AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಗೆ ಕೋಪ ಬಂದಾಗ ನಿರ್ಲಕ್ಷಿಸಬೇಡಿ! ಈ 6 ಲಕ್ಷಣಗಳು ಕಂಡುಬಂದರೆ ಎಚ್ಚರ ವಹಿಸಿ

ಬಾಲ್ಯವು ತುಂಬಾ ಸೂಕ್ಷ್ಮ ಸಮಯವಾಗಿರುವುದರಿಂದ, ಮಕ್ಕಳ ಕೋಪ, ಕಿರಿಕಿರಿ ಅಥವಾ ದುಃಖವನ್ನು ಕೇವಲ ತುಂಟತನ ಎಂದು ತಳ್ಳಿಹಾಕದಿರುವುದು ಬಹಳ ಮುಖ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮಕ್ಕಳ ನಡವಳಿಕೆಯಲ್ಲಿ ಒಂದೇಸಲ ಬದಲಾವಣೆಗಳು ಕಂಡುಬರುವುದು ಅವರು ಎದುರಿಸುತ್ತಿರುವ ಮಾನಸಿಕ ಒತ್ತಡ ಅಥವಾ ಆತಂಕದ ಲಕ್ಷಣಗಳಾಗಿರಬಹುದು. ಹಾಗಾದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮಕ್ಕಳಲ್ಲಿ ಕಂಡುಬರುವ ಯಾವ ಲಕ್ಷಣವನ್ನು ನಿರ್ಲಕ್ಷಿಸಬಾರದು ಮತ್ತು ಏಕೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಕ್ಕಳಿಗೆ ಕೋಪ ಬಂದಾಗ ನಿರ್ಲಕ್ಷಿಸಬೇಡಿ! ಈ 6 ಲಕ್ಷಣಗಳು ಕಂಡುಬಂದರೆ ಎಚ್ಚರ ವಹಿಸಿ
Behavioral Changes In KidsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 19, 2026 | 7:41 PM

Share

ಮಕ್ಕಳ ಬಾಲ್ಯವು ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮಕ ಹಂತವಾಗಿರುವುದರಿಂದ ಪೋಷಕರು ಅವರ ಪಾಲನೆ, ಪೋಷಣೆ ಮಾಡುವಾಗ ಎಷ್ಟು ಜಾಗೃತಿ ವಹಿಸಿದರೂ ಸಾಲುವುದಿಲ್ಲ. ಇಂತಹ ವಯಸ್ಸಿನಲ್ಲಿ ಮಕ್ಕಳು ತಮ್ಮ ಭಯ, ಒತ್ತಡ (Stress) ಅಥವಾ ದುಃಖವನ್ನು ಸ್ಪಷ್ಟವಾಗಿ ಹೇಳಿಕೊಳ್ಳಲು ಸಾಧ್ಯವಾಗದೇ, ಅದನ್ನು ಕೋಪ, ಬೇಸರ ಅಥವಾ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ವ್ಯಕ್ತಪಡಿಸಬಹುದು. ಆದ್ದರಿಂದ ಮಕ್ಕಳ ಕೋಪವನ್ನು ಕೇವಲ ಹಠ ಎಂದು ನಿರ್ಲಕ್ಷ್ಯ ಮಾಡುವ ಬದಲು ಅವರ ಉದ್ದೇಶವೇನು, ಯಾಕೆ ಈ ರೀತಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮಕ್ಕಳಲ್ಲಿ ಕಂಡುಬರುವ ಯಾವ ಲಕ್ಷಣವನ್ನು ನಿರ್ಲಕ್ಷಿಸಬಾರದು ಮತ್ತು ಏಕೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಗಮನಿಸಬೇಕಾದ 6 ಪ್ರಮುಖ ಲಕ್ಷಣಗಳು;

ನಿರಂತರ ದುಃಖ ಅಥವಾ ಆಸಕ್ತಿ ಕಳೆದುಕೊಳ್ಳುವುದು: ಹಿಂದೆ ಇಷ್ಟಪಟ್ಟ ಆಟ, ಚಟುವಟಿಕೆಗಳ ಮೇಲೆ ಆಸಕ್ತಿ ಕಡಿಮೆಯಾಗುವುದು ಅಥವಾ ಸದಾ ಬೇಸರದಿಂದ ಇರುವುದು ಮಾನಸಿಕ ಒತ್ತಡದ ಸೂಚನೆಯಾಗಿರಬಹುದು.

ಪದೇಪದೇ ತಲೆನೋವು ಅಥವಾ ಹೊಟ್ಟೆನೋವು: ಯಾವುದೇ ದೈಹಿಕ ಕಾರಣವಿಲ್ಲದೆ ಆಗಾಗ ತಲೆನೋವು ಅಥವಾ ಹೊಟ್ಟೆನೋವಿನ ದೂರು ನೀಡುವುದು ಭಾವನಾತ್ಮಕ ಒತ್ತಡದ ಸಂಕೇತವಾಗಿರಬಹುದು.

ಅತಿಯಾದ ಕಿರಿಕಿರಿ: ಸಣ್ಣ ವಿಷಯಕ್ಕೂ ಬೇಸರಪಡುವುದು, ಕೋಪಗೊಳ್ಳುವುದು ಅಥವಾ ಅಸಹನೆ ತೋರಿಸುವುದು ಒಳಗಿರುವ ಮಾನಸಿಕ ಅಶಾಂತಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ಮಕ್ಕಳಲ್ಲಿ ಯೂರಿನ್ ಟೆಸ್ಟ್ ಮಾಡಿ ಆಟಿಸಂ ಲಕ್ಷಣಗಳನ್ನು ಪತ್ತೆಹಚ್ಚಬಹುದೇ? ಏನ್ ಹೇಳುತ್ತೆ ಅಧ್ಯಯನ?

ಭಾವನಾತ್ಮಕ ಬದಲಾವಣೆಗಳು: ಒಂದು ಕ್ಷಣ ಸಂತೋಷವಾಗಿದ್ದು, ಮತ್ತೊಂದು ಕ್ಷಣಕ್ಕೆ ದುಃಖ ಅಥವಾ ಕೋಪ ಮಾಡಿಕೊಳ್ಳುವುದು ಗಮನಿಸಬೇಕಾದ ಲಕ್ಷಣವಾಗಿದೆ.

ಸಣ್ಣ ವಿಷಯಕ್ಕೂ ಕೋಪ: ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಆಗಾಗ ಜಗಳವಾಡುವುದು ಕೇವಲ ಹಠವಲ್ಲ, ಸಹಾಯದ ಅಗತ್ಯವಿರಬಹುದಾದ ಸೂಚನೆಯೂ ಆಗಿರಬಹುದು.

ಸಹಾಯಕ್ಕಾಗಿ ಮೌನ ಸಂಕೇತಗಳು: ಮಕ್ಕಳ ವರ್ತನೆಯಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗದೆ ಸಹಾಯ ಕೋರುತ್ತಿರಬಹುದು.

ಪೋಷಕರು ಏನು ಮಾಡಬೇಕು?

ಮಕ್ಕಳನ್ನು ಬೈಯುವುದು ಅಥವಾ ದಂಡಿಸುವುದಕ್ಕಿಂತ, ಅವರೊಂದಿಗೆ ಸ್ನೇಹಿತರಂತೆ ಮಾತನಾಡಿ. ಪ್ರತಿದಿನ ಅವರ ಭಾವನೆಗಳನ್ನು ಆಲಿಸಿ, ಶಾಲೆ, ಸ್ನೇಹಿತರು ಹಾಗೂ ಕುಟುಂಬದ ಬಗ್ಗೆ ಮುಕ್ತವಾಗಿ ಚರ್ಚಿಸಿ. ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ, ಮಕ್ಕಳ ಮನೋವೈದ್ಯರು ಅಥವಾ ಕೌನ್ಸಿಲರ್‌ರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?