Banana Benefits: ದಿನ ನಿತ್ಯ ಬಾಳೆಹಣ್ಣು ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಲಾಭಗಳಿವೆಯಾ!?

| Updated By: Digi Tech Desk

Updated on: Jan 15, 2022 | 6:06 AM

Health Benefits of Eating Banana: ಒಂದು ಗ್ಲಾಸ್ ಹಾಲು ಮತ್ತು ಬಾದಾಮಿಯನ್ನು ತಿನ್ನುವುದರಿಂದ ಎಷ್ಟು ಪೊಟಾಷಿಯಂ ಅಂಶವು ದೇಹಕ್ಕೆ ದೊರೆಯುತ್ತದೋ ಅಷ್ಟೊಂದು ಪೊಟಾಷಿಯಂ ಅಂಶವನ್ನು ಒಂದು ಬಾಳೆಹಣ್ಣು ತಿನ್ನುವುದರಿಂದ ನಾವು ಪಡೆಯಬಹುದು.

Banana Benefits: ದಿನ ನಿತ್ಯ ಬಾಳೆಹಣ್ಣು ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಲಾಭಗಳಿವೆಯಾ!?
ಪ್ರಾತಿನಿಧಿಕ ಚಿತ್ರ
Follow us on

ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಏನು ಲಾಭ? ಹಸಿದ ಹೊಟ್ಟೆಗೆ ಬಾಳೆಹಣ್ಣಿನ ಸೇವನೆಯಿಂದಾಗುವ ಪ್ರಯೋಜನಗಳು ಏನೆಲ್ಲಾ ಇವೆ? ಬಾಳೆಹಣ್ಣಿನ ವೈಶಿಷ್ಟ್ಯತೆ ಏನು ಮತ್ತು ಬಾಳೆ ಹಣ್ಣನ್ನು ಯಾವಾಗ, ಹೇಗೆ ತಿನ್ನಬೇಕು ಎಂಬೆಲ್ಲಾ ಪ್ರಶ್ನೆಗಳಿಗೆ ಬಾಳೆಹಣ್ಣು ಸುಲಿದಂತೆ ಸಲೀಸಾದ ಮಾಹಿತಿ ಇಲ್ಲಿ ನೀಡಲಾಗಿದೆ. ಬಾಳೆ ಹಣ್ಣು ನೈಸರ್ಗಿಕವಾಗಿ ಸಿಗುವಂತಹ ಹಣ್ಣು. ಬಾಳೆಹಣ್ಣು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ನಮ್ಮ ರಾಜ್ಯದಲ್ಲಿಯೂ ಹೆಚ್ಚಾಗಿ ಬಾಳೆ ಬೆಳೆಯುತ್ತಾರೆ. ಮಾರುಕಟ್ಟೆಯಲ್ಲಿ ಬೇರೆ ಹಣ್ಣುಗಳಿಗಿಂತ ಸ್ವಲ್ಪ ಕಡಿಮೆ ಬೆಲೆಯಲ್ಲಿ ಸಿಗುವಂತಹ ಬಾಳೆಹಣ್ಣನ್ನು ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಇವೆ.

ಹೆಚ್ಚು ಉಪ್ಪಿನಾಂಶ ಇರುವ ಆಹಾರ ಸೇವನೆಯ ನಂತರ ರಕ್ತದೊತ್ತಡ ಮಟ್ಟವನ್ನು ನಿಯಂತ್ರಣದಲ್ಲಿಡಲು ಪೊಟ್ಯಾಶಿಯಂ ಅಂಶವಿರುವ ಬಾಳೆಹಣ್ಣು (Banana) ಸೇವನೆ ಸಹಾಯಕವಾಗುತ್ತದೆ. ನಿಯಮಿತವಾಗಿ ಬಾಳೆಹಣ್ಣು ಸೇವನೆಯಿಂದ ಕಾಲಾಂತರದಲ್ಲಿ ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ. ಬಾಳೆಹಣ್ಣಿನಲ್ಲಿ ನಾರಿನಂಶ ಹೇರಳವಾಗಿರುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

1. ಬಾಳೆ ಹಣ್ಣನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡಿಕೊಳ್ಳಬಹುದು ಮತ್ತು ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶವೂ ಇರುವುದರಿಂದ ಅದು ರಕ್ತದ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚು ಮಾಡುತ್ತದೆ.

2. ಒಂದು ಗ್ಲಾಸ್ ಹಾಲು ಮತ್ತು ಬಾದಾಮಿಯನ್ನು ತಿನ್ನುವುದರಿಂದ ಎಷ್ಟು ಪೊಟ್ಯಾಶಿಯಂ ಅಂಶವು ದೇಹಕ್ಕೆ ದೊರೆಯುತ್ತದೋ ಅಷ್ಟೊಂದು ಪೊಟ್ಯಾಶಿಯಂ ಅಂಶವನ್ನು ಒಂದು ಬಾಳೆಹಣ್ಣು ತಿನ್ನುವುದರಿಂದ ನಾವು ಪಡೆಯಬಹುದು.

3. ಸೈನಸ್ ಅಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹ ವ್ಯಕ್ತಿಗಳು ಬಾಳೆಹಣ್ಣಿನ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಈ ಸಮಸ್ಯೆಗೆ ಬೇಗನೇ ಉಪಶಮನ ಕಂಡುಕೊಳ್ಳಬಹುದು.

4. ಉದರದ ಸಮಸ್ಯೆ ಇದ್ದರೆ ಅಂತಹವರು ಬಾಳೆಹಣ್ಣನ್ನು ಮೊಸರು ಮತ್ತು ಸಕ್ಕರೆಯೊಂದಿಗೆ ಬೆರೆಸಿ ತಿನ್ನುವುದರಿಂದ ಉದರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

5. ಬಾಳೆ ಹಣ್ಣನ್ನು ಒಂದು ಗ್ಲಾಸ್ ಹಾಲಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಎಲ್ಲರೂ ಕೂಡ ಒಂದು ತಪ್ಪು ಕಲ್ಪನೆ ಮಾಡಿಕೊಂಡಿರುತ್ತಾರೆ. ಏನೆಂದರೆ ಬಾಳೆ ಹಣ್ಣನ್ನು ತಿನ್ನುವುದರಿಂದ ದಪ್ಪಗಾಗುತ್ತಾರೆ ಅಂತಾ. ಆದರೆ ಇದು ಸುಳ್ಳು. ಬಾಳೆ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆತು ಸದೃಢವಾದ ದೇಹವನ್ನು ನಮ್ಮದಾಗಿಸಿಕೊಳ್ಳಬಹುದು.

6. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಕ್ಯಾಲ್ಶಿಯಂ, ಸಲ್ಫರ್, ಕಾರ್ಬೊಹೈಡ್ರೇಟ್ ನಂತಹ ಸಾಕಷ್ಟು ಅಂಶಗಳು ಇವೆ. ಇದು ನಮ್ಮ ದೇಹಕ್ಕೆ ಬೇಕಾಗಿರುವ ಅಂಶಗಳು. ಬಾಳೆ ಹಣ್ಣನ್ನು ತಿನ್ನುವುದರಿಂದ ಸ್ಟ್ರೆಸ್ ಆಗಿದ್ದಲ್ಲಿ ಒಳ್ಳೆ ರಿಲ್ಯಾಕ್ಸೇಷನ್ ಸಿಗುತ್ತದೆ.