AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bald Men Style Tips : ತಲೆ ಬೋಳು ಆಗಿದೆಯೇ, ಈ ಸಲಹೆ ಪಾಲಿಸಿ ಅಂದ ಹೆಚ್ಚಿಸಿಕೊಳ್ಳಿ

ಇತ್ತೀಚೆಗಿನ ದಿನಗಳಲ್ಲಿ ಯುವಕರಲ್ಲಿ ಕಾಡುವ ಸಮಸ್ಯೆಯೆಂದರೆ ಬೋಳು ತಲೆ. ಇದರಿಂದ ಪುರುಷರು ಹೆಚ್ಚು ಕಿರಿಕಿರಿ ಹಾಗೂ ಮುಜುಗರಕ್ಕೆ ಒಳಗಾಗುತ್ತಾರೆ. ಇಂದಿನ ಜೀವನ ಶೈಲಿ ಹಾಗೂ ಅನುವಂಶಿಕತೆಯಿಂದ ತಲೆ ಕೂದಲು ಉದುರಿ ತಲೆ ಬೋಳಾಗುತ್ತಿದೆ. ಇದರಿಂದ ಹೆಚ್ಚಿನ ಯುವಕರ ಸೌಂದರ್ಯವೇ ಮಾಸುತ್ತಿದೆ. ಒಂದು ವೇಳೆ ನಿಮಗೇನಾದ್ರೂ ಬೋಳು ತಲೆ ಸಮಸ್ಯೆಯು ಕಾಡುತ್ತಿದ್ದರೆ ಕೆಲವೊಂದು ಬದಲಾವಣೆಯನ್ನು ಮಾಡಿಕೊಂಡು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಸೂಕ್ತ.

Bald Men Style Tips : ತಲೆ ಬೋಳು ಆಗಿದೆಯೇ, ಈ ಸಲಹೆ ಪಾಲಿಸಿ ಅಂದ ಹೆಚ್ಚಿಸಿಕೊಳ್ಳಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Oct 08, 2024 | 2:44 PM

Share

ಮುಖದ ಅಂದವನ್ನು ಹೆಚ್ಚಿಸುವುದೇ ಈ ಕೂದಲು. ಆದರೆ ಯುವಕರಲ್ಲಿ ಬೋಳು ತಲೆ ಸಮಸ್ಯೆಯೂ ಹೆಚ್ಚಾಗುತ್ತಿದೆ. ಇಂದಿನ ಜೀವನ ಶೈಲಿಯಿಂದಾಗಿ ಕೂದಲು ಉದುರುವುದು ಬಕ್ಕತಲೆಯ ಸಮಸ್ಯೆಯೂ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ತಮ್ಮ ಸೌಂದರ್ಯವನ್ನು ಕಡಿಮೆ ಮಾಡುವ ಬೋಳು ತಲೆ ಸಮಸ್ಯೆಯಿಂದ ಟೆನ್ಶನ್ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಈ ಕೆಲವು ಸಲಹೆಗಳನ್ನು ಪಾಲಿಸಿದ್ರೆ ಬೋಳು ತಲೆಯಿದ್ದರೂ ಸುಂದರವಾಗಿ ಕಾಣಿಸಿಕೊಳ್ಳಬಹುದು.

* ಬೋಳು ತಲೆಯನ್ನು ಸಂಪೂರ್ಣವಾಗಿ ಶೇವ್ ಮಾಡಿಕೊಳ್ಳಿ : ತಲೆಯಲ್ಲಿ ಅಲ್ಲಲ್ಲಿ ಕೂದಲು ಇದ್ದರೆ ನೋಡುವುದಕ್ಕೆ ಚಂದ ಕಾಣುವುದಿಲ್ಲ. ಹೀಗಾಗಿ ಅರ್ಧ ಅರ್ಧ ಕೂದಲಿಗಿಂತ ಅದನ್ನು ಪೂರ್ತಿಯಾಗಿ ಶೇವ್ ಮಾಡುವುದು ಒಳ್ಳೆಯದು. ಒಳ್ಳೆಯ ಶೇವಿಂಗ್ ಕಿಟ್ ಬಳಸಿ ಒಂದು ಕೂದಲು ಇರದಂತೆ ಶೇವ್ ಮಾಡಿಕೊಳ್ಳಬೇಕು. ಅದಲ್ಲದೇ, ಕೂದಲಿಲ್ಲದ ತಲೆ ಕೂಡ ಹೊಳೆಯುವಂತೆ ನೋಡಿಕೊಳ್ಳಬೇಕು. ಇದು ಈಗಿನ ಫ್ಯಾಷನ್ ಆಗಿದ್ದು, ತಲೆ ಕೂದಲನ್ನು ಸಂಪೂರ್ಣವಾಗಿ ಶೇವ್ ಮಾಡಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬಹುದು.

* ದಿನನಿತ್ಯ ಶೇವ್ ಮಾಡುವ ಅಭ್ಯಾಸವಿರಲಿ : ಬೋಳು ತಲೆ ಸಮಸ್ಯೆಯಿದ್ದವರು ಸಂಪೂರ್ಣವಾಗಿ ತಲೆಯ ಕೂದಲನ್ನು ಶೇವ್ ಮಾಡಿದರೆ ಸಾಕಾಗುವುದಿಲ್ಲ. ದಿನನಿತ್ಯ ಆ ಬಗ್ಗೆ ಕಾಳಜಿ ವಹಿಸಬೇಕು. ಒಂದು ದಿನ ಹಾಗೆಯೇ ಬಿಟ್ಟರೆ ತಲೆಯಲ್ಲಿ ಚಿಕ್ಕ ಚಿಕ್ಕ ಕೂದಲು ಬೆಳೆದು ನಿಮ್ಮ ಮುಖದ ಅಂದವನ್ನು ಹಾಳು ಮಾಡುತ್ತದೆ. ಗಾಯವಾಗದ ರೀತಿಯಲ್ಲಿ ಶೇವ್ ಮಾಡಲು ಮರೆಯದಿರಿ. ಮೊದ ಮೊದಲಿಗೆ ಇದು ಕಿರಿಕಿರಿ ಅನಿಸಿದರೂ ದಿನ ಕಳೆದಂತೆ ಅಭ್ಯಾಸವಾಗುತ್ತದೆ

* ತಲೆಬುರುಡೆಯಲ್ಲಿ ತೇವವಾಗಿಟ್ಟುಕೊಳ್ಳಿ : ದಿನಾಲೂ ಶೇವ್ ಮಾಡುತ್ತಿದ್ದರೆ ಸಾಲುವುದಿಲ್ಲ. ಹೆಡ್ ಶೇವಿಂಗ್ ನಿಂದಾಗಿ ತಲೆ ಡ್ರೈ ಆಗುತ್ತದೆ. ಹೀಗಾಗಿ ದಿನ ನಿತ್ಯ ಹೆಡ್ ಲೋಶನ್ ಬಳಸುವ ಮೂಲಕ ತಲೆ ಬುರುಡೆಯು ನೈಸ್ ಆಗುತ್ತದೆ. ತಲೆ ಬುರುಡೆ ಬಿಳಿಯಾಗಿ ಹೊಳೆಯುವುದಲ್ಲದೆ, ಮುಖದ ಕಾಂತಿ ಕೂಡ ಹೆಚ್ಚುತ್ತದೆ.

* ಮುಖದಂತೆ ತಲೆ ಬುರುಡೆಗೂ ಮೇಕಪ್ ಇರಲಿ : ಹುಡುಗರಿಗೂ ಎಲ್ಲರ ಮುಂದೆ ಅಂದವಾಗಿ ಕಾಣಿಸಿಕೊಳ್ಳಬೇಕು ಎನ್ನುವುದಿರುತ್ತದೆ. ಹೀಗಾಗಿ ಹೆಚ್ಚಿನವರು ಮುಖಕ್ಕೆ ಮೇಕಪ್ ಮಾಡಿಕೊಳ್ಳುತ್ತಾರೆ. ಬೋಳು ತಲೆಯಿದ್ದರೆ ತಲೆ ಶೇವ್ ಮಾಡಿಕೊಂಡಿದ್ದರೆ ತಲೆ ಬುರುಡೆಗೂ ಮೇಕಪ್ ಮಾಡಿಕೊಂಡರೆ ಅಂದ ಹೆಚ್ಚಿಸಿಕೊಳ್ಳಿ.

* ತಲೆಗೆ ಮಸಾಜ್, ಸ್ಕ್ರಬ್ ಮಾಡಿಕೊಳ್ಳಿ : ಮುಖಕ್ಕೆ ಹೇಗೆ ಸ್ಕ್ರಬ್ ಹಾಗೂ ಫೇಶಿಯಲ್ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ತಲೆಗೆ ಸ್ಕ್ರಬ್ ಮಾಡಿಕೊಳ್ಳುವುದನ್ನು ಮರೆಯದಿರಿ. ತಲೆಯ ಚರ್ಮವೂ ಸಾಮಾನ್ಯವಾಗಿ ಡೆಡ್ ಸ್ಕಿನ್ ಆಗಿ ಬದಲಾಗುತ್ತದೆ. ಹೀಗಾಗಿ ಡೆಡ್ ಸ್ಕಿನ್ ತೊಡೆದು ಹಾಕಲು ಸ್ಕ್ರಬ್ ಮಾಡಿ ಎಣ್ಣೆಯಿಂದ ಬುರುಡೆ ಮಸಾಜ್ ಮಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Mon, 7 October 24

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!