ತೂಕ ಇಳಿಸುವುದರಿಂದ ಮಧುಮೇಹ ನಿಯಂತ್ರಣದವರೆಗೆ; ಶುಂಠಿ ನೀರಿನ ಪ್ರಯೋಜನಗಳಿವು

Ginger Water Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರನ್ನು ಕುಡಿಯುವುದು ಇತ್ತೀಚೆಗೆ ಟ್ರೆಂಡ್ ಆಗಿದ್ದು, ಬಹಳಷ್ಟು ಸೆಲೆಬ್ರಿಟಿಗಳು ಅದನ್ನು ಅನುಸರಿಸುತ್ತಿದ್ದಾರೆ. ನೀವು ಕೂಡ ಈ ಶುಂಠಿ ನೀರನ್ನು ನಿಮ್ಮ ಡಯೆಟ್​ನಲ್ಲಿ ಸೇರಿಸಿಕೊಳ್ಳಬಹುದು.

ತೂಕ ಇಳಿಸುವುದರಿಂದ ಮಧುಮೇಹ ನಿಯಂತ್ರಣದವರೆಗೆ; ಶುಂಠಿ ನೀರಿನ ಪ್ರಯೋಜನಗಳಿವು
ಶುಂಠಿ
Follow us
ಸುಷ್ಮಾ ಚಕ್ರೆ
|

Updated on: Jan 26, 2024 | 4:29 PM

ಶುಂಠಿಯನ್ನು ಪ್ರತಿದಿನವೂ ಬಳಸುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ. ಶುಂಠಿಯ ಬಲವಾದ ಮತ್ತು ಬೆಚ್ಚಗಾಗುವ ಸುವಾಸನೆಯು ಈ ಚಳಿಯ ಋತುವಿಗೆ ಬೆಸ್ಟ್​ ಆಯ್ಕೆ. ನೀವು ಎಂದಾದರೂ ಬೆಳಿಗ್ಗೆ ಶುಂಠಿ ನೀರನ್ನು ಕುಡಿಯಲು ಪ್ರಯತ್ನಿಸಿದ್ದೀರಾ? ಈ ಮಸಾಲೆ ಹೇರಳವಾದ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರನ್ನು ಕುಡಿಯುವುದು ಇತ್ತೀಚೆಗೆ ಟ್ರೆಂಡ್ ಆಗಿದ್ದು, ಬಹಳಷ್ಟು ಸೆಲೆಬ್ರಿಟಿಗಳು ಅದನ್ನು ಅನುಸರಿಸುತ್ತಿದ್ದಾರೆ. ನೀವು ಕೂಡ ಈ ಶುಂಠಿ ನೀರನ್ನು ನಿಮ್ಮ ಡಯೆಟ್​ನಲ್ಲಿ ಸೇರಿಸಿಕೊಳ್ಳಬಹುದು.

ಬೆಳಿಗ್ಗೆ ಶುಂಠಿ ನೀರನ್ನು ಕುಡಿಯುವುದರಿಂದ ಆಗುವ 5 ಪ್ರಯೋಜನಗಳು ಹೀಗಿವೆ:

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಶುಂಠಿಯು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಅದು ನಿಮ್ಮ ದೇಹವನ್ನು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಉರಿಯೂತದ ಗುಣಲಕ್ಷಣಗಳು ಸೂಕ್ಷ್ಮಜೀವಿಗಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ದೂರವಿರಿಸಲು ಸಹಕಾರಿಯಾಗಿದೆ. ಹೀಗಾಗಿ, ಪ್ರತಿದಿನ ಬೆಳಿಗ್ಗೆ ಶುಂಠಿ ನೀರನ್ನು ಕುಡಿದು, ಆರೋಗ್ಯವಾಗಿರಿ.

ಇದನ್ನೂ ಓದಿ: Weight Loss: ತೂಕ ಇಳಿಸಬೇಕಾ?; ಕೇಸರಿ ಬಳಸಿ!

ವಾಕರಿಕೆಗೆ ಸಹಾಯ ಮಾಡುತ್ತದೆ:

ಗರ್ಭಾವಸ್ಥೆಯಲ್ಲಿ ಮಲಬದ್ಧತೆ, ಮೈಗ್ರೇನ್, ಮಾರ್ನಿಂಗ್ ಸಿಕ್​ನೆಸ್​ ಅಥವಾ ವಾಕರಿಕೆ ನಿಯಂತ್ರಣಕ್ಕೆ ಸಹಾಯ ಮಾಡುವ ಗುಣಲಕ್ಷಣಗಳನ್ನು ಶುಂಠಿ ಹೊಂದಿದೆ. ಇದು ವಾಂತಿಯ ಭಾವನೆಯನ್ನು ಕಡಿಮೆ ಮಾಡಲು ಸುರಕ್ಷಿತ ಪರಿಹಾರವೆಂದು ಪರಿಗಣಿಸಲಾಗಿದೆ. ಆದರೆ, ಶುಂಠಿ ನೀರನ್ನು ಬೆಳಗ್ಗೆ ಸೇವಿಸುವ ಮೊದಲು ಗರ್ಭಿಣಿಯರು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ತೂಕ ಇಳಿಕೆಗೆ ಸಹಕಾರಿ:

ಶುಂಠಿ ಪಾನೀಯಗಳು ಕ್ಯಾಲೋರಿ ಬರ್ನ್ ಅನ್ನು ಹೆಚ್ಚಿಸುತ್ತದೆ. ಇದು ನಿಮ್ಮ ದೇಹದಲ್ಲಿ ಹಸಿವಿನ ಭಾವನೆಯನ್ನು ಕಡಿಮೆ ಮಾಡುತ್ತದೆ. ಹೆಲ್ತ್‌ಲೈನ್ ಪ್ರಕಾರ, ಶುಂಠಿಯು ದೇಹದ ತೂಕ ಮತ್ತು ಹೊಟ್ಟೆಯ ಕೊಬ್ಬಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಹಾಗೂ ತೂಕ ಇಳಿಸಲು ಸಹಕಾರಿಯಾಗಿದೆ.

ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ:

ಖಾಲಿ ಹೊಟ್ಟೆಯಲ್ಲಿ ಶುಂಠಿ ಪಾನೀಯವನ್ನು ಸೇವಿಸಿದರೆ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಅನಗತ್ಯ ಸ್ಪೈಕ್‌ಗಳನ್ನು ತಡೆಯುತ್ತದೆ. ಈ ಪಾನೀಯವು ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತಾ?

ದೀರ್ಘಕಾಲದ ಅನಾರೋಗ್ಯವನ್ನು ತಡೆಯುತ್ತದೆ:

ಶುಂಠಿಯು ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ತಾಮ್ರ, ಮ್ಯಾಂಗನೀಸ್ ಕ್ರೋಮಿಯಂನ ಸಮೃದ್ಧ ಮೂಲವಾಗಿದೆ. ಶುಂಠಿ ನೀರಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್​ಗಳೊಂದಿಗೆ ಹೋರಾಡುತ್ತವೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!