ಡಯಾಬಿಟಿಸ್​ಗೂ ತುರಿಕೆಗೂ ಏನು ಸಂಬಂಧ?; ಇದನ್ನು ನಿಯಂತ್ರಿಸೋದು ಹೇಗೆ?

ವ್ಯಕ್ತಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾದಾಗ ಮಧುಮೇಹ ಉಂಟಾಗುತ್ತದೆ. ಈ ಆರೋಗ್ಯ ಸಮಸ್ಯೆ ಸಾಮಾನ್ಯವಾಗಿ ದೃಷ್ಟಿ ಸಮಸ್ಯೆಗಳು, ಕಿಡ್ನಿ ವೈಫಲ್ಯ ಮತ್ತು ಹೃದಯಾಘಾತಗಳಿಗೆ ಸಂಬಂಧಿಸಿದೆ. ಮಧುಮೇಹಿಗಳು ತಮ್ಮ ಆಹಾರ, ಜೀವನಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಡಯಾಬಿಟಿಸ್​ಗೂ ತುರಿಕೆಗೂ ಏನು ಸಂಬಂಧ?; ಇದನ್ನು ನಿಯಂತ್ರಿಸೋದು ಹೇಗೆ?
ತುರಿಕೆImage Credit source: iStock
Follow us
|

Updated on:Feb 02, 2024 | 11:07 AM

ಮಧುಮೇಹದ (Diabetes) ಜೊತೆಗೆ ಇನ್ನೂ ಹಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕೊಂಡಿಯಾಗಿರುತ್ತವೆ. ಅದರಲ್ಲಿ ತುರಿಕೆ ಕೂಡ ಒಂದು. ಇದು ಒಂದು ಸಣ್ಣ ಸಮಸ್ಯೆ ಎಂದು ಮೇಲ್ನೋಟಕ್ಕೆ ಕಂಡರೂ ತುರಿಕೆ (Itching) ಬಹಳ ಅಹಿತಕರವಾದ ಅನುಭವ ನೀಡುತ್ತದೆ. ರಾತ್ರಿ ವೇಳೆ ತುರಿಕೆಯಿಂದ ನಿದ್ರೆ (Sleep) ಮಾಡಲು ಕೂಡ ಆಗದಂತಹ ಸ್ಥಿತಿ ಉಂಟಾಗುತ್ತದೆ. ತುರಿಕೆಯಿಂದ ಪದೇಪದೆ ಎಚ್ಚರವಾಗುತ್ತದೆ. ಮಧುಮೇಹ ಮತ್ತು ತುರಿಕೆ ಹೇಗೆ ಸಂಪರ್ಕ ಹೊಂದಿದೆ ಮತ್ತು ಮಧುಮೇಹಿಗಳಲ್ಲಿ ತುರಿಕೆ ನಿಲ್ಲಿಸುವ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮಧುಮೇಹಿಗಳು ದೇಹದ ಯಾವ ಭಾಗದಲ್ಲಿ ಬೇಕಾದರೂ ತುರಿಕೆ ಅನುಭವಿಸಬಹುದು. ವಿಶೇಷವಾಗಿ ಕೆಳಗಿನ ಕಾಲುಗಳು ಮತ್ತು ಪಾದಗಳಲ್ಲಿ ತುರಿಕೆ ಹೆಚ್ಚಾಗಿ ಸಂಭವಿಸುತ್ತದೆ. 2021 ರ ಅಧ್ಯಯನವು ಟೈಪ್ 2 ಡಯಾಬಿಟಿಸ್ ಹೊಂದಿರುವ 109 ವಯಸ್ಕರಲ್ಲಿ ಶೇ. 36ರಷ್ಟು ಜನರು ತುರಿಕೆ ಅನುಭವಿಸುತ್ತಾರೆ ಎಂದು ಕಂಡುಹಿಡಿದಿದೆ. ಇದು ಅವರ ಜೀವನದ ಗುಣಮಟ್ಟದ ಮೇಲೆ ನೆಗೆಟಿವ್ ಪರಿಣಾಮಗಳನ್ನು ಬೀರುತ್ತದೆ. ಮಧುಮೇಹಿಗಳಲ್ಲಿ ತುರಿಕೆ ಹೆಚ್ಚಾಗಲು ಕಾರಣಗಳು ಇಲ್ಲಿವೆ.

ಇದನ್ನೂ ಓದಿ: ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆಗೆ ಜೇನುತುಪ್ಪವನ್ನು ಈ ರೀತಿ ಬಳಸಿ

ಒಣ ಚರ್ಮ:

ಮಧುಮೇಹವು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಮಧುಮೇಹದಲ್ಲಿ ಹೆಚ್ಚುವರಿ ಸಕ್ಕರೆಯನ್ನು ಫಿಲ್ಟರ್ ಮಾಡಲು ಮತ್ತು ಹೀರಿಕೊಳ್ಳಲು ಮೂತ್ರಪಿಂಡಗಳು ಹೆಚ್ಚುವರಿಯಾಗಿ ಕೆಲಸ ಮಾಡುತ್ತವೆ. ಇದು ಸಾಧ್ಯವಾಗದಿದ್ದಾಗ ಹೆಚ್ಚುವರಿ ಸಕ್ಕರೆ ಅಂಶ ಮೂತ್ರಕ್ಕೆ ಹೋಗುತ್ತದೆ. ಆಗ ಅದು ದೇಹದ ಅಂಗಾಂಶಗಳಿಂದ ದ್ರವವನ್ನು ತೆಗೆದುಕೊಳ್ಳುತ್ತದೆ. ಇದು ಶುಷ್ಕ ಚರ್ಮಕ್ಕೆ ಕಾರಣವಾಗುವ ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಇದರಿಂದ ತುರಿಕೆ ಉಂಟಾಗುತ್ತದೆ.

ನರರೋಗ:

ಮಧುಮೇಹದಲ್ಲಿ ನರಗಳ ಹಾನಿ ಸಾಮಾನ್ಯವಾಗಿದೆ. ಇದು ತುರಿಕೆಯನ್ನು ಉಂಟುಮಾಡಬಹುದು.

ಯೀಸ್ಟ್ ಸೋಂಕುಗಳು:

ರಕ್ತದಲ್ಲಿನ ಹೆಚ್ಚಿದ ಸಕ್ಕರೆ ಮಟ್ಟವು ಯೀಸ್ಟ್ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ತುರಿಕೆಗೆ ಕಾರಣವಾಗುತ್ತದೆ. ವಿಶೇಷವಾಗಿ ದೇಹದ ಬೆಚ್ಚಗಿನ ಮತ್ತು ತೇವಾಂಶದ ಪ್ರದೇಶಗಳಲ್ಲಿ ತುರಿಕೆ ಹೆಚ್ಚಾಗುತ್ತದೆ.

ರೋಗನಿರೋಧಕ ಶಕ್ತಿಯ ಕೊರತೆ:

ಮಧುಮೇಹವು ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಚರ್ಮವು ಸೋಂಕುಗಳು ಮತ್ತು ತುರಿಕೆಗೆ ಹೆಚ್ಚು ಒಳಗಾಗುತ್ತದೆ.

ಮಧುಮೇಹದ ತುರಿಕೆ ಇತರ ಆರೋಗ್ಯ ಸಮಸ್ಯೆಗಳನ್ನೂ ಸೂಚಿಸುತ್ತದೆ. ಇದು ಅನಿಯಂತ್ರಿತ ರಕ್ತದಲ್ಲಿನ ಸಕ್ಕರೆ ಮಟ್ಟಗಳು, ಚರ್ಮದ ಸೋಂಕಿನಂತಹ ಸಮಸ್ಯೆಗಳನ್ನು ಸೂಚಿಸುತ್ತದೆ.

ಮಧುಮೇಹಿಗಳಲ್ಲಿ ತುರಿಕೆಗೆ ಚಿಕಿತ್ಸೆ ನೀಡುವುದು ಹೇಗೆ?:

ಉತ್ತಮ ಮಾಯಿಶ್ಚರೈಸರ್:

ನಿಮ್ಮ ಚರ್ಮವನ್ನು ಚೆನ್ನಾಗಿ ಹೈಡ್ರೀಕರಿಸಿ, ಒಳ ಮತ್ತು ಹೊರ ಜಲಸಂಚಯನ ಎರಡೂ ಮುಖ್ಯ. ಸಾಕಷ್ಟು ನೀರು ಮತ್ತು ಇತರ ದ್ರವ ಪಾನೀಯಗಳನ್ನು ಕುಡಿಯಿರಿ. ಮಾಯಿಶ್ಚರೈಸರ್ ಬಳಸಿ ನಿಮ್ಮ ಚರ್ಮವನ್ನು ಚೆನ್ನಾಗಿ ತೇವಗೊಳಿಸಿಕೊಳ್ಳಿ.

ಇದನ್ನೂ ಓದಿ: ಕಾಫಿ ವರ್ಸಸ್ ಟೀ; ನಿಮ್ಮ ಚರ್ಮಕ್ಕೆ ಯಾವುದರ ಸೇವನೆ ಒಳ್ಳೆಯದು?

ಆ್ಯಂಟಿಫಂಗಲ್ ಕ್ರೀಂ:

ನೀವು ಆ್ಯಂಟಿಫಂಗಲ್ ಕ್ರೀಮ್‌ಗಳನ್ನು ಬಳಸುವುದು ಉತ್ತಮ. ಅದು ಯೀಸ್ಟ್ ಸೋಂಕನ್ನು ಎದುರಿಸಲು ಮತ್ತು ತುರಿಕೆ ತಡೆಯಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ:

ಮಧುಮೇಹಿಗಳು ಸ್ಥಿರವಾದ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ವಿವಿಧ ವಿಷಯಗಳ ನಡುವೆ, ಇದು ಚರ್ಮದ ಶುಷ್ಕತೆ ಮತ್ತು ತುರಿಕೆ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಕೂಲ್ ಕಂಪ್ರೆಸಸ್:

ಕೂಲ್ ಕಂಪ್ರೆಸ್ ಕಿರಿಕಿರಿಗೊಂಡ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದು ತುರಿಕೆಯನ್ನು ಕಡಿಮೆ ಮಾಡಲು ಗಮನಾರ್ಹವಾಗಿ ಸಹಾಯ ಮಾಡುತ್ತದೆ. ಸ್ನಾನ ಮಾಡಲು ಬಿಸಿನೀರಿನ ಬದಲು ಉಗುರುಬೆಚ್ಚನೆಯ ನೀರನ್ನು ಬಳಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Thu, 1 February 24

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ