:
ಒತ್ತಡವನ್ನು ಕಡಿಮೆ ಮಾಡುತ್ತದೆ: ಅಶ್ವಗಂಧವನ್ನು ಅಡಾಪ್ಟೋಜೆನ್ ಎಂದು ಪರಿಗಣಿಸಲಾಗುತ್ತದೆ. ಇದು ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮನುಷ್ಯನಲ್ಲಿ ಉಂಟಾಗುವ ಆತಂಕವನ್ನು ಕಡಿಮೆ ಮಾಡುತ್ತದೆ. ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವವರು ಅಶ್ವಗಂಧ ಸೇವನೆಯಿಂದ ಸಮಸ್ಯೆ ಮುಕ್ತರಾಗಬಹುದು.
ಸಕ್ಕರೆ ಮಟ್ಟ ನಿಯಂತ್ರಣ: ಅಶ್ವಗಂಧ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅಶ್ವಗಂಧವು ಇನ್ಸುಲಿನ್ ಸ್ರವಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಒಳ್ಳೆಯ ನಿದ್ರೆ: ಅಶ್ವಗಂಧವು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಅಶ್ವಗಂಧ ಸೇವನೆಯಿಂದ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆಳವಾದ ಮತ್ತು ಶಾಂತಿಯುತ ನಿದ್ರೆಗೆ ಸಹಕಾರಿಯಾಗಿದೆ. ಮಾನಸಿಕ ನೆಮ್ಮದಿ ನೀಡುತ್ತದೆ.
ಊತ ತಡೆಗಟ್ಟುವಿಕೆ: ನೀವು ಉರಿಯೂತದ ಸಮಸ್ಯೆಯಿಂದ ಬಳಲುತ್ತಿದ್ದರೆ ಅಶ್ವಗಂಧವು ನಿಮಗೆ ಉತ್ತಮ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಲೈಂಗಿಕ ಸಾಮರ್ಥ್ಯ: ಅಶ್ವಗಂಧವನ್ನು ಆಯುರ್ವೇದ ತಜ್ಞರು ಕಡಿಮೆ ಲೈಂಗಿಕ ಕಾರ್ಯಕ್ಷಮತೆ ಹೊಂದಿರುವವರಿಗೆ ನೀಡಲಾಗುತ್ತದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)