ಬಿರಿಯಾನಿ ಆಹಾರ ಪ್ರಿಯರ ಬಾಯಲ್ಲಿ ನೀರೂರಿಸುವ ಖಾದ್ಯ. ಬಿರಿಯಾನಿ ಎಂದರೆ ಅದರಲ್ಲಿ ಬೇ ಎಲೆ (Bay Leaves) ಗಳನ್ನು ಸೇರಿಸಲೇಬೇಕು. ಸಸ್ಯಹಾರ ಮಾತ್ರವಲ್ಲದೆ ಮಾಂಸಾಹಾರಕ್ಕೂ ಇದು ಒಳ್ಳೆ ರುಚಿ ಕೊಡುತ್ತವೆ. ಈ ಬಿರಿಯಾನಿ ಎಲೆಯು ಆಹಾರಕ್ಕೆ ಸುವಾಸನೆ ನೀಡುವುದರ ಜೊತೆಗೆ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಇದರಲ್ಲಿ ಹಲವು ಔಷಧೀಯ ಗುಣಗಳಿವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಈ ಎಲೆಯು ಅನೇಕ ರೋಗಗಳನ್ನು ಗುಣಪಡಿಸುವ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಎಂದು ಹೇಳಲಾಗುತ್ತದೆ. ಬಿರಿಯಾನಿ ಎಲೆಗಳಲ್ಲಿ ಪೊಟ್ಯಾಸಿಯಮ್, ತಾಮ್ರ, ಮೆಗ್ನೀಸಿಯಮ್, ಸತು, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು. ಹಾಗಾದರೆ ಈ ಬಿರಿಯಾನಿ ಎಲೆಯ ಪ್ರಯೋಜನಗಳು ಏನು ಎಂದು ತಿಳಿಯೋಣ.
ತಜ್ಞರು ಹೇಳುವ ಪ್ರಕಾರ ಒತ್ತಡದಿಂದ ಮುಕ್ತಿ ಹೊಂದಲು ಮಲಗುವ ಮುನ್ನ 2 ಎಲೆಗಳನ್ನು ತೆಗೆದುಕೊಂಡು ಅದನ್ನು ಕೋಣೆಯಲ್ಲಿ ಸುಟ್ಟು ಇಟ್ಟುಕೊಳ್ಳುವುದರಿಂದ ಅದರಿಂದ ಬರುವ ಹೊಗೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಉಸಿರಾಟಕ್ಕೆ ತೊಂದರೆ ಉಂಟಾದರೆ ಈ ಬಿರಿಯಾನಿ ಎಲೆಗಳನ್ನು ತಿನ್ನುವುದು ಉತ್ತಮ ಎಂದು ಹೇಳಲಾಗುತ್ತದೆ. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಎದೆಗೆ ಕರವಸ್ತ್ರದಂತಹ ಬಟ್ಟೆಯನ್ನು ಹಾಕಿದರೆ ಉಸಿರಾಟದ ಸಮಸ್ಯೆ ದೂರವಾಗುತ್ತದೆ.
ಇದನ್ನೂ ಓದಿ: Diabetes: ಮಧುಮೇಹಿಗಳು ಯಾವ ಹಣ್ಣುಗಳನ್ನು ತಿನ್ನಬಹುದು, ಯಾವ ಹಣ್ಣುಗಳನ್ನು ಸೇವಿಸಬಾರದು?
ಬಿರಿಯಾನಿ ಎಲೆಗಳನ್ನು ಬಳಸಿ ಅರೋಮಾಥೆರಪಿ ದೇಹಕ್ಕೆ ತುಂಬಾ ವಿಶ್ರಾಂತಿ ನೀಡುತ್ತದೆ. ಟೈಪ್-2 ಡಯಾಬಿಟಿಸ್ ರೋಗಿಗಳಿಗೆ ಈ ಬಿರಿಯಾನಿ ಎಲೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಎಲೆಗಳ ಔಷಧೀಯ ಗುಣಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್, ಗ್ಲೂಕೋಸ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹಿಗಳಿಗೂ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
(ಗಮನಿಸಿ: ಈ ಮೇಲೆ ನೀಡಲಾದ ವಿಷಯವು ಮಾಹಿತಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ನೀಡಲಾಗಿದೆ. ಟಿವಿ9 ಕನ್ನಡ ಡಿಜಿಟಲ್ಗೆ ಯಾವುದೇ ಸಂಬಂಧವಿಲ್ಲ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ.)