Stomach Cancer: ಹೊಟ್ಟೆಯ ಕ್ಯಾನ್ಸರ್ ಯಾಕೆ ಬಹಳ ಅಪಾಯಕಾರಿ?
ಇತ್ತೀಚೆಗೆ ಹೊಟ್ಟೆಯ ಕ್ಯಾನ್ಸರ್ ಪ್ರಕರಣಗಳು ಬಹಳ ಹೆಚ್ಚಾಗುತ್ತಿವೆ. ಈ ಕ್ಯಾನ್ಸರ್ ಬೇರೆ ಕ್ಯಾನ್ಸರ್ಗಿಂತಲೂ ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ಹೊಟ್ಟೆಯ ಕ್ಯಾನ್ಸರ್ ಹೇಗೆ ಬರುತ್ತದೆ? ಇದರ ಅಪಾಯಗಳೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಈಗೀಗ ಕೆಲವು ಕಾರಣಗಳಿಂದ ಹೊಟ್ಟೆಯ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಇದು ಏಕೆ ಅಪಾಯಕಾರಿ ಎಂದು ನಾವು ತಿಳಿದುಕೊಳ್ಳುವುದು ಅನಿವಾರ್ಯ. ಹೊಟ್ಟೆಯು ನಮ್ಮ ಆಹಾರವನ್ನು ಸಂಗ್ರಹಿಸುವ ಅಂಗವಾಗಿದೆ. ಇದರಲ್ಲಿರುವ ಕರುಳು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆಯ ಕ್ಯಾನ್ಸರ್ (Stomach cancer) ತುಂಬಾ ದೊಡ್ಡದಾಗಿದ್ದರೂ ಸಹ ಈ ರೋಗವು ಬಹಳ ಮುಂದುವರಿದಾಗ ಮಾತ್ರ ರೋಗಲಕ್ಷಣಗಳನ್ನು ಅನುಭವಿಸಲು ಸಾಧ್ಯ.
ಹೊಟ್ಟೆಯ ಕ್ಯಾನ್ಸರ್ ಏಕೆ ಅಪಾಯಕಾರಿ?:
ಹೊಟ್ಟೆಯ ಕ್ಯಾನ್ಸರ್ನ ಲಕ್ಷಣಗಳು ಕೆಲವೊಮ್ಮೆ ನಮ್ಮನ್ನು ತಪ್ಪುದಾರಿಗೆ ಎಳೆಯಬಹುದು. ಆಮ್ಲೀಯತೆ ಮತ್ತು ಕಿಬ್ಬೊಟ್ಟೆಯ ನೋವು ಈ ಸಂದರ್ಭದಲ್ಲಿ ತುಂಬಾ ಸಾಮಾನ್ಯವಾಗಿರುತ್ತದೆ. ಬಹುತೇಕ ಜನರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕೆಲವೊಮ್ಮೆ ರಕ್ತಹೀನತೆ ಕೂಡ ಇದರ ರೋಗಲಕ್ಷಣವಾಗಿರಬಹುದು.
ಇದನ್ನೂ ಓದಿ: ಸ್ತನ ಕ್ಯಾನ್ಸರ್ನ ಐದು ಆರಂಭಿಕ ಲಕ್ಷಣಗಳು
ರೋಗನಿರ್ಣಯವನ್ನು ಖಚಿತಪಡಿಸಲು ಸಾಮಾನ್ಯವಾಗಿ GI ಎಂಡೋಸ್ಕೋಪಿಯ ಅಗತ್ಯವಿರುತ್ತದೆ. ವಿಪರೀತ ತೂಕ ಕಡಿಮೆಯಾಗುವುದು ಮತ್ತು ಹಸಿವು ಕಡಿಮೆಯಾಗುವುದು ಸಹ ಹೊಟ್ಟೆಯ ಕ್ಯಾನ್ಸರ್ನ ಸಾಮಾನ್ಯ ಲಕ್ಷಣಗಳಾಗಿವೆ.
ಹೊಟ್ಟೆ ಕ್ಯಾನ್ಸರ್ಗೆ ಚಿಕಿತ್ಸೆಯೇನು?:
ಹೊಟ್ಟೆಯ ಕ್ಯಾನ್ಸರ್ಗೆ ಕಾರಣವಾಗುವ ಗೆಡ್ಡೆಗಳು ಅಂತರ್ಗತವಾಗಿ ವೇಗವಾಗಿ ಬೆಳೆಯುತ್ತವೆ. ಇವು ದೇಹದ ಇತರ ಭಾಗಗಳಿಗೆ ಬೇಗ ಹರಡುತ್ತವೆ. ಇದು ಚಿಕಿತ್ಸೆಯನ್ನು ಪ್ರಾರಂಭಿಸಲು ಹೆಚ್ಚು ಸಮಯವನ್ನು ನೀಡುವುದಿಲ್ಲ. ಒಂದುವೇಳೆ ಚಿಕಿತ್ಸೆ ನೀಡಿದರೂ ಈ ಗೆಡ್ಡೆಗಳು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಿಮೊಥೆರಪಿ, ಸುಪ್ರಾ-ಮೇಜರ್ ಶಸ್ತ್ರಚಿಕಿತ್ಸೆ, ಲೇಸರ್ ಚಿಕಿತ್ಸೆ ಮುಂತಾದವುಗಳಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ವೈದ್ಯರು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ: ಕ್ಯಾನ್ಸರ್, ಮಧುಮೇಹದಿಂದ ಮಹಿಳೆಯರನ್ನು ಕಾಪಾಡುವ ಡಯೆಟ್ ಇಲ್ಲಿದೆ
ನಿಮ್ಮ ಕುಟುಂಬದಲ್ಲಿ ಬೇರೆ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಆಗಾಗ ನೀವು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಕ್ಯಾನ್ಸರ್ ಎಷ್ಟು ಬೇಗ ಗೊತ್ತಾಗುತ್ತದೋ ಅಷ್ಟು ಬೇಗ ಚಿಕಿತ್ಸೆ ನೀಡಲು ಸುಲಭವಾಗುತ್ತದೆ. ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯನ್ನು ಬಿಟ್ಟುಬಿಡಿ. ಹೊಗೆಯಿಂದ ಕೂಡಿದ ಆಹಾರವೂ ಹಾನಿಕಾರಕವಾಗಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ