Diabetes: ಡಯಾಬಿಟಿಸ್ ಅಪಾಯ ಕಡಿಮೆ ಮಾಡಲು ಮೊಸರನ್ನು ಈ ರೀತಿ ಸೇವಿಸಿ
ಮೊಸರು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಉಪಯೋಗಿಸುವ ಪದಾರ್ಥ. ಮೊಸರು ನಮ್ಮ ಜೀರ್ಣಕ್ರಿಯೆ, ದೇಹದ ಉರಿಯೂತ ಕಡಿಮೆ ಮಾಡುವ ಸಾಮರ್ಥ್ಯ ಸೇರಿದಂತೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾದ ಪದಾರ್ಥವಾಗಿದೆ. ಮೊಸರು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದ ಉತ್ಪನ್ನವಾಗಿದೆ. ಇದು ಪ್ರೋಟೀನ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳು ಮತ್ತು ಪ್ರಯೋಜನಕಾರಿ ಸೂಕ್ಷ್ಮಜೀವಿಗಳಂತಹ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ.
ಕೆಲವರಿಗೆ ಮೊಸರನ್ನ ಇಲ್ಲವೆಂದರೆ ಊಟ ಪೂರ್ಣವಾಗುವುದೇ ಇಲ್ಲ. ಮೊಸರನ್ನು ತಿನ್ನುವುದರಿಂದ ದಪ್ಪವಾಗುತ್ತೇವೆ ಎಂಬ ತಪ್ಪುಕಲ್ಪನೆ ಕೆಲವರಲ್ಲಿದೆ. ಆದರೆ, ನಿಯಮಿತವಾಗಿ ಮೊಸರು ತಿನ್ನುವುದು ಜೀರ್ಣಾಂಗವ್ಯೂಹದ (ಜಿಐಟಿ) ಮೈಕ್ರೋಬಯೋಟಾ ಮತ್ತು ಪರಿಸರ ವ್ಯವಸ್ಥೆಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ. ವೈದ್ಯರ ಪ್ರಕಾರ, ಯಾವುದೇ ಸುಗಂಧವನ್ನು ಸೇರಿಸದ ಪ್ಲೇನ್ ಮೊಸರಿನ ನಿಯಮಿತ ಸೇವನೆಯು ರೋಗಿಗಳಿಗೆ ಮಧುಮೇಹ ಮತ್ತು ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೊಸರು ಮಧುಮೇಹದ ಅಪಾಯವನ್ನು ನಿಗ್ರಹಿಸುತ್ತದೆ ಎಂದು ಬಹಳ ಹಿಂದಿನಿಂದಲೂ ತಿಳಿದುಬಂದಿದೆ, ಆದರೂ ಮಾರ್ಚ್‌ನಲ್ಲಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಮೊಸರು ತಿನ್ನುವುದರಿಂದ ಟೈಪ್-2 ಡಯಾಬಿಟಿಸ್ (T2D) ಅಪಾಯವನ್ನು ಕಡಿಮೆ ಮಾಡಬಹುದು ಎಂದು ಮೊಟ್ಟಮೊದಲ ಬಾರಿಗೆ ಅಧಿಕೃತವಾಗಿ ತಿಳಿಸಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಮೊಸರು ಸೇವಿಸುವುದು ಒಳ್ಳೆಯದಾ?
“ವಾರಕ್ಕೆ ಕನಿಷ್ಠ 3 ಬಾರಿಯ ಮೊಸರು ಸೇವನೆಯು ಸಾಮಾನ್ಯ ಜನರಿಗೆ T2D ಸಂಭವದ ಅಪಾಯವನ್ನು ಕಡಿಮೆ ಮಾಡಬಹುದು” ಎಂದು ಅಧ್ಯಯನ ಹೇಳಿದೆ. ಡಯಾಬಿಟಿಸ್ & ಮೆಟಾಬಾಲಿಕ್ ಸಿಂಡ್ರೋಮ್: ಕ್ಲಿನಿಕಲ್ ರಿಸರ್ಚ್ & ರಿವ್ಯೂಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಈ ವಿಷಯವನ್ನು ಬಹಿರಂಗಪಡಿಸಿದೆ.
ಈ ಬಗ್ಗೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಸರ್ ಗಂಗಾ ರಾಮ್ ಆಸ್ಪತ್ರೆಯ ಪ್ರಿನ್ಸಿಪಾಲ್ ಡಯೆಟಿಷಿಯನ್ ವಂದನಾ ವರ್ಮಾ, ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಮೊಸರಿನ ಅನುಮೋದನೆಯು ಅದರ ಪ್ರೋಬಯಾಟಿಕ್ ಅಂಶದಿಂದಾಗಿ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ. ಕೆಲವು ಮೊಸರು ಪ್ರೋಬಯಾಟಿಕ್‌ಗಳ ಕೊರತೆಯನ್ನು ಹೊಂದಿರಬಹುದು ಅಥವಾ ಅವುಗಳಲ್ಲಿ ಹೆಚ್ಚಿನ ಸಕ್ಕರೆಗಳನ್ನು ಸೇರಿಸಿರಬಹುದು. ಇದು ಅವುಗಳ ಆರೋಗ್ಯ ಪ್ರಯೋಜನಗಳನ್ನು ಕಡಿಮೆ ಮಾಡಬಹುದು. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್‌ಗಳೊಂದಿಗೆ ಸಮತೋಲಿತ ಆಹಾರದಲ್ಲಿ ಮೊಸರನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ. ನಿಯಮಿತ ವ್ಯಾಯಾಮದೊಂದಿಗೆ, ಮಧುಮೇಹದ ಅಪಾಯವನ್ನು ನಿರ್ವಹಿಸಲು ಮತ್ತು ಕಡಿಮೆ ಮಾಡಲು ಇದು ನಿರ್ಣಾಯಕವಾಗಿದೆ ಎಂದು ಆಹಾರ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: Skin Care: ಮುಖದ ಕಾಂತಿ ಹೆಚ್ಚಲು ಮೊಸರು ಬಳಸುವುದು ಹೇಗೆ?
ಮಧುಮೇಹದ ವಿರುದ್ಧ ಹೋರಾಡುವುದಲ್ಲದೆ, ಮೊಸರಿನಲ್ಲಿ ಲ್ಯಾಕ್ಟೋಬಾಸಿಲಸ್ ಕೇಸಿ, ಸ್ಟ್ರೆಪ್ಟೋಕಾಕಸ್ ಥರ್ಮೋಫಿಲಸ್ ಮತ್ತು ಬೈಫಿಡೋಬ್ಯಾಕ್ಟೀರಿಯಂ ಜಾತಿಯ ಉಪಸ್ಥಿತಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಸ್ಥೂಲಕಾಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಯಕೃತ್ತನ್ನು ಆರೋಗ್ಯಕರವಾಗಿರಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ