Mental Health: ಸದಾ ಸೋಮಾರಿತನ ನಿಮ್ಮನ್ನು ಕಾಡುತ್ತಿದೆಯೇ? ಹೋಗಲಾಡಿಸುವುದು ಹೇಗೆ?

| Updated By: ನಯನಾ ರಾಜೀವ್

Updated on: Jul 01, 2022 | 4:26 PM

ಸೋಮಾರಿತನ ನಿಮ್ಮನ್ನು ಕಾಡುತ್ತಿದೆಯೇ?, ಯಾವ ವಿಷಯದಲ್ಲೂ ಏಕಾಗ್ರತೆ ಬರುತ್ತಿಲ್ಲವೇ, ಸದಾ ಆಯಾಸ ಅಥವಾ ಮಲಗಬೇಕು ಅನಿಸುತ್ತಿದೆಯೇ? ಅದನ್ನು ಹೋಗಲಾಡಿಸಲು ಏನು ಮಾಡಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಸೋಮಾರಿತನ ಎನ್ನುವುದು ನಿಮ್ಮ ಸಂಬಂಧಗಳು, ನಿಮ್ಮ ಕೆಲಸ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ.

Mental Health: ಸದಾ ಸೋಮಾರಿತನ ನಿಮ್ಮನ್ನು ಕಾಡುತ್ತಿದೆಯೇ? ಹೋಗಲಾಡಿಸುವುದು ಹೇಗೆ?
Lazy
Follow us on

ಸೋಮಾರಿತನ ನಿಮ್ಮನ್ನು ಕಾಡುತ್ತಿದೆಯೇ?, ಯಾವ ವಿಷಯದಲ್ಲೂ ಏಕಾಗ್ರತೆ ಬರುತ್ತಿಲ್ಲವೇ, ಸದಾ ಆಯಾಸ ಅಥವಾ ಮಲಗಬೇಕು ಅನಿಸುತ್ತಿದೆಯೇ? ಅದನ್ನು ಹೋಗಲಾಡಿಸಲು ಏನು ಮಾಡಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಸೋಮಾರಿತನ ಎನ್ನುವುದು ನಿಮ್ಮ ಸಂಬಂಧಗಳು, ನಿಮ್ಮ ಕೆಲಸ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಹಾಗೆಯೇ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇವೆಲ್ಲಕ್ಕೂ ನಿಮ್ಮ ಮನಸ್ಥಿತಿಯೇ ನೇರ ಕಾರಣವಾಗಿರುತ್ತದೆ. ಪ್ರಸ್ತುತ ದಿನಚರಿಯಿಂದ ಬೇಸರ: ನಿಮ್ಮ ಪ್ರಸ್ತುತ ದಿನಚರಿಯಿಂದ ಬೇಸರಗೊಂಡಿದ್ದೀರಾ, ದಿನ ಅದೇ ಕೆಲಸ, ಅದೇ ಒತ್ತಡ, ಅದೇ ಆಹಾರ ಇದೆಲ್ಲದರಿಂದ ಬೇಸರ ಉಂಟಾದಾಗ ಆಲಸ್ಯ ಅಥವಾ ಸೋಮಾರಿತನ ನಿಮ್ಮನ್ನು ಕಾಡುತ್ತದೆ.

ನಿಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳಿ, ದಿನಪೂರ್ತಿ ನಿಮ್ಮನ್ನು ಎಂಗೇಜ್ ಆಗಿರುವಂತೆ ನೋಡಿಕೊಳ್ಳಿ, ಬದಲಾವಣೆ ಚಿಕ್ಕದಾಗಿರಬಹುದು ಆದರೆ ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಆಯ್ಕೆಗಳು ಹೆಚ್ಚು: ನಿಮ್ಮ ಕಣ್ಣಮುಂದೆ ಆಯ್ಕೆಗಳು ಹೆಚ್ಚಿರುವಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲವಿರುವಾಗ ಆಲಸ್ಯ ಉಂಟಾಗುತ್ತದೆ. ಹೀಗಾಗಿ ನಿಮ್ಮ ಮನಸ್ಸಿಗೆ ಇಷ್ಟವಾದ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಲವನ್ನು ಲಿಸ್ಟ್​ ಲಿಸ್ಟ್ ಮಾಡಿ ಅದರಲ್ಲಿ ಯಾವುದು ನಿಮಗೆ ಪ್ರಮುಖವಾಗಿದ್ದು ಎಂಬುದನ್ನು ನಿರ್ಧರಿಸಿ.

ಒಂದೇ ಸಮಯದಲ್ಲಿ ಎಲ್ಲಾ ಕೆಲಸಗಳು ಬೇಡ: ಒಂದೇ ಸಮಯದಲ್ಲಿ ಎಲ್ಲಾ ಕೆಲಸಗಳನ್ನು ಮಾಡಲು ಹೋಗುವುದು ಬೇಡ, ಮೊದಲು ಸುಲಭವಾದ ಕೆಲಸವನ್ನು ಆಯ್ಕೆ ಮಾಡಿಕೊಳ್ಳಿ, ಒತ್ತಡದಿಂದ ದೂರವಿರಿ, ನಿಧಾನವಾಗಿ ಒಂದೊಂದೇ ಕೆಲಸವನ್ನು ಮಾಡಿ ಪೂರೈಸಿ. ಆದಾಗ ಮಾತ್ರ ಒಂದೇ ಕೆಲಸದಲ್ಲಿ ನೀವು ಏಕಾಗ್ರತೆವಹಿಸಲು ಸಾಧ್ಯ.

ನಿದ್ರಾಹೀನತೆ: ನಿಮಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂದಾದರೆ, ನೀವು ಲೇಜಿಯಾಗುತ್ತೀರಿ, ನಾವು ಆಯಾಸಗೊಂಡಾಗ ಮೆದುಳು ನಿಧಾನವಾಗಿ ಕೆಲಸ ಮಾಡುತ್ತದೆ. ನಿತ್ಯ 7-8 ಗಂಟೆಗಳ ಕಾಲ ನಿದ್ರೆಯ ಅಗತ್ಯವಿರುತ್ತದೆ. ನಿತ್ಯ ಒಂದೇ ಸಮಯದಲ್ಲಿ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.ಇದರಿಂದ ನಿಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ.

ನಿಮಗೆ ನೀವು ಸವಾಲು ಹಾಕಿಕೊಳ್ಳಿ: ನಿಮಗೆ ನೀವು ಸವಾಲು ಹಾಕಿಕೊಳ್ಳದಿದ್ದಾಗ, ಹೊಸ ವಿಚಾರಗಳು ನಿಮ್ಮ ಜೀವನದಲ್ಲಿ ನಡೆಯದೇ ಇದ್ದಾಗ ನೀವು ಲೇಜಿಯಾಗುತ್ತೀರಿ, ಮೊದಲು ನಿಮಗೆ ನೀವು ಸವಾಲು ಹಾಕಿಕೊಳ್ಳಿ, ಉತ್ತಮ ಗುರಿಯನ್ನು ಹೊಂದಿ. ಮೋಟಿವೇಟೆಡ್ ಆಗಿರಿ, ಸದಾ ಎಂಗೇಜ್ಡ್​ ಆಗಿರಿ.

ಸಾಕಷ್ಟು ಸಮಯದಿಂದ ಸೋಮಾರಿತನ ನಿಮ್ಮನ್ನು ಕಾಡುತ್ತಿದ್ದರೆ  ನೀವು ವೈದ್ಯರನ್ನು ಕೂಡಲೇ ಸಂಪರ್ಕಿಸಿ.