AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾನ್ಸರ್, ಮಧುಮೇಹದಿಂದ ಮಹಿಳೆಯರನ್ನು ಕಾಪಾಡುವ ಡಯೆಟ್ ಇಲ್ಲಿದೆ

ಹೆಚ್ಚು ಸಸ್ಯ ಪ್ರೋಟೀನ್ ತಿನ್ನುವವರು ದೀರ್ಘಕಾಲದ ಕಾಯಿಲೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಪರಿಹಾರ ಪಡೆಯುತ್ತಾರೆ. ಹಾಗೇ, ವಯಸ್ಸಾದಂತೆ ಉತ್ತಮ ಮಾನಸಿಕ ಆರೋಗ್ಯವನ್ನು ಪಡೆಯುತ್ತಾರೆ.

ಕ್ಯಾನ್ಸರ್, ಮಧುಮೇಹದಿಂದ ಮಹಿಳೆಯರನ್ನು ಕಾಪಾಡುವ ಡಯೆಟ್ ಇಲ್ಲಿದೆ
ಸಸ್ಯ ಆಧಾರಿತ ಪ್ರೋಟೀನ್Image Credit source: iStock
ಸುಷ್ಮಾ ಚಕ್ರೆ
| Updated By: Digi Tech Desk|

Updated on:Jan 22, 2024 | 11:37 AM

Share

ಮಹಿಳೆಯರಲ್ಲಿ ಹಾರ್ಮೋನ್​ಗಳ ವ್ಯತ್ಯಾಸ ಆಗುತ್ತಿರುವುದರಿಂದ ಮತ್ತು ಅವರ ದೇಹ ಸೂಕ್ಷ್ಮವಾಗಿರುವುದರಿಂದ 30 ವರ್ಷದ ನಂತರ ಅನಾರೋಗ್ಯಗಳು ಹೆಚ್ಚಾಗುವುದು ಸಹಜ. ಹೀಗಾಗಿ, ಯಾವ ರೀತಿಯ ಡಯೆಟ್ ಅಳವಡಿಸಿಕೊಳ್ಳುವುದರಿಂದ ಮಹಿಳೆಯರ ಆರೋಗ್ಯ ಸುಧಾರಿಸುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಡೈರಿ ಮತ್ತು ಮಾಂಸದಂತಹ ಇತರ ಪ್ರಾಣಿ ಆಧಾರಿತ ಪ್ರೋಟೀನ್ ಮೂಲಗಳಿಗೆ ಹೋಲಿಸಿದರೆ ಮಹಿಳೆಯರ ಆರೋಗ್ಯಕ್ಕೆ ಸಸ್ಯ ಆಧಾರಿತ ಪ್ರೋಟೀನ್​ನಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಮಹಿಳೆಯರಲ್ಲಿ ಕ್ಯಾನ್ಸರ್, ಮಧುಮೇಹ ಮುಂತಾದ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಹೆಚ್ಚು ಸಸ್ಯ ಪ್ರೋಟೀನ್ ತಿನ್ನುವವರು ದೀರ್ಘಕಾಲದ ಕಾಯಿಲೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಪರಿಹಾರ ಪಡೆಯುತ್ತಾರೆ. ಹಾಗೇ, ವಯಸ್ಸಾದಂತೆ ಉತ್ತಮ ಮಾನಸಿಕ ಆರೋಗ್ಯವನ್ನು ಪಡೆಯುತ್ತಾರೆ ಎಂದು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ತಿಳಿಸಿದೆ.

ಈ ಸಂಶೋಧನೆಯು ವಯಸ್ಸಾದ ಮಹಿಳೆಯರ ಆರೋಗ್ಯದಲ್ಲಿ ಪ್ರೋಟೀನ್‌ನ ಪ್ರಾಮುಖ್ಯತೆ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿಗಳನ್ನು ಒದಗಿಸುತ್ತದೆ. ಅದರಲ್ಲೂ ವಿಶೇಷವಾಗಿ ಮಧ್ಯ ವಯಸ್ಸಿನ ಮಹಿಳೆಯರಲ್ಲಿ ವಿಶೇಷವಾಗಿ ಪ್ರೋಟೀನ್ ಕಡಿಮೆಯಾದರೆ ಅನೇಕ ಸಮಸ್ಯೆಗಳು ಸಂಭವಿಸುತ್ತದೆ. ಇದರಿಂದ ಮುಂದೆ ದೀರ್ಘಕಾಲದ ಕಾಯಿಲೆಗಳ ಅಪಾಯ ಕೂಡ ಉಂಟಾಗಬಹುದು ಎಂದು ಅಧ್ಯಯನ ತಿಳಿಸಿದೆ ಎಂದು ಹೆಲ್ತ್​ಲೈನ್ ವರದಿ ಮಾಡಿದೆ.

ಇದನ್ನೂ ಓದಿ: ಸ್ಟ್ರೋಕ್ ತಡೆಯಲು ನಿಮ್ಮ ಡಯೆಟ್​ನಲ್ಲಿ ಈ ಆಹಾರ ಸೇವಿಸಿ

ಆಹಾರದ ಮೂಲಕ ಪ್ರೋಟೀನ್ ಸೇವನೆ ಅದರಲ್ಲೂ ಸಸ್ಯ ಆಧಾರಿತ ಪ್ರೋಟೀನ್ ಉತ್ತಮ ಆರೋಗ್ಯದ ಜೊತೆ ಸಂಬಂಧ ಹೊಂದಿದೆ. ಪ್ರೋಟೀನ್ ಸೇವನೆ ಮತ್ತು ಆರೋಗ್ಯಕರವಾಗಿ ವಯಸ್ಸಾಗುವಿಕೆಯ ನಡುವಿನ ಸಂಬಂಧವನ್ನು ತೋರಿಸುವ ಅಧ್ಯಯನ ಇದಾಗಿದೆ.

ಕೊರಾಟ್ ಮತ್ತು ಅವರ ತಂಡವು 1984 ಮತ್ತು 2016ರ ನಡುವೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ 48,000ಕ್ಕೂ ಹೆಚ್ಚು ವಯಸ್ಕ ಮಹಿಳೆಯರ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಅವರ ಆಹಾರದ ಪ್ರೋಟೀನ್ ಸೇವನೆ ಮಧ್ಯ ವಯಸ್ಸಿನಿಂದ ವೃದ್ಧಾಪ್ಯದವರೆಗೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇದರಲ್ಲಿ ತಿಳಿಸಲಾಗಿದೆ.

ಮಧ್ಯ ವಯಸ್ಸಿನ ಮಹಿಳಯರಲ್ಲಿ ಪ್ರೋಟೀನ್ ಕೊರತೆಯಿಂದ ಕ್ಯಾನ್ಸರ್ (ಚರ್ಮದ ಕ್ಯಾನ್ಸರ್ ಹೊರತುಪಡಿಸಿ), ಟೈಪ್ 2 ಮಧುಮೇಹ, ಹೃದಯಾಘಾತ ಮತ್ತು ಹೃದಯ ವೈಫಲ್ಯ ಸೇರಿದಂತೆ ಹೃದಯರಕ್ತನಾಳದ ಕಾಯಿಲೆಗಳು, ಸ್ಟ್ರೋಕ್, ಕಿಡ್ನಿ ವೈಫಲ್ಯ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD), ಪಾರ್ಕಿನ್ಸನ್ ಕಾಯಿಲೆ ಮುಂತಾದ ಕಾಯಿಲೆಗಳು ಬರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಪ್ರೋಟೀನ್ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಡೈರಿ ಸೇರಿದಂತೆ ಪ್ರಾಣಿ ಪ್ರೋಟೀನ್‌ಗಳನ್ನು ದೀರ್ಘಕಾಲದವರೆಗೆ ಪ್ರೋಟೀನ್‌ನ ಉನ್ನತ ರೂಪಗಳೆಂದು ಹೇಳಲಾಗುತ್ತದೆ. ಏಕೆಂದರೆ, ಅವುಗಳನ್ನು “ಸಂಪೂರ್ಣ ಪ್ರೋಟೀನ್‌ಗಳು” ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಸಸ್ಯ ಪ್ರೋಟೀನ್‌ಗಳನ್ನು “ಅಪೂರ್ಣ ಪ್ರೋಟೀನ್‌ಗಳು” ಎಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳು ಕೆಲವು ಅಮೈನೋ ಆಮ್ಲಗಳನ್ನು ಮಾತ್ರ ಪೂರೈಸುತ್ತವೆ.

ಇದನ್ನೂ ಓದಿ: ನೀವು ಡಯೆಟ್​ನಲ್ಲಿದ್ದೀರಾ? ಎಣ್ಣೆ ತಿಂಡಿಗಳನ್ನು ತಿಂದ ಮೇಲೆ ಏನು ಮಾಡಬೇಕು?

ಪ್ರಾಣಿ ಪ್ರೋಟೀನ್ ಸಹ ಪ್ರಯೋಜನಕಾರಿಯಾಗಿದ್ದರೂ, ನಿಮ್ಮ ಒಟ್ಟಾರೆ ಪ್ರೋಟೀನ್ ಸೇವನೆಯು ಕಡಿಮೆಯಿದ್ದರೆ ಅದರಿಂದ ಅಪಾಯಗಳೂ ಇವೆ. ವಿಶೇಷವಾಗಿ ಕೆಂಪು ಮಾಂಸವು ಹೃದಯರಕ್ತನಾಳದ ಕಾಯಿಲೆ, ಪಾರ್ಶ್ವವಾಯು ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಸಸ್ಯ ಪ್ರೋಟೀನ್‌ನ ಸಮೃದ್ಧ ಮೂಲಗಳು ಇಲ್ಲಿವೆ:

– ಕಪ್ಪು ಹುರುಳಿ

– ನವಣೆ ಅಕ್ಕಿ

– ತೋಫು

– ಸೋಯಾ ಬೀನ್ಸ್

– ಮಸೂರ

– ಓಟ್ಸ್

– ಬಟಾಣಿ

– ಕಡಲೆ ಕಾಯಿ ಬೆಣ್ಣೆ (ಪೀನಟ್ ಬಟರ್)

– ನಟ್ಸ್

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Fri, 19 January 24