Diabetes
ದೇಹದ ಮೇದೋಜೀರಕ ಗ್ರಂಥಿ ಅಗತ್ಯವಿದ್ದಷ್ಟು ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸಲು ಅಸಾಧ್ಯವಾದಾಗ, ಇನ್ಸುಲಿನ್ ಕೊರತೆ ಉಂಟಾಗುತ್ತದೆ. ಇದರಿಂದಾಗಿ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ಮಧುಮೇಹ ಎಂಬುದು ಸಂಸ್ಕೃತದ ಮಧು ಅಂದರೆ ಸಿಹಿ ಮೇಹನ ಎಂದರೆ ಮೂತ್ರ, ಈ ಎರಡು ಪದಗಳ ಮೂಲಕ ಬಂದಿದೆ. ಇತ್ತೀಚೆಗೆ ಡಯಾಬಿಟಿಸ್ ಸರ್ವೇ ಸಾಮಾನ್ಯ ಕಾಯಿಲೆ. ಮೊದಲು ಸಕ್ಕರೆ ಕಾಯಿಲೆ ಎಂಬುದು ಶ್ರೀಮಂತರಿಗೆ ಮಾತ್ರ ಎನ್ನುವಂತಾಗಿತ್ತು. ಆದರೆ ಇದೀಗಾ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಆವರಿಸಿಬಿಟ್ಟಿದೆ. ಮಧುಮೇಹ ಪ್ರಾರಂಭವಾಗಿರುವ ಲಕ್ಷಣಗಳು ತೋರತೊಡಗಿದರೆ ತಕ್ಷಣವೇ ಗುರುತಿಸಿ ತಜ್ಞರ ಸಲಹೆ ಪಡೆಯುವುದು ಅಗತ್ಯ.