ಬಾಯಿಯಿಂದ ದುರ್ವಾಸನೆ ಬಂದಾಗ ಎಂಥವರಿಗಾದರೂ ಮುಜುಗರವೆನಿಸುವುದು ಸಾಮಾನ್ಯ. ನೀವು ತಿನ್ನುವ ಆಹಾರಗಳು ಬಾಯಿ, ಹಲ್ಲು ಅಥವಾ ಒಸಡುಗಳ ಮಧ್ಯೆ ಸಿಲುಕಿಕೊಂಡಾಗ ಆಹಾರ ಅಲ್ಲಿಯೇ ಕೊಳೆತು ಬಾಯಿಯಿಂದ ದುರ್ನಾಥ ಬರುತ್ತದೆ.
ಆಯುರ್ವೇದಲ್ಲಿ ಹೇಳುವುದಾದರೆ ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು, ಪಿತ್ತದೋಷ, ಅಜೀರ್ಣ ಸಮಸ್ಯೆಯಿಂದಾಗಿ ಬಾಯಿಯಿಂದ ವಾಸನೆ ಬರಬಹುದು.
ಹಾಗೆಯೇ ಬೆಳ್ಳುಳ್ಳಿ, ಈರುಳ್ಳಿ, ಮೊಸರು ತಿಂದ ಬಳಿಕ ಬಾಯಿಯನ್ನು ನೀಟಾಗಿ ತೊಳೆಯದೇ ಇದ್ದರೂ ಬಾಯಿಯಿಂದ ವಾಸನೆ ಬರುತ್ತದೆ. ಹಾಗೆಯೇ ಕಾಫಿ, ಟೀ, ಸೋಡಾ, ಶೀತ, ಹಲ್ಲು ಹುಳುಕು, ಮದ್ಯಪಾನ, ಧೂಮಪಾನದಿಂದಾಗಿಯೂ ಬಾಯಿಯಲ್ಲಿ ವಾಸನೆ ಬರುತ್ತದೆ.
ನಿಮ್ಮ ಕರುಳಿನ ಆರೋಗ್ಯ ಕಾಪಾಡಿಕೊಳ್ಳಿ: ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾದದ್ದು, ನಾವು ತಿನ್ನುವ ಆಹಾರಗಳಿಂದಾಗಿ ಹಲವು ಬಗೆಯ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಹಣ್ಣುಗಳು, ತರಕಾರಿಗಳು, ಫೈಬರ್ಯುಕ್ತ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಕರುಳನ್ನು ಶುದ್ಧವಾಗಿಟ್ಟುಕೊಳ್ಳಬಹುದು.
ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಯುತ ಬ್ಯಾಕ್ಟೀರಿಯಾದ ಅಗತ್ಯವಿದೆ, ಹೀಗಾಗಿ ಕರಿದ ಪದಾರ್ಥಗಳು, ಕೆಂಪು ಮಾಂಸ ಹಾಗೂ ಸಂಸ್ಕರಿಸಿದ ಆಹಾರವನ್ನು ಹೆಚ್ಚಾಗಿ ಬಳಸಬೇಡಿ.
ವಾತವನ್ನು ನಿಯಂತ್ರಣದಲ್ಲಿಡಿ: ನಿಮ್ಮ ದೇಹದಲ್ಲಿ ವಾತವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಸಮತೋಲಿತ ವಾತವು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಹಾಗೆಯೇ ವಾತದ ಅಸಮತೋಲನವು ವೀಕ್ನೆಸ್, ಸುಸ್ತು, ದೇಹದಲ್ಲಿ ಸುಕ್ಕು ಗಟ್ಟುವುದು, ಹೀಗಾಗಿ ದೇಹವನ್ನು ಸದಾ ಹೈಡ್ರೇಟ್ ಆಗಿಟ್ಟುಕೊಳ್ಳಬೇಕು. ಮಜ್ಜಿಗೆ, ಶುಂಠಿ, ಅರಿಶಿನ ಸೇವನೆಯಿಂದ ಬ್ಯಾಲೆನ್ಸ್ ಮಾಡಿಕೊಳ್ಳಬಹುದು. ವಾತಾವರಣ ಬಿಸಿಯಾಗಿರುವಾಗ ತಂಪು ಪಾನೀಯಗಳ ಬಳಕೆ ಮಾಡುವುದನ್ನು ಬಿಡಿ.
ಮಾರ್ನಿಂಗ್ ಎನರ್ಜಿ ಡ್ರಿಂಕ್ಸ್: ನಿತ್ಯ ಅರ್ಧ ಲೋಟ ಕ್ಯಾರೆಟ್ ಜ್ಯೂಸ್, ಅರ್ಧ ಲೋಟ ದಾಳಿಂಬೆ ರಸ, ಅರ್ಧ ಲೋಟ ಬೀಟ್ರೂಟ್ ಜ್ಯೂಸ್, 10 ಬಾದಾಮಿ, 5 ವಾಲ್ನಟ್, 1 ಏಲಕ್ಕಿಯನ್ನು ನೆನೆಸಿ ಅದಕ್ಕೆ , 1 ಅರಿಶಿನ ಕೊಂಬು ಅಥವಾ 1 ಚಮಚ ಅರಿಶಿನ ಪುಡಿ, ಇವೆಲ್ಲವೂ ಬೆರೆಸಿ ತಿನ್ನಿ.
ಈ ಸಸ್ಯಗಳ ಎಲೆಗಳನ್ನು ತಿನ್ನಿ: ಕೆಲವು ಸಸ್ಯಗಳ ಎಲೆಗಳು ಬಾಯಿಯ ವಾಸನೆಯನ್ನು ಹೋಗಲಾಡಿಸುತ್ತದೆ. ಪುದೀನಾ ಅಥವಾ ತುಳಸಿ ಎಲೆಯನ್ನು ಬಾಯಿಯಲ್ಲಿ ಇರಿಸಿಕೊಳ್ಳಬಹುದು.
ಪ್ರತಿ ತಿಂಗಳಿಗೊಮ್ಮೆ ಟೂಥ್ ಬ್ರಷ್ ಬದಲಿಸಿ: ನಿಮ್ಮ ಟೂಥ್ ಬ್ರಷ್ನಲ್ಲಿ ಹೆಚ್ಚು ಪ್ರಮಾಣದ ಬ್ಯಾಕ್ಟೀರಿಯಾ ಇರುತ್ತದೆ. ಹೀಗಾಗಿ ಪ್ರತಿ ತಿಂಗಳು ನಿಮ್ಮ ಟೂಥ್ ಬ್ರಷ್ ಬದಲಾಯಿಸಿ. ಪ್ರತಿ ತಿಂಗಳು ಆಗದಿದ್ದರೂ ಎರಡು ತಿಂಗಳಿಗಾದರೂ ಒಮ್ಮೆ ಬ್ರಷ್ ಬದಲಾಯಿಸಿ.
Published On - 3:31 pm, Fri, 1 July 22