ಬಿಸಿಲಿಗೆ ಏನಾದರೂ ತಂಪಾಗಿ ಕುಡಿಯಬೇಕು ಎನಿಸುವುದು ಸಹಜ. ಆದರೆ, ನಾವು ಕುಡಿಯುವ ಪಾನೀಯ ನಮ್ಮ ಆರೋಗ್ಯದ (Health News) ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕೂಡ ನಮಗೆ ತಿಳಿದಿರಬೇಕು. ಅಂಗಡಿಗಳಲ್ಲಿ ಹಲವು ಬ್ರಾಂಡ್ಗಳ ಕೋಲ್ಡ್ ಡ್ರಿಂಕ್ಗಳು ಲಭ್ಯ ಇವೆ. ಪ್ರತಿದಿನ ಒಮ್ಮೆ ಅಥವಾ ಒಂದು ಸಲಕ್ಕಿಂತ ಹೆಚ್ಚು ಬಾರಿ ಸಕ್ಕರೆ ಅಂಶವಿರುವ ಸಾಫ್ಟ್ ಡ್ರಿಂಕ್ (Soft Drinks) ಸೇವಿಸುವ ಮಹಿಳೆಯರು ಲಿವರ್ ಕ್ಯಾನ್ಸರ್ (Liver Cancer) ಮತ್ತು ದೀರ್ಘಕಾಲದ ಹೆಪಟೈಟಿಸ್‌ನಂತಹ ಕಾಯಿಲೆಗಳನ್ನು ಹೊಂದುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಈ ಬಗ್ಗೆ ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯ ಸಂಶೋಧಕರ ನೇತೃತ್ವದ ವೀಕ್ಷಣಾ ಅಧ್ಯಯನವು ತಿಳಿಸಿದ್ದು, ಸುಮಾರು 1,00,000 ಋತುಬಂಧಕ್ಕೊಳಗಾದ ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 20 ವರ್ಷಗಳಿಗೂ ಹೆಚ್ಚು ಕಾಲ ಅವರನ್ನು ಅಧ್ಯಯನ ಮಾಡಿತು. ಆಗ ಇದು ಸಾಫ್ಟ್ಡ್ರಿಂಕ್ ಪಾನೀಯ ಸೇವನೆ ಮತ್ತು ದೀರ್ಘಕಾಲದ ಲಿವರ್ನ ಕಾಯಿಲೆಯಿಂದಾಗುವ ಮರಣದ ನಡುವಿನ ಸಂಬಂಧವನ್ನು ವರದಿ ಮಾಡುವ ಮೊದಲ ಅಧ್ಯಯನವಾಗಿದೆ ಎಂದು ನೆಟ್‌ವರ್ಕ್ ಮೆಡಿಸಿನ್‌ನ ಬ್ರಿಗಮ್‌ನ ಚಾನಿಂಗ್ ವಿಭಾಗದ ಮೊದಲ ಲೇಖಕ ಲಾಂಗ್‌ಗಾಂಗ್ ಝಾವೊ ಹೇಳಿದ್ದಾರೆ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ ನಿಯಂತ್ರಿಸಲು ಸಹಾಯ ಮಾಡುವ ಆಹಾರಗಳಿವು
ತಂಪು ಪಾನೀಯಗಳಲ್ಲಿ ಸಕ್ಕರೆ ಮತ್ತು ಸೋಡಾ ಅಧಿಕವಾಗಿರುವುದರಿಂದ ನಮ್ಮ ಆರೋಗ್ಯಕ್ಕೆ ಇದು ಗಂಭೀರ ಅಪಾಯವನ್ನುಂಟುಮಾಡುತ್ತದೆ. ಇದು ಸ್ಥೂಲಕಾಯತೆ, ಮಧುಮೇಹ, ಕ್ಯಾನ್ಸರ್, ಪಿತ್ತಜನಕಾಂಗದ ಹಾನಿ, ಜೀರ್ಣಕಾರಿ ಸಮಸ್ಯೆಗಳು ಮತ್ತು ಮೂಳೆ ಆರೋಗ್ಯದ ತೊಂದರೆಗಳ ಅಪಾಯವನ್ನುಂಟುಮಾಡುತ್ತದೆ. ಲಿವರ್ ಕ್ಯಾನ್ಸರ್, ಹೆಚ್ಚಿನ ಅಪಾಯದ ಗರ್ಭಧಾರಣೆ, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುವ ಅಪಾಯದಲ್ಲಿರುವ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಇದರ ಅಪಾಯವು ಇನ್ನೂ ಹೆಚ್ಚು ಎಂದು ಅಧ್ಯಯನವು ಕಂಡುಹಿಡಿದಿದೆ.
ಪ್ರತಿದಿನ ಸೋಡಾ, ಎನರ್ಜಿ ಡ್ರಿಂಕ್ಸ್ ಮತ್ತು ಸಿಹಿಯಾದ ಕಾಫಿಯಂತಹ ಹೆಚ್ಚಿನ ಸಕ್ಕರೆ ಪಾನೀಯಗಳನ್ನು ಸೇವಿಸುವುದರಿಂದ ಬೊಜ್ಜು, ಟೈಪ್ 2 ಮಧುಮೇಹ ಮತ್ತು ಹೃದ್ರೋಗ ಉಂಟಾಗಬಹುದು. ಇದು ದೀರ್ಘಕಾಲದ ಲಿವರ್ ಕಾಯಿಲೆ ಮತ್ತು ಯಕೃತ್ತಿನ ಕ್ಯಾನ್ಸರ್ಗೆ ಕಾರಣವಾಗಬಹುದು. ಸಕ್ಕರೆ ಪಾನೀಯಗಳ ನಿಯಮಿತ ಸೇವನೆಯು ಫೈಬ್ರೋಸಿಸ್, ಸಿರೋಸಿಸ್ ಮತ್ತು ಮಹಿಳೆಯರು ಹಾಗೂ ಪುರುಷರಲ್ಲಿ ದೀರ್ಘಕಾಲದ ಪಿತ್ತಜನಕಾಂಗದ ಉರಿಯೂತ ಉಂಟಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಸಿಹಿಯಾದ ಪಾನೀಯಗಳನ್ನು ಕುಡಿಯುವುದರಿಂದ ರಕ್ತದಲ್ಲಿನ ಗ್ಲೂಕೋಸ್‌ನಲ್ಲಿ ತ್ವರಿತ ಹೆಚ್ಚಳವು ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡಬಹುದು.
ಇದನ್ನೂ ಓದಿ: Stomach Cancer: ಹೊಟ್ಟೆಯ ಕ್ಯಾನ್ಸರ್ ಯಾಕೆ ಬಹಳ ಅಪಾಯಕಾರಿ?
ಇತ್ತೀಚಿನ ಅಧ್ಯಯನಗಳು ದಿನವೂ ಸೋಡಾವನ್ನು ಸೇವಿಸುವ ಮಹಿಳೆಯರಲ್ಲಿ ಹೆಪಟೈಟಿಸ್ ಮತ್ತು ಲಿವರ್ ಕಾರ್ಸಿನೋಮದ ಹೆಚ್ಚಳವನ್ನು ಸೂಚಿಸಿವೆ. ಇದು ಮುಖ್ಯವಾಗಿ ಈಸ್ಟ್ರೊಜೆನ್ ಹೆಚ್ಚಳದಿಂದ ಉಂಟಾಗುತ್ತದೆ. ಅಮೇರಿಕನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ, ದಿನಕ್ಕೆ 20 ಔನ್ಸ್ ಸೋಡಾ ಸೇವನೆಯು ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:52 am, Thu, 1 February 24