Banana: ಬಾಳೆಹಣ್ಣಿನಿಂದ ದೇಹಕ್ಕಿದೆ ಸಾಕಷ್ಟು ಪ್ರಯೋಜನ, ಆದ್ರೆ ಖಾಲಿ ಹೊಟ್ಟೆಯಲ್ಲಿ ತಿನ್ಬೇಡಿ

| Updated By: ನಯನಾ ರಾಜೀವ್

Updated on: Jun 05, 2022 | 8:00 AM

ಬಾಳೆಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಹೊಟ್ಟೆ ಹಸಿದರೂ ಬಾಳೆಹಣ್ಣು, ಹೊಟ್ಟೆ ತುಂಬಿದ ಬಳಿಕವೂ ಬಾಳೆ ಹಣ್ಣು ಹೀಗೆ ಯಾವ ಸಮಯದಲ್ಲಿ ಬೇಕಾದರೂ ತಿನ್ನಬೇಕೆನಿಸುವ ಹಣ್ಣು ಇದಾಗಿದೆ.

Banana: ಬಾಳೆಹಣ್ಣಿನಿಂದ ದೇಹಕ್ಕಿದೆ ಸಾಕಷ್ಟು ಪ್ರಯೋಜನ, ಆದ್ರೆ ಖಾಲಿ ಹೊಟ್ಟೆಯಲ್ಲಿ ತಿನ್ಬೇಡಿ
Banana Benefits
Follow us on

ಬಾಳೆಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಹೊಟ್ಟೆ ಹಸಿದರೂ , ಹೊಟ್ಟೆ ತುಂಬಿದ ಬಳಿಕವೂ ಹೀಗೆ ಯಾವ ಸಮಯದಲ್ಲಿ ಬೇಕಾದರೂ ತಿನ್ನಬೇಕೆನಿಸುವ ಹಣ್ಣು ಇದಾಗಿದೆ. ಬಾಳೆ ಹಣ್ಣಿನಲ್ಲಿ ಕಬ್ಬಿಣದ ಅಂಶ ಬಹಳಷ್ಟಿದೆ. ಮೊದಲೇ ಖಾಲಿ ಹೊಟ್ಟೆ ಬೇರೆ. ಇಂತಹ ಸಮಯದಲ್ಲಿ ಬಾಳೆ ಹಣ್ಣು ತಿಂದರೆ ದೇಹಕ್ಕೆ ಕಬ್ಬಿಣದ ಅಂಶಗಳು ಚೆನ್ನಾಗಿ ಹೀರಿಕೊಂಡು ದೇಹದಲ್ಲಿ ರಕ್ತದ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿಕೊಂಡರೆ ಅನೀಮಿಯಾ ರೋಗದಿಂದ ಬಹಳ ಬೇಗನೆ ಮುಕ್ತಿ ಪಡೆಯಬಹುದು.

ಬಾಳೆಹಣ್ಣಿನಿಂದಾಗುವ ಪ್ರಯೋಜನಗಳು
ತೂಕ ಇಳಿಕೆ: ನಿತ್ಯ ಬಾಳೆಹಣ್ಣು ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಪ್ರೋಟಿನ್ ಹಾಗೂ ಫೈಬರ್ ಇರುತ್ತದೆ.

ನಿಶ್ಯಕ್ತಿಯನ್ನು ಹೋಗಲಾಡಿಸುತ್ತದೆ: ನಿಶ್ಯಕ್ತಿಯನ್ನು ಹೋಗಲಾಡಿಸುವ ಶಕ್ತಿ ಬಾಳೆಹಣ್ಣಿಗಿದೆ. ಬೇರೆಲ್ಲಾ ಎನರ್ಜಿ ಡ್ರಿಂಕ್​ಗಳಿಗಿಂತ ಬಾಳೆಹಣ್ಣಿನಲ್ಲಿ ಹೆಚ್ಚು ಶಕ್ತಿ ಇದೆ.

ಮುಖದ ಕಾಂತಿ ಕಾಪಾಡುತ್ತದೆ: ಬಾಳೆಹಣ್ಣು ತ್ವಚೆಯ ಕಾಂತಿಯನ್ನು ಕಾಪಾಡುವುದಷ್ಟೇ ಅಲ್ಲದೆ ಚರ್ಮವು ಬೇಗ ಸುಕ್ಕುಗಟ್ಟದಂತೆ ತಡೆಯುತ್ತದೆ.

ಹೃದಯದ ಆರೋಗ್ಯ ಕಾಪಾಡುತ್ತದೆ: ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಂಶವು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಅದನ್ನು ಸೇವಿಸುವುದರಿಂದ ಶೇ.27ರಷ್ಟು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬಹುದೇ?
ಇನ್ನು ನಮ್ಮ ದೇಹಕ್ಕೆ ಪ್ರತಿ ದಿನದ ಕಾರ್ಯ ಚಟುವಟಿಕೆಗೆ ನೆರವಾಗಲು ನಮ್ಮ ಆಹಾರದಲ್ಲಿ ಅಗತ್ಯ ಪೌಷ್ಟಿಕ ಸತ್ವಗಳ ಅವಶ್ಯಕತೆ ಬಹಳಷ್ಟಿದೆ. ಬಾಳೆ ಹಣ್ಣಿನಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಅಂಶಗಳು ಸಾಕಷ್ಟಿರುತ್ತವೆ. ಇವುಗಳು ದೇಹಕ್ಕೆ ಶಕ್ತಿಯನ್ನು ಒದಗಿಸುವುದಲ್ಲದೆ ಹಸಿವಿನ ಸಮಸ್ಯೆಯನ್ನು ದೂರ ಮಾಡುತ್ತವೆ.

ಹಾಗಾದರೆ ಇವುಗಳನ್ನು ಹೊಂದಿರುವ ಬಾಳೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲೇ ತಿಂದುಬಿಟ್ಟರೆ ಎಷ್ಟು ಉಪಯೋಗ ಇದೆ. ದೇಹಕ್ಕೆ ಚೆನ್ನಾಗಿ ಶಕ್ತಿ ಸೇರಿ ನಮ್ಮನ್ನು ಹೆಚ್ಚು ಹೆಚ್ಚು ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದೆಲ್ಲಾ ಈಗಾಗಲೇ ಆಲೋಚನೆ ಮಾಡುತ್ತಿದ್ದೀರಾ ಅಲ್ಲವೇ? ಅದಕ್ಕೂ ಉತ್ತರ ನಮ್ಮ ಬಳಿ ಇದೆ.

ಬಾಳೆ ಹಣ್ಣಿನಲ್ಲಿ ( ಸುಮಾರು 100 ಗ್ರಾಂ ನಷ್ಟಿರುವ ) 12 ರಿಂದ 14 ಗ್ರಾಂ ನಷ್ಟು ಸಕ್ಕರೆ ಅಂಶಗಳು ಸೇರಿವೆ. ಅಂದರೆ ಮನುಷ್ಯನಿಗೆ ಒಂದು ದಿನಕ್ಕೆ ಬೇಕಾದ ಸಕ್ಕರೆ ಪ್ರಮಾಣದ ಕಾಲು ಭಾಗದಷ್ಟು ಸಕ್ಕರೆ ಅಂಶವನ್ನು ಬಾಳೆ ಹಣ್ಣು ಒದಗಿಸುತ್ತದೆ.

ಖಾಲಿ ಹೊಟ್ಟೆಗೆ ಬಾಳೆಹಣ್ಣು ಒಳ್ಳೆಯದಲ್ಲ
ಆದರೆ ನಿಮಗೊಂದು ಶಾಕಿಂಗ್ ವಿಷಯವನ್ನು ನಾವು ಹೇಳಲೇಬೇಕು. ಅದೇನೆಂದರೆ ಪೌಷ್ಟಿಕ ಆಹಾರ ತಜ್ಞರ ಪ್ರಕಾರ ಬಾಳೆ

ಹಣ್ಣು ಖಾಲಿ ಹೊಟ್ಟೆಯಲ್ಲಿ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಲ್ಲ
ಬಾಳೆ ಹಣ್ಣಿನಲ್ಲಿ ಕಬ್ಬಿಣ, ನಾರಿನ ಅಂಶ, ಪೊಟ್ಯಾಸಿಯಂ, ಮೆಗ್ನೀಷಿಯಂ, ಸಕ್ಕರೆ ಅಂಶ ಹಾಗೂ ವಿಟಮಿನ್ ಗಳ ಪೂರೈಕೆ ಇಷ್ಟೆಲ್ಲಾ ಇದ್ದರೂ ಮನುಷ್ಯ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನಬಾರದು ಎಂದು ತಾಕೀತು ಮಾಡಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ