ಊಟ ಆದ ತಕ್ಷಣ ಮಲಗುವುದು ನಿಮ್ಮ ವಾಡಿಕೆಯಾಗಿದ್ದರೆ ಇಂದೇ ಬಿಟ್ಟುಬಿಡಿ, ನೀವು ಲೈಟ್ ಆಗಿ ತಿನ್ನಿ, ಅಥವಾ ಹೊಟ್ಟೆ ತುಂಬಾ ತಿನ್ನಿ ಅದು ನಿಮ್ಮ ಇಚ್ಛೆಗೆ ಬಿಟ್ಟಿದ್ದು, ಆದರೆ ಊಟದ ಬಳಿಕ ಕನಿಷ್ಠ 100 ಹೆಜ್ಜೆಗಳು ನಡೆದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ. ಪ್ರತಿ ಊಟದ ನಂತರ, ನೀವು ಕನಿಷ್ಟ 100 ಹೆಜ್ಜೆಗಳನ್ನು ನಡೆಯಬೇಕು. 100 ಹೆಜ್ಜೆ ನಡೆಯುವ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎನ್ನುತ್ತಾರೆ ತಜ್ಞರು. ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಆಯುರ್ವೇದ ತಜ್ಞರು ಹಗಲಿನಲ್ಲಿ ನೀವು ತಿನ್ನುವ ಪ್ರತಿ ಊಟದ ನಂತರ, ನೀವು ಕನಿಷ್ಟ 100 ಹೆಜ್ಜೆಗಳನ್ನು ನಡೆಯಬೇಕು.
ಏಕೆಂದರೆ ಇದನ್ನು ಮಾಡುವುದರಿಂದ ನಿಮ್ಮ ದೇಹವು ಆರೋಗ್ಯಕರವಾಗಿರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಸಹ ಉತ್ತಮವಾಗಿರುತ್ತದೆ.
ಊಟದ ನಂತರ 100 ಹೆಜ್ಜೆ ನಡೆಯುವುದರಿಂದಾಗುವ ಆರೋಗ್ಯ ಪ್ರಯೋಜನಗಳು
1. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ
2. ಕ್ಯಾಲೋರಿಗಳನ್ನು ಸುಡುವಲ್ಲಿ ಸಹಕಾರಿ
3. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸುತ್ತದೆ
4. ವಾಕಿಂಗ್ ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಮತ್ತಷ್ಟು ಓದಿ:Anjeer Benefits: ನೀವು ತೂಕ ಇಳಿಸಿಕೊಳ್ಳೋಕೆ ಟ್ರೈ ಮಾಡ್ತಿದ್ದೀರಾ ಹಾಗಾದರೆ ಈ ಹಣ್ಣು ನಿಮಗೆ ಸಹಾಯ ಮಾಡಬಹುದು
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ
ಜರ್ನಲ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಸಂಶೋಧಕರು ಯಾವುದೇ ಊಟದ ನಂತರ ಸ್ವಲ್ಪ ವಾಕ್ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಕಂಡುಹಿಡಿದಿದ್ದಾರೆ. ಇದು ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಪ್ರತಿ ಊಟದ ನಂತರ 100 ಹೆಜ್ಜೆ ನಡೆಯಲು ಆಯುರ್ವೇದ ಸಲಹೆ ನೀಡಿದೆ. ತಿಂದ ತಕ್ಷಣ ನಿದ್ದೆ ಮಾಡದಿರುವಂತಹ ಇತರ ಕೆಲವು ಅಭ್ಯಾಸಗಳನ್ನು ಸರಿಯಾಗಿ ಅನುಸರಿಸುವಂತೆಯೂ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವಾಸ್ತವವಾಗಿ, ತಿಂದ ತಕ್ಷಣ ಮಲಗುವುದು ದೇಹದಲ್ಲಿ ಕಫ ಮತ್ತು ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ದೇಹದ ಚಯಾಪಚಯವನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ನೀವು ಸೇವಿಸುವ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯೂ ದುರ್ಬಲಗೊಳ್ಳುತ್ತದೆ ಎಂದು ಡಾ.ಶ್ರೀವಾಸ್ತವ ಹೇಳಿದರು. ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವುದರಿಂದ ಬೊಜ್ಜು ಹೆಚ್ಚಾಗಬಹುದು. ಊಟದ ನಂತರ ನಡೆಯುವುದು ಆರೋಗ್ಯಕ್ಕೆ ಉತ್ತಮ. ಆದಾಗ್ಯೂ, ಆಹಾರವನ್ನು ಸೇವಿಸಿದ ನಂತರ ವೇಗವಾಗಿ ನಡೆಯಬೇಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ