Diabetes: ಮಧುಮೇಹಕ್ಕೂ ಶ್ರವಣ ಸಮಸ್ಯೆಗೂ ಸಂಬಂಧವಿದೆಯೇ?
ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟಗಳು ನಾನಾ ರೀತಿಯ ಇತರೆ ಆರೋಗ್ಯ ಸಮಸ್ಯೆಗಳನ್ನು ಕೂಡ ಉಂಟುಮಾಡುತ್ತದೆ. ಹೀಗಾಗಿ, ಸಕ್ಕರೆಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮತ್ತು ಮೊದಲೇ ಸೂಕ್ತವಾಗಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಹಾಗಾದರೆ, ಮಧುಮೇಹ ಸಮಸ್ಯೆಯಿಂದ ಶ್ರವಣ ದೋಷ ಕೂಡ ಉಂಟಾಗುತ್ತದೆಯೇ?
ನಮ್ಮ ದೇಹದ ಸ್ನಾಯುಗಳು, ಅಂಗಾಂಶಗಳು ಮತ್ತು ಮೆದುಳಿನಲ್ಲಿರುವ ಎಲ್ಲಾ ಜೀವಕೋಶಗಳಿಗೆ ಶಕ್ತಿಯ ಮೂಲವಾಗಿ ಗ್ಲೂಕೋಸ್ ಅಗತ್ಯವಿರುತ್ತದೆ. ನಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಮೇದೋಜ್ಜೀರಕ ಗ್ರಂಥಿಯಿಂದ ಬಿಡುಗಡೆ ಮಾಡುವ ‘ಇನ್ಸುಲಿನ್’ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ. ಮಧುಮೇಹ ಇರುವವರಲ್ಲಿ ಮೇದೋಜ್ಜೀರಕ ಗ್ರಂಥಿಯಿಂದ ಸ್ರವಿಸುವ ಇನ್ಸುಲಿನ್ ಅಸಮರ್ಪಕ ಪ್ರಮಾಣದಲ್ಲಿರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದನ್ನು ಸಾಮಾನ್ಯವಾಗಿ ಮಧುಮೇಹ ಎಂದು ಕರೆಯಲಾಗುತ್ತದೆ.
ನರ ಸಂಕೇತಗಳು ಒಳಗಿನ ಕಿವಿಯಿಂದ ನಿಮ್ಮ ಮೆದುಳಿಗೆ ಹೇಗೆ ಚಲಿಸುತ್ತವೆ ಎಂಬುದನ್ನು ಹಾನಿಗೊಳಿಸಬಹುದು. ಎರಡೂ ವಿಧದ ನರಗಳ ಹಾನಿಯು ಕಿವುಡುತನಕ್ಕೆ ಕಾರಣವಾಗಬಹುದು. ಇದು ತಜ್ಞರ ಪ್ರಕಾರ, ಮಧುಮೇಹ ಇರುವವರಲ್ಲಿ ಅದೇ ವಯಸ್ಸಿನ ಬೇರೆ ಜನರಿಗಿಂತ 2 ಪಟ್ಟು ಸಾಮಾನ್ಯವಾಗಿದೆ. ಟೈಪ್ 2 ಡಯಾಬಿಟಿಸ್ ಮತ್ತು ಶ್ರವಣ ಸಮಸ್ಯೆಯ ನಡುವಿನ ಸಂಪರ್ಕದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿ ಇಲ್ಲಿದೆ.
ಇದನ್ನೂ ಓದಿ: ಸಿಗರೇಟ್ ತ್ಯಜಿಸುವುರಿಂದ ಮಧುಮೇಹ ಸೇರಿದಂತೆ ಈ ಕಾಯಿಲೆಗಳ ಅಪಾಯ ಕಡಿಮೆ
ಪ್ರಪಂಚದಾದ್ಯಂತ ಸುಮಾರು 537 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದು ಅಧಿಕ ರಕ್ತದ ಸಕ್ಕರೆಯ ಮಟ್ಟದಿಂದ ನಿರೂಪಿಸಲ್ಪಟ್ಟಿದೆ. ಅಂಕಿಅಂಶಗಳ ಪ್ರಕಾರ, ಮಧುಮೇಹ ಹೊಂದಿರುವ ಶೇ. 90ರಿಂದ 95ರಷ್ಟು ಜನರು ಟೈಪ್ 2 ಮಧುಮೇಹವನ್ನು ಹೊಂದಿದ್ದಾರೆ. ಇದು ಯಾವುದೇ ವಯಸ್ಸಿನಲ್ಲಿ ಬೆಳೆಯಬಹುದು. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸದಿದ್ದರೆ, ನಿಮ್ಮ ಕಿವುಡುತನದ ಅಪಾಯ ಹೆಚ್ಚಾಗಬಹುದು.
ಮಧುಮೇಹದಲ್ಲಿ ಶ್ರವಣ ಸಮಸ್ಯೆ ಉಂಟಾಗಲು ಕಾರಣವೇನು?:
ಅಧ್ಯಯನಗಳ ಪ್ರಕಾರ, ಶ್ರವಣ ಸಮಸ್ಯೆ ಮಧುಮೇಹ ಹೊಂದಿರುವ ಜನರಲ್ಲಿ ಮಧುಮೇಹ ಇಲ್ಲದವರಿಗಿಂತ 2 ಪಟ್ಟು ಹೆಚ್ಚಾಗಿದೆ. ಹೆಚ್ಚಿನ ರಕ್ತದಲ್ಲಿನ ಸಕ್ಕರೆಯ ಮಟ್ಟವು ನರಗಳು ಮತ್ತು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ನೀವು ದೀರ್ಘಕಾಲದವರೆಗೆ ಮಧುಮೇಹವನ್ನು ಹೊಂದಿದ್ದರೆ ಮತ್ತು ಅದನ್ನು ಸರಿಯಾಗಿ ನಿಯಂತ್ರಿಸದಿದ್ದರೆ, ನಿಮ್ಮ ಕಿವಿಯಲ್ಲಿರುವ ಸಣ್ಣ ರಕ್ತನಾಳಗಳಿಗೆ ಹಾನಿಯಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ಮಧುಮೇಹ ಹೊಂದಿರುವ ಮಹಿಳೆಯರು ರೋಗವಿಲ್ಲದವರಿಗಿಂತ ಹೆಚ್ಚಿನ ಶ್ರವಣ ಸಮಸ್ಯೆ ಅನುಭವಿಸುತ್ತಾರೆ.
ಮಧುಮೇಹದಲ್ಲಿ ಅಧಿಕ ರಕ್ತದ ಸಕ್ಕರೆ ಮಟ್ಟವು ಒಳಗಿನ ಕಿವಿಯ ಸಣ್ಣ ರಕ್ತನಾಳಗಳಲ್ಲಿ ಹಾನಿಗೆ ಕಾರಣವಾಗಬಹುದು. ಅದರ ಕಾರ್ಯಚಟುವಟಿಕೆಗೆ ಪರಿಣಾಮ ಬೀರುತ್ತದೆ. ಅಧಿಕ ಗ್ಲೂಕೋಸ್ ಮಟ್ಟಗಳು ನರರೋಗಕ್ಕೆ ಕಾರಣವಾಗಬಹುದು, ಕಿವಿಯಿಂದ ಮೆದುಳಿಗೆ ಶ್ರವಣೇಂದ್ರಿಯ ಸಂಕೇತಗಳನ್ನು ರವಾನಿಸುವ ನರಗಳ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹ; ಈ ಲಕ್ಷಣಗಳನ್ನೆಂದೂ ನಿರ್ಲಕ್ಷ್ಯಿಸಬೇಡಿ
ಮಧುಮೇಹದಿಂದ ಉಂಟಾಗುವ ಉರಿಯೂತವು ಒಳಗಿನ ಕಿವಿಯ ಸೂಕ್ಷ್ಮ ರಚನೆಗಳ ಮೇಲೆ ಪರಿಣಾಮ ಬೀರಬಹುದು. ಇದು ಶ್ರವಣ ದೋಷಕ್ಕೆ ಕಾರಣವಾಗುತ್ತದೆ. ನಿಮ್ಮ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸಲು ನಿಮಗೆ ಕಷ್ಟವಾಗಿದ್ದರೆ ನೀವು ಶ್ರವಣ ದೋಷವನ್ನು ಹೊಂದುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.
ನೀವು ಮಧುಮೇಹ ಮತ್ತು ಶ್ರವಣ ದೋಷ ಎರಡನ್ನೂ ಹೊಂದಿದ್ದರೆ ಒಂದಕ್ಕೊಂದು ಇನ್ನೊಂದಕ್ಕೆ ಏನಾದರೂ ಸಂಬಂಧವಿದೆ ಎಂದು ಇದರ ಅರ್ಥವಲ್ಲ. ನಿಮ್ಮ ಶ್ರವಣ ಶಕ್ತಿಯನ್ನು ನೀವು ಕಳೆದುಕೊಳ್ಳುವ ಹಲವಾರು ಇತರ ಕಾರಣಗಳಿವೆ. ದೊಡ್ಡ ಶಬ್ದಕ್ಕೆ ದೀರ್ಘಕಾಲ ಒಡ್ಡಿಕೊಳ್ಳುವುದು, ವಯಸ್ಸಾಗುವುದು, ಕುಟುಂಬದಲ್ಲಿ ಯಾರಿಗಾದರೂ ಶ್ರವಣ ದೋಷ ಇದ್ದರೆ, ವೈರಸ್ ಅಥವಾ ಜ್ವರ, ಕೀಮೋಥೆರಪಿಯಂತಹ ಕೆಲವು ಔಷಧಿಗಳು ಕೂಡ ಇದಕ್ಕೆ ಕಾರಣವಾಗಿರಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Tue, 5 March 24